ವಿಶ್ವಕಪ್ ಫೈನಲ್: 2 ತಂಡಗಳ ವಿರುದ್ಧ ನಾವು ಸೋತಿದ್ದೇವೆ, ಆದರೆ ಟ್ರೋಫಿ ಗೆಲ್ಲೋದ್ಯಾರು? ಕೊಹ್ಲಿ ಹೇಳೋದೇನು?
ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ನ್ಯೂಜಿಲ್ಯಾಂಡ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಇನ್ನು ಇಂದು ನಡೆಯುತ್ತಿರುವ ಫೈನಲ್...

Published On :
ಲಂಡನ್: ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ನ್ಯೂಜಿಲ್ಯಾಂಡ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಇನ್ನು ಇಂದು ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಸೆಣೆಸುತ್ತಿರುವ ಎರಡು ತಂಡಗಳ ವಿರುದ್ಧ ಭಾರತ ಸೋತಿದೆ. ಆದರೂ ಈ ಬಾರಿ ಟ್ರೋಫಿಯನ್ನು ಯಾರು ಗೆಲ್ಲಬಹುದೆಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಲೀಗ್ ಹಂತದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಸೋಲು ಕಂಡಿತ್ತು. ಆದರೆ ಅಷ್ಟೇನು ಬಲಿಷ್ಠವಲ್ಲದ ನ್ಯೂಜಿಲ್ಯಾಂಡ್ ವಿರುದ್ಧ ಸೆಮಿಫೈನಲ್ ನಲ್ಲಿ ಭಾರತ 18 ರನ್ ಗಳಿಂದ ರೋಚಕ ಸೋಲು ಕಂಡಿತ್ತು.
ವಿಶ್ವಕಪ್ ಫೈನಲ್ ಕುರಿತಂತೆ ಮಾತನಾಡಿರುವ ವಿರಾಟ್ ಕೊಹ್ಲಿ ಟೂರ್ನಿಯಲ್ಲಿ ಉಭಯ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡುತ್ತಿವೆ. ಆದರೆ ನ್ಯೂಜಿಲ್ಯಾಂಡ್ ಸ್ವಲ್ಪ ಅಪಾಯಕಾರಿ. ಹುಷಾರಾಗಿ ಆಡದಿದ್ದರೆ ಕೊನೆಯ ಹಂತದಲ್ಲಿ ಕೆಡವುವ ಸಾಮರ್ಥ ಕಿವೀಸ್ ಗಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್New ZealandVirat Kohliವಿರಾಟ್ ಕೊಹ್ಲಿಇಂಗ್ಲೆಂಡ್Englandನ್ಯೂಜಿಲ್ಯಾಂಡ್ICC World Cup 2019ಐಸಿಸಿ ವಿಶ್ವಕಪ್ 2019
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


