ವಿಶ್ವಕಪ್ ಟೂರ್ನಿಯಲ್ಲೂ ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್ ದಾಖಲೆ!
ವೆಸ್ಟ್ ಇಂಡೀಸ್ ತಂಡದ ದೈತ್ಯ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಐಸಿಸಿ ವಿಶ್ವಕಪ್ ಟೂರ್ನಿಯ ಆರಂಭದಲ್ಲೇ ಭರ್ಜರಿ ಬ್ಯಾಟಿಂಗ್ ಮೂಲಕ ಐತಿಹಾಸಿಕ ಸಾಧನೆ ಗೈದಿದ್ದಾರೆ.

Published On :
ಲಂಡನ್: ವೆಸ್ಟ್ ಇಂಡೀಸ್ ತಂಡದ ದೈತ್ಯ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಐಸಿಸಿ ವಿಶ್ವಕಪ್ ಟೂರ್ನಿಯ ಆರಂಭದಲ್ಲೇ ಭರ್ಜರಿ ಬ್ಯಾಟಿಂಗ್ ಮೂಲಕ ಐತಿಹಾಸಿಕ ಸಾಧನೆ ಗೈದಿದ್ದಾರೆ.
ಹೌದು.. ನಿನ್ನೆ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್ ಮೂರು ಸಿಕ್ಸರ್ ಸಿಡಿಸುವ ಮೂಲಕ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಈ ಮೂರು ಸಿಕ್ಸರ್ ಗಳ ನೆರವಿನಿಂದಾಗಿ ಕ್ರಿಸ್ ಗೇಯ್ಲ್ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಸಿಕ್ಸರ್ ಗಳ ಗಳಿಕೆಯನ್ನು 40ಕ್ಕೆ ಏರಿಕೆ ಮಾಡಿಕೊಂಡಿದ್ದಾರೆ. ಅಲ್ಲದೆ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಗಳನ್ನು ಹೊಡೆದ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಅಲ್ಲದೆ ಈ ವರೆಗೂ ಈ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದ್ದ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ದಾಖಲೆಯನ್ನು ಮುರಿದರು. ಡಿವಿಲಿಯರ್ಸ್ ಒಟ್ಟು 37 ಸಿಕ್ಸರ್ ಭಾರಿಸಿ ಪಟ್ಟಿಯಲ್ಲಿ ಅಗ್ರ ಸ್ಥಾನಿಯಾಗಿದ್ದರು.
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಅತೀ ಹೆಚ್ಚು ಸಿಕ್ಸರ್ ಭಾರಿಸಿದ ವಿಶ್ವದ ಬ್ಯಾಟ್ಸ್ ಮನ್ ಗಳ ಪಟ್ಟಿ ಇಂತಿದೆ.
ಕ್ರಿಸ್ ಗೇಯ್ಲ್ (ವೆಸ್ಟ್ ಇಂಡೀಸ್)- 40 ಸಿಕ್ಸರ್ ಗಳು
ಎಬಿ ಡಿವಿಲಿಯರ್ಸ್ (ದಕ್ಷಿಣ ಆಫ್ರಿಕಾ)- 37 ಸಿಕ್ಸರ್ ಗಳು
ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ)- 31 ಸಿಕ್ಸರ್ ಗಳು
ಬ್ರೆಂಡನ್ ಮೆಕ್ಕಲಮ್ (ನ್ಯೂಜಿಲೆಂಡ್)- 29 ಸಿಕ್ಸರ್ ಗಳು
ಹರ್ಷೆಲ್ ಗಿಬ್ಸ್ (ದಕ್ಷಿಣ ಆಫ್ರಿಕಾ)- 28 ಸಿಕ್ಸರ್ ಗಳು
ಸಚಿನ್ ತೆಂಡೂಲ್ಕರ್ (ಭಾರತ)- 27 ಸಿಕ್ಸರ್ ಗಳು
ಸನತ್ ಜಯಸೂರ್ಯ (ಶ್ರೀಲಂಕಾ)- 27 ಸಿಕ್ಸರ್ ಗಳು
ಸೌರವ್ ಗಂಗೂಲಿ (ಭಾರತ)- 25 ಸಿಕ್ಸರ್ ಗಳು
ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯಾ)- 23 ಸಿಕ್ಸರ್ ಗಳು
ವಿವಿಯನ್ ರಿಚರ್ಡ್ಸ್ (ವೆಸ್ಟ್ ಇಂಡೀಸ್) 22 ಸಿಕ್ಸರ್ ಗಳು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಕ್ರಿಕೆಟ್Londonಲಂಡನ್West indiesChris Gayleಕ್ರಿಸ್ ಗೇಯ್ಲ್ವೆಸ್ಟ್ ಇಂಡೀಸ್Cricket Offbeatಐಸಿಸಿ ವಿಶ್ವಕಪ್ ಟೂರ್ನಿ 2019ICC Word Cup 2019
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


