ಸೂಪರ್ ಓವರ್‌ನಲ್ಲಿ ನಿಶಾಮ್ ಸಿಕ್ಸರ್ ನೋಡಿ ಉದ್ವೇಗಕ್ಕೊಳಗಾಗಿದ್ದ ಬಾಲ್ಯದ ಕೋಚ್ ಸಾವು!
ನ್ಯೂಜಿಲೆಂಡ್ ತಂಡದ ಜಿಮ್ಮಿ ನಿಶಾಮ್ ಅವರ ಶಾಲೆಯ ಶಿಕ್ಷಕ ಹಾಗೂ ಕೋಚ್ ಡೇವಿಡ್ ಜೇಮ್ಸ್ ಗೊರ್ಡನ್ ಅವರು ಐಸಿಸಿ ವಿಶ್ವಕಪ್ ಫೈನಲ್ ಬಳಿಕ ಕೊನೆಯುಸಿರೆಳೆದಿದ್ದಾರೆ.

Published On :
ಅಕ್ಲೆಂಡ್: ನ್ಯೂಜಿಲೆಂಡ್ ತಂಡದ ಜಿಮ್ಮಿ ನಿಶಾಮ್ ಅವರ ಶಾಲೆಯ ಶಿಕ್ಷಕ ಹಾಗೂ ಕೋಚ್ ಡೇವಿಡ್ ಜೇಮ್ಸ್ ಗೊರ್ಡನ್ ಅವರು ಐಸಿಸಿ ವಿಶ್ವಕಪ್ ಫೈನಲ್ ಬಳಿಕ ಕೊನೆಯುಸಿರೆಳೆದಿದ್ದಾರೆ.
ಕಳೆದ ಭಾನುವಾರ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದ ಸೂಪರ್ ಓವರ್‌ನಲ್ಲಿ ಜಿಮ್ಮಿ ನಿಶಾಮ್ ಅವರು ಸಿಕ್ಸರ್ ಬಾರಿಸಿದ ಬಳಿಕ ಅವರ ಶಾಲೆಯ ವ್ಯಾಕರಣ ಶಿಕ್ಷಕ ಹಾಗೂ ಕೋಚ್ ಡೇವಿಡ್ ಜೇಮ್ಸ್ ಗೊರ್ಡನ್ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು. ನಂತರ ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದರು.
ಚೊಚ್ಚಲ ವಿಶ್ವಕಪ್ ಗೆಲ್ಲುವಲ್ಲಿ ವಿಫಲವಾದ ನೋವಿನಲ್ಲಿದ್ದ ಜಿಮ್ಮಿ ನಿಶಾಮ್‌ಗೆ ತನ್ನ ಬಾಲ್ಯದ ಕೋಚ್ ಸಾವು ಇನ್ನಷ್ಟು ನೋವು ಉಂಟಾಯಿತು. ಈ ಬಗ್ಗೆ ಟ್ವಿಟ್ ಮಾಡಿದ್ದ ಅವರು, "ಡೇವಿಡ್ ಜೇಮ್ಸ್ ಗೊರ್ಡನ್ ಅವರು ನನ್ನ ಫ್ರೌಡಶಾಲೆಯ ಶಿಕ್ಷಕರು, ಕೋಚ್ ಹಾಗೂ ಸ್ನೇಹಿತರಾಗಿದ್ದರು. ಕ್ರಿಕೆಟ್ ಬಗ್ಗೆ ನಿಮಗಿದ್ದ ಪ್ರೀತಿ ಅಗಾದವಾಗಿತ್ತು. ವಿಶೇಷವಾಗಿ ನಿಮ್ಮ ಅಡಿಯಲ್ಲಿ ಆಡಿದ ನಾವು ಅದೃಷ್ಟವಂತರು. ಫೈನಲ್ ರೋಚಕ ಪಂದ್ಯವನ್ನು ಕಣ್ತುಂಬಿಕೊಂಡು ನಮ್ಮ ಬಗ್ಗೆ ಹೆಮ್ಮೆಪಟ್ಟಿರಬಹುದು ಎಂದು ಭಾವಿಸುತ್ತೇನೆ. ನಿಮ್ಮ ಎಲ್ಲರ ಪ್ರೀತಿ ವಿಶ್ವಾಸಕ್ಕೂ ಧನ್ಯವಾದಗಳು. ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್New Zealandನ್ಯೂಜಿಲ್ಯಾಂಡ್World Cup 2019ವಿಶ್ವಕಪ್ 2019Super Overಸೂಪರ್ ಓವರ್Jimmy Neeshamಜಿಮ್ಮಿ ನಿಶಾಮ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


