ಬಲಿಷ್ಠ ತಂಡಗಳೇ ಮಣ್ಣು ಮುಕ್ಕುತ್ತಿವೆ: ವಿಶ್ವಕಪ್‌ನಲ್ಲಿ ಕಿವೀಸ್ ವಿರುದ್ಧ ಸೋತ ಲಂಕಾ!
ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ತಂಡಗಳು ಕಣಕ್ಕಿಳಿದ್ದಿದ್ದು ತೀವ್ರ ಸ್ಪರ್ಧೆಯಿಂದ ಕೂಡಿರಬೇಕಾಗಿತ್ತು. ಆದರೆ ಬಲಿಷ್ಠ ತಂಡಗಳೇ ಅಲ್ಪ ಮೊತ್ತಕ್ಕೆ ಅಲೌಟ್ ಆಗಿ ಪಂದ್ಯಗಳು ಸೋಲುತ್ತಿವೆ.

Published On :
ಲಂಡನ್: ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ತಂಡಗಳು ಕಣಕ್ಕಿಳಿದ್ದಿದ್ದು ತೀವ್ರ ಸ್ಪರ್ಧೆಯಿಂದ ಕೂಡಿರಬೇಕಾಗಿತ್ತು. ಆದರೆ ಬಲಿಷ್ಠ ತಂಡಗಳೇ ಅಲ್ಪ ಮೊತ್ತಕ್ಕೆ ಅಲೌಟ್ ಆಗಿ ಪಂದ್ಯಗಳು ಸೋಲುತ್ತಿವೆ.
ಲಂಡನ್ ನ ಕಾರ್ಡಿಫ್ ನಲ್ಲಿ ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ 10 ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 29.2 ಓವರ್ ನಲ್ಲೇ ಕೇವಲ 136 ರನ್ ಗಳಿಗೆ ಸರ್ವಪತನ ಕಂಡಿತು. 137 ರನ್ ಗಳು ಸುಲಭ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ತಂಡ 16.1 ಓವರ್ ನಲ್ಲೇ ಸ್ಫೋಟಕ ಬ್ಯಾಟಿಂಗ್ ಮಾಡಿ 137 ರನ್ ಪೇರಿಸಿ ಗೆಲುವಿನ ನಗೆ ಬೀರಿತು. ನ್ಯೂಜಿಲ್ಯಾಂಡ್ ಪರ ಮಾರ್ಟಿನ್ ಗುಪ್ಟಿಲ್ ಅಜೇಯ 73 ಮತ್ತು ಮನ್ರೋ ಅಜೇಯ 58 ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಲಂಕಾ ಪರ ದಿಮುತ್ ಕರುಣರತ್ನೆ ಅಜೇಯ 52, ಕುಶಾಲ್ ಪೆರೆರಾ 29, ತಿಸಾರ ಪೆರೆರಾ 27 ರನ್ ಪೇರಿಸಿದ್ದಾರೆ. ನ್ಯೂಜಿಲ್ಯಾಂಡ್ ಪರ ಬೌಲಿಂಗ್ ನಲ್ಲಿ ಮ್ಯಾಟ್ ಹೆನ್ರಿ ಮತ್ತು ಫರ್ಗ್ಯೂಸನ್ ತಲಾ 3 ವಿಕೆಟ್, ಬೌಲ್ಟ್, ಗ್ರ್ಯಾಂಡ್ ಹೋಮ್, ನೀಶಾಮ್ ಮತ್ತು ಸ್ಯಾನ್ಟರ್ ತಲಾ 1 ವಿಕೆಟ್ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


