ಕಾಶ್ಮೀರದಲ್ಲಿ 15 ದಿನಗಳ ಕಾಲ ಲೆಪ್ಟಿನೆಂಟ್ ಕರ್ನಲ್ ಧೋನಿ ಕರ್ತವ್ಯ ನಿರ್ವಹಣೆ
ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಎಂ.ಎಸ್ ಧೋನಿ ಅವರನ್ನು 15 ದಿನಗಳ ಕಾಲ ಕಣಿವೆ ರಾಜ್ಯ ಜಮ್ಮು- ಕಾಶ್ಮೀರದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ಈ ಅವಧಿಯಲ್ಲಿ ಅವರು ಸೇನೆಯೊಂದಿಗೆ ಇದ್ದು, ಗಸ್ತು, ಕಾವಲು ಕರ್ತವ್ಯಗಳನ್ನು ನಿರ್ವಹಿಸಲಿದ್ದಾರೆ.

Published On :
ಜಮ್ಮು-ಕಾಶ್ಮೀರ:ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಎಂ.ಎಸ್ ಧೋನಿ ಅವರನ್ನು 15 ದಿನಗಳ ಕಾಲ ಕಣಿವೆ ರಾಜ್ಯ ಜಮ್ಮು- ಕಾಶ್ಮೀರದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ಈ ಅವಧಿಯಲ್ಲಿ ಅವರು ಸೇನೆಯೊಂದಿಗೆ ಇದ್ದು, ಗಸ್ತು, ಕಾವಲು ಕರ್ತವ್ಯಗಳನ್ನು ನಿರ್ವಹಿಸಲಿದ್ದಾರೆ.
ಲೆಪ್ಟಿನೆಂಟ್ ಕರ್ನಲ್ ಗೌರವ ಹೊಂದಿರುವ ಎಂಎಸ್ ಧೋನಿ ಕ್ರಿಕೆಟ್ ನಿಂದ ಎರಡು ತಿಂಗಳ ಕಾಲ ವಿರಾಮ ಪಡೆದುಕೊಂಡಿದ್ದು, ಜುಲೈ 31ರಿಂದ ಆಗಸ್ಟ್ 15ರವರೆಗೂ 106 ಕಾಲಾಳುಪಡೆ ಬೆಟಾಲಿಯನ್ ನಲ್ಲಿ ಸೇವೆ ಸಲ್ಲಿಸಲಿದ್ದಾರೆ.
ಒಂದು ಕಾಲದಲ್ಲಿ ಟೀಂ ಇಂಡಿಯಾದ ಯಶಸ್ವಿ ನಾಯಕರಾಗಿದ್ದ ಮಹೇಂದ್ರ ಸಿಂಗ್ ಧೋನಿ , ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ತಾವೇ ಸ್ವತ: ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದರು.
2011 ರಲ್ಲಿ ಭಾರತೀಯ ಸೇನೆಯಿಂದ ಲೆಫ್ಟಿನೆಂಟ್ ಕರ್ನಲ್ ಗೌರವ ಪಡೆದಿದ್ದ ಧೋನಿ ಪ್ರಾದೇಶಿಕ ಸೈನ್ಯದ 106 ಕಾಲಾಳುಪಡೆ ಬೆಟಾಲಿಯನ್‌ಗೆ ಸೇರಿದ್ದಾರೆ.ನಾಲ್ಕು ವರ್ಷಗಳ ಹಿಂದೆ ಆಗ್ರಾ ತರಬೇತಿ ಶಿಬಿರದಲ್ಲಿ ಭಾರತೀಯ ವಾಯುಪಡೆ ವಿಮಾನಗಳಿಂದ 5 ಧುಮುಕುಕೊಡೆ ಜಿಗಿತ ತರಬೇತಿ ( ಪ್ಯಾರಾಚೂಟ್ ಟ್ರೇನಿಂಗ್ ಜಂಪ್ಸ್ ) ಪೂರ್ಣಗೊಳಿಸಿ ಪ್ಯಾರಾಟ್ರೂಪರ್ ಆಗಿ ಹೊರಹೊಮ್ಮಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Mahendra Singh Dhoniಕಾಶ್ಮೀರ ಕಣಿವೆKashmir ValleyನಿಯೋಜನೆLt ColDeployed ಮಹೇಂದ್ರ ಸಿಂಗ್ ಧೋನಿಲೆಟ್ಪಿನೆಂಟ್ ಕರ್ನಲ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


