ಕ್ರಿಕೆಟ್

ಕ್ರಿಕೆಟ್ ಇತಿಹಾಸದಲ್ಲೇ ಅತೀ ಅಪರೂಪದ ರನೌಟ್; ನಿಜಕ್ಕೂ ಕೀಪರ್ ಅದ್ಭುತ ಥ್ರೋ, ವಿಡಿಯೋ ವೈರಲ್!

ಕ್ರಿಕೆಟ್ ನಲ್ಲಿ ಕೆಲವೊಮ್ಮೆ ಆಗುವುದಿಲ್ಲ ಅಂದುಕೊಳ್ಳುವುದೆಲ್ಲವೂ ನಡೆದು ಹೋಗುತ್ತದೆ. ಅದೇ ರೀತಿ ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಸ್ಟೀವನ್ ಸ್ಮಿತ್ ಅವರು ರನೌಟ್ ಆಗಿದ್ದು ವಿಡಿಯೋ ನೋಡಿದರೆ ನೀವೂ...

ಕ್ರಿಕೆಟ್ ಇತಿಹಾಸದಲ್ಲೇ ಅತೀ ಅಪರೂಪದ ರನೌಟ್; ನಿಜಕ್ಕೂ ಕೀಪರ್ ಅದ್ಭುತ ಥ್ರೋ, ವಿಡಿಯೋ ವೈರಲ್!
ಸ್ಟೀವನ್ ಸ್ಮಿತ್
Published On :
ಲಂಡನ್: ಕ್ರಿಕೆಟ್ ನಲ್ಲಿ ಕೆಲವೊಮ್ಮೆ ಆಗುವುದಿಲ್ಲ ಅಂದುಕೊಳ್ಳುವುದೆಲ್ಲವೂ ನಡೆದು ಹೋಗುತ್ತದೆ. ಅದೇ ರೀತಿ ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಸ್ಟೀವನ್ ಸ್ಮಿತ್ ಅವರು ರನೌಟ್ ಆಗಿದ್ದು ವಿಡಿಯೋ ನೋಡಿದರೆ ನೀವೂ ಬಿದ್ದು ಬಿದ್ದು ನಗುತ್ತೀರಾ.
ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಸ್ಮಿತ್ 119 ಎಸೆತದಲ್ಲಿ 85 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದರು. ಇಂಗ್ಲೆಂಡ್ ತಂಡ ಬೌಲರ್ ವೋಕ್ಸ್ ಎಸೆತದಲ್ಲಿ ರನ್ ತೆಗೆದುಕೊಳ್ಳಲು ಮುಂದಾದರೂ ಆದರೆ ಕೀಪರ್ ಚೆಂಡನ್ನು ವಿಕೆಟ್ ಗೆ ಥ್ರೋ ಮಾಡಿದರು. 
ಕ್ರಿಸ್ ಮುಟ್ಟಬೇಕು ಎಂಬ ಆತುರದಲ್ಲಿ ಸ್ಮಿತ್ ವೇಗವಾಗಿ ಓಡುತ್ತಿದ್ದರು. ಈ ವೇಳೆ ಬಟ್ಲರ್ ಎಸೆದ ಚೆಂಡು ಸ್ಮಿತ್ ತೊಡೆಯ ಮಧ್ಯದಲ್ಲಿ ಸಾಗಿ ವಿಕೆಟ್ ಬಡಿಯಿತು. ಈ ಮೂಲಕ ಸ್ಮಿತ್ ರನೌಟ್ ಆದರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ 8 ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.