ಕ್ರಿಕೆಟ್

'ಬಿಟ್ಸ್ ಅಂಡ್ ಪೀಸಸ್': ಜಡೇಜಾ ಕುರಿತ ನನ್ನ ಎಲ್ಲ ಭಾವನೆ ಬದಲಾಗಿದೆ: ಸಂಜಯ್ ಮಂಜ್ರೇಕರ್

ಸುಖಾ ಸುಮ್ಮನೆ ಟೀಕೆ ಮಾಡಿ ಸಂಕಷ್ಟಕ್ಕೆ ಸಿಲುಕಬೇಡಿ ಎಂದು.. ಇದಕ್ಕೆ ಸ್ಪಷ್ಟ ಉದಾಹರಣೆ ಭಾರತ ಮಾಜಿ ಕ್ರಿಕೆಟಿಗ ಮತ್ತು ಹಾಲಿ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್..

'ಬಿಟ್ಸ್ ಅಂಡ್ ಪೀಸಸ್': ಜಡೇಜಾ ಕುರಿತ ನನ್ನ ಎಲ್ಲ ಭಾವನೆ ಬದಲಾಗಿದೆ: ಸಂಜಯ್ ಮಂಜ್ರೇಕರ್
ಸಂಗ್ರಹ ಚಿತ್ರ
Published On :
ಲಂಡನ್: ಇದಕ್ಕೇ ಹೇಳೋದು ಯಾವುದೇ ವ್ಯಕ್ತಿಯನ್ನು ಟೀಕೆ ಮಾಡುವ ಮುನ್ನ ನೂರು ಬಾರಿ ಯೋಚಿಸಿ.. ಸುಖಾ ಸುಮ್ಮನೆ ಟೀಕೆ ಮಾಡಿ ಸಂಕಷ್ಟಕ್ಕೆ ಸಿಲುಕಬೇಡಿ ಎಂದು.. ಇದಕ್ಕೆ ಸ್ಪಷ್ಟ ಉದಾಹರಣೆ ಭಾರತ ಮಾಜಿ ಕ್ರಿಕೆಟಿಗ ಮತ್ತು ಹಾಲಿ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್..
ಈ ಹಿಂದೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಂಜಯ್ ಮಂಜ್ರೇಕರ್, ಜಡೇಜಾರಂತಹ ಸಣ್ಣಪುಟ್ಟ ಆಟಗಾರರಿಗೆ ನಾನು ಅಭಿಮಾನಿಯಲ್ಲ ಎಂದು ಟೀಕಿಸಿದ್ದರು. ಇದು ವ್ಯಾಪಕ ವೈರಲ್ ಕೂಡ ಆಗಿತ್ತು. ಇದಕ್ಕೆ ಜಡೇಜಾ ಕೂಡ ತಮ್ಮದೇ ಆದ ಶೈಲಿಯಲ್ಲಿ ತಿರುಗೇಟು ನೀಡಿ, ವ್ಯಕ್ತಿಯ ಸಾಧನೆಗೆ ಗೌರವ ನೀಡಿ ಮಾತನಾಡುವುದನ್ನು ಕಲಿಯಿಯಿರಿ.. ನೀವು ಆಡಿರುವ ಪಂದ್ಯಗಳ ದುಪ್ಪಟ್ಟು ಸಂಖ್ಯೆಯ ಪಂದ್ಯಗಳನ್ನು ನಾನು ಆಡಿದ್ದೇನೆ ಎಂದು ತಿರುಗೇಟು ನೀಡಿದ್ದರು. 
ಈ ಕುರಿತಂತೆ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಕೂಡ ಸಂಜಯ್ ಮಂಜ್ರೇಕರ್ ಅವರ ಕಾಲೆಳೆಯುತ್ತಿದ್ದು, ಇದೇ ಕಾರಣಕ್ಕೆ ಸಂಜಯ್ ಅವರನ್ನು ಟ್ವಿಟರ್ ನಲ್ಲಿ ಬ್ಲಾಕ್ ಮಾಡಿದ್ದರು. ಆ ಮೂಲಕ ಜಡೇಜಾ ಕುರಿತಂತೆ ಹೇಳಿಕೆ ನೀಡಿ ಅಕ್ಷರಶಃ ಟ್ರೋಲ್ ಗೆ ತುತ್ತಾಗಿದ್ದರು. ಇದೀಗ ತಾವೇ ಆರಂಭಿಸಿದ್ದ ಟೀಕೆಗಳಿಗೆ ಕೊನೆಗೂ ಸಂಜಯ್ ಫುಲ್ ಸ್ಟಾಪ್ ಹಾಕುವ ಪ್ರಯತ್ನ ಮಾಡಿದ್ದು, ಜಡೇಜಾ ಕುರಿತ ನನ್ನ ಎಲ್ಲ ಭಾವನೆ ಬದಲಾಗಿದೆ ಎನ್ನುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ನಿನ್ನೆ ನ್ಯೂಜಿಲೆಂಡ್ ವಿರುದ್ಧದ ಮೊದಲ ಸೆಮಿ ಫೈನಲ್ ನಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಭಾರತ ತಂಡಕ್ಕೆ ನೆರವಾಗಿದ್ದ ರವೀಂದ್ರ ಜಡೇಜಾ ಅಮೋಘ ಬ್ಯಾಟಿಂಗ್ ಮೂಲಕ 77ರನ್ ಗಳಿಸಿ ಭಾರತ ನ್ಯೂಜಿಲೆಂಡ್ ಗೆ ಹೋರಾಟ ನೀಡುವಂತೆ ನೋಡಿಕೊಂಡರು. ಅವರ ಅದ್ಭುತ ಇನ್ನಿಂಗ್ಸ್ ಕಾರಣದಿಂದಾಗಿಯೇ ಭಾರತ ಹೀನಾಯವಾಗಿ ಸೋಲಬೇಕಿದ್ದ ಪಂದ್ಯದಲ್ಲಿ ವಿರೋಚಿತ ಸೋಲು ಕಂಡಿತು. ಇದೇ ಕಾರಣಕ್ಕೆ ಸಂಜಯ್ ಜಡೇಜಾ ಕುರಿತ ತಮ್ಮ ಅಭಿಪ್ರಾಯವನ್ನು ಬದಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.