ಹಲವು ಯುವತಿಯರೊಂದಿಗೆ ಸಂಬಂಧ; ಟ್ವಿಟರ್ ನಲ್ಲಿ ಪಾಕ್ ಕ್ರಿಕೆಟಿಗನ ಮಾನ ಹರಾಜು ಹಾಕಿದ ಖಾತೆದಾರ!
ಇಮಾಮ್ ಉಲ್ ಹಕ್ ವಿವಾದದಲ್ಲಿ ಸಿಲುಕಿದ್ದು, ಆತ ಹಲವು ಯುವತಿಯರೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ಟ್ವಿಟರ್ ಖಾತೆದಾರರೊಬ್ಬರು ಅವರ ಖಾಸಗಿ ಚಾಟಿಂಗ್ ನ ಸ್ತ್ರೀನ್ ಶಾಟ್ ಗಳನ್ನು ಅಪ್ಲೋಡ್ ಮಾಡಿದ್ದಾರೆ.

Published On :
ಇಸ್ಲಾಮಾಬಾದ್: ಪಾಕಿಸ್ತಾನದ ಉದಯೋನ್ಮುಖ ಕ್ರಿಕೆಟಿಗ ಇಮಾಮ್ ಉಲ್ ಹಕ್ ವಿವಾದದಲ್ಲಿ ಸಿಲುಕಿದ್ದು, ಆತ ಹಲವು ಯುವತಿಯರೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ಟ್ವಿಟರ್ ಖಾತೆದಾರರೊಬ್ಬರು ಅವರ ಖಾಸಗಿ ಚಾಟಿಂಗ್ ನ ಸ್ತ್ರೀನ್ ಶಾಟ್ ಗಳನ್ನು ಅಪ್ಲೋಡ್ ಮಾಡಿದ್ದಾರೆ.
ಪಾಕಿಸ್ತಾನ ಕ್ರಿಕೆಟಿಗರಿಗೂ ಮತ್ತು ವಿವಾದಕ್ಕೂ ಎಲ್ಲಿಲ್ಲದ ನಂಟು.. ಪ್ರತೀ ಬಾರಿ ಒಂದಿಲ್ಲೊಂದು ವಿವಾದಗಳ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಈದೀಗ ಇದೇ ಮತ್ತೊಂದು ವಿವಾದದ ಸಂಬಂಧ ಪಾಕಿಸ್ತಾನದ ಉದಯೋನ್ಮುಖ ಕ್ರಿಕೆಟಿಗ ಇಮಾಮ್ ಉಲ್ ಹಕ್ ಅವರ ಹೆಸರು ಕೇಳಿಬಂದಿದ್ದು, ಇಮಾನ್ ಹಲವು ಯುವತಿಯರೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಕುರಿತಂತೆ ಟ್ವಿಟರ್ ಖಾತೆದಾರರೊಬ್ಬರು ಇಮಾಮ್ ಉಲ್ ಹಕ್ ಅವರು ಮಾಡಿದ್ದಾರೆ ಎನ್ನಲಾದ ಖಾಸಗಿ ಚಾಟಿಂಗ್ ಗಳ ಮೊಬೈಲ್ ಸ್ಕ್ರೀನ್ ಶಾಟ್ ಗಳನ್ನು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಆ ಮೂಲಕ ಇಮಾಮ್ ಉಲ್ ಹಕ್ ಅವರ ಮಾನ ಹರಾಜು ಹಾಕಿದ್ದಾರೆ.
ಟ್ವಿಟರ್ ಖಾತೆದಾರ ಲಾಲಾಲಾಯಲಿಸ್ಟ್(@LalaLoyalist)ಎಂಬುವವರು ಈ ಕುರಿತು ಆರೋಪಗಳ ಸುರಿಮಳೆಯನ್ನೇ ಮಾಡಿದ್ದು, ಇಮಾಮ್ ಉಲ್ ಹಕ್ ಕನಿಷ್ಠ 7-8 ಯುವತಿಯರೊಂದಿಗೆ ಸಂಬಂಧ ಹೊಂದಿದ್ದಾನೆ. ಯಾವುದೇ ಹೊಸ ಹುಡುಗಿಯ ಪರಿಚಯ ಮಾಡಿಕೊಳ್ಳುವಾಗ ಆತ ತಾನಿನ್ನೂ ಸಿಂಗಲ್ ಎಂದು ಹೇಳಿಕೊಳ್ಳುತ್ತಾನೆ. ಅಲ್ಲದೆ ತನ್ನ ಮೊಬೈಲ್ ನಲ್ಲಿರುವ ಚಾಟಿಂಗ್ ಮಾಹಿತಿಯನ್ನು ಆತ ಮುಂಜಾಗ್ರತಾ ಕ್ರಮವಾಗಿ ಡಿಲೀಟ್ ಮಾಡುತ್ತಿರುತ್ತಾನೆ. ಆದರೆ ನಾನು ಅದರ ಸ್ಕ್ರೀನ್ ಶಾಟ್ ಸಂಗ್ರಹಿಸಿ ಅಪ್ಲೋಡ್ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಕಳೆದ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಫಾರ್ಮ್ ನಲ್ಲಿದ್ದ ಇಮಾಮ್ ಉಲ್ ಹಕ್ ಪಾಕ್ ಪರ ಒಟ್ಟು 8 ಪಂದ್ಯಗಳನ್ನಾಡಿ, 305 ರನ್ ಪೇರಿಸಿದ್ದರು. ಈ ಪೈಕಿ ಒಂದು ಶತಕ ಮತ್ತು ಒಂದು ಅರ್ಧಶತಕ ಕೂಡ ಸೇರಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


