ಕ್ರಿಕೆಟ್

ವಿಶ್ವಕಪ್ ಸೆಮಿಫೈನಲ್: ಸಂಕಷ್ಟದಲ್ಲಿ ಭಾರತ, ಆಪದ್ಭಾಂಧವ ಧೋನಿಗೆ ಮೊರೆ ಇಡುತ್ತಿರುವ ಅಭಿಮಾನಿಗಳು!

ಹಾಲಿ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ನಲ್ಲಿ ಭಾರತ ತಂಡ ಸಂಕಷ್ಟದಲ್ಲಿದ್ದು, ಕ್ರೀಸ್ ನಲ್ಲಿರುವ ಧೋನಿ ತಂಡಕ್ಕೆ ಆಪದ್ಭಾಂಧವರಾಗಲಿ ಎಂದು ಕ್ರಿಕೆಟ್ ಅಭಿಮಾನಿಗಳು ಮೊರೆ ಇಡುತ್ತಿದ್ದಾರೆ.

ವಿಶ್ವಕಪ್ ಸೆಮಿಫೈನಲ್: ಸಂಕಷ್ಟದಲ್ಲಿ ಭಾರತ, ಆಪದ್ಭಾಂಧವ ಧೋನಿಗೆ ಮೊರೆ ಇಡುತ್ತಿರುವ ಅಭಿಮಾನಿಗಳು!
ಸಂಗ್ರಹ ಚಿತ್ರ
Published On :
ಲಂಡನ್: ಹಾಲಿ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ನಲ್ಲಿ ಭಾರತ ತಂಡ ಸಂಕಷ್ಟದಲ್ಲಿದ್ದು, ಕ್ರೀಸ್ ನಲ್ಲಿರುವ ಧೋನಿ ತಂಡಕ್ಕೆ ಆಪದ್ಭಾಂಧವರಾಗಲಿ ಎಂದು ಕ್ರಿಕೆಟ್ ಅಭಿಮಾನಿಗಳು ಮೊರೆ ಇಡುತ್ತಿದ್ದಾರೆ.
ತನ್ನ ಬಲಿಷ್ಟ ಬ್ಯಾಟಿಂಗ್ ನಿಂದಲೇ ಟೂರ್ನಿಯಲ್ಲಿ ವಿಶ್ವಕಪ್ ಗೆಲ್ಲುವ ಹಾಟ್ ಫೇವರಿಟ್ ತಂಡವಾಗಿದ್ದ ಭಾರತ ತಂಡ ಇದೀಗ ತನ್ನ ಕಳಪೆ ಬ್ಯಾಟಿಂಗ್ ನಿಂದಲೇ ದುಬಾರಿ ಬೆಲೆ ತೆತ್ತುವ ಸಾಧ್ಯತೆಗಳಿವೆ. ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ಇಂದು ನಡೆಯುತ್ತಿರುವ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ತನ್ನ ಪ್ರಮುಖ ಆರು ವಿಕೆಟ್ ಕಳೆದುಕೊಂಡು ಸಂಷ್ಟಕ್ಕೆ ಸಿಲುಕಿದೆ. ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದ ರಿಷಬ್ ಪಂತ್ (32
 ರನ್) ಮತ್ತು ಹಾರ್ದಿಕ್ ಪಾಂಡ್ಯಾ (32 ರನ್) ಅನಾವಶ್ಯಕವಾಗಿ ದೊಡ್ಡ ಹೊಡೆತಗಳಿಗೆ ಕೈ ಹಾಕಿ ಕೈ ಸುಟ್ಟುಕೊಂಡಿದ್ದಾರೆ.
ಹೀಗಾಗಿ ಪ್ರಸ್ತುತ ಕ್ರೀಸ್ ನಲ್ಲಿರುವ ರವೀಂದ್ರ ಜಡೇಜಾ ಮತ್ತು ಹಿರಿಯ ಅನುಭವಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ಮೇಲೆಯೇ ಎಲ್ಲ ಚಿತ್ತ ನೆಟ್ಟಿದೆ. ಪ್ರಮುಖವಾಗಿ ಇಷ್ಟು ದಿನ ನಿಧಾನಗತಿಯ ಆಟದಿಂದಲೇ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಮಹೇಂದ್ರ ಸಿಂಗ್ ತಮ್ಮ ತಾಳ್ಮೆಯ ಆಟದಿಂದಲೇ ತಂಡಕ್ಕೆ ನೆರವಾಗಲಿ ಎಂದು ಅಭಿಮಾನಿಗಳು ದೇವರಲ್ಲಿ ಮೊರೆ ಇಡುತ್ತಿದ್ದಾರೆ. ಅಭಿಮಾನಿಗಳ ಮೊರೆ ಇದೀಗ ಟ್ವಿಟರ್ ನಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಸುದ್ದಿಗೂ ಗ್ರಾಸವಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.