ಕ್ರಿಕೆಟ್

ಕ್ರಿಕೆಟಿಗ ರಿಷಬ್ ಪಂತ್ ಗೆ ದೆವ್ವದ ಕಾಟ..? ಭುಜದ ಮೇಲಿರುವ ಆ ಕೈ ಯಾರದ್ದು..!

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಟೀಂ ಇಂಡಿಯಾ ಆಟಗಾರರ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಕ್ರಿಕೆಟಿಗರಿಗೆ ದೆವ್ವದ ಕಾಟ ಶುರುವಾಗಿದೆಯೇ ಎಂಬ ಊಹಾಪೋಹಗಳು ಹರಿದಾಡುತ್ತಿವೆ.

ಕ್ರಿಕೆಟಿಗ ರಿಷಬ್ ಪಂತ್ ಗೆ ದೆವ್ವದ ಕಾಟ..? ಭುಜದ ಮೇಲಿರುವ ಆ ಕೈ ಯಾರದ್ದು..!
ಟೀಂ ಇಂಡಿಯಾ ಆಟಗಾರರ ಈ ಫೋಟೋ ವೈರಲ್
Published On :
ಲಂಡನ್: ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಟೀಂ ಇಂಡಿಯಾ ಆಟಗಾರರ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಕ್ರಿಕೆಟಿಗರಿಗೆ ದೆವ್ವದ ಕಾಟ ಶುರುವಾಗಿದೆಯೇ ಎಂಬ ಊಹಾಪೋಹಗಳು ಹರಿದಾಡುತ್ತಿವೆ.
ಹೌದು.. ಇಂಗ್ಲೆಂಡ್ ವಿರುದ್ಧದ ಪಂದ್ಯದ ಬಳಿಕ ಎಂಎಸ್ ಧೋನಿ ನೇತೃತ್ವದಲ್ಲಿ ತಂಡದ ಕೆಲ ಆಟಗಾರರು ಇಂಗ್ಲೆಂಡ್ ಬೀದಿ ಬೀದಿ ಸುತ್ತಿದ್ದು, ಈ ವೇಳೆ ಕೆಲ ಸೆಲ್ಫಿ ಫೋಟೋಗಳನ್ನು ತೆಗೆದುಕೊಂಡಿದ್ದಾರೆ. ಧೋನಿ, ಹಾರ್ದಿಕ್ ಪಾಂಡ್ಯಾ, ಜಸ್ ಪ್ರೀತ್ ಬುಮ್ರಾ, ಮಯಾಂಕ್ ಅಗರ್ವಾಲ್, ರಿಷಬ್ ಪಂತ್ ಈ ಫೋಟೋದಲ್ಲಿದ್ದು, ಇದೇ ಫೋಟೋ ಇದೀಗ ವ್ಯಾಪಕ ಊಹಾಪೋಹಗಳಿಗೆ ಕಾರಣವಾಗಿದೆ.
ಈ ಫೋಟೋವನ್ನು ಹಾರ್ದಿಕ್ ಪಾಂಡ್ಯಾ ತಮ್ಮ ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದ್ದು, ಫೋಟೋದಲ್ಲಿ ರಿಷಬ್ ಪಂತ್ ಭುಜದ ಮೇಲೆ ಒಂದು ಕೈ ಇದ್ದು, ಆ ಕೈ ಯಾರದ್ದು ಎಂಬ ಪ್ರಶ್ನೆ ಉದ್ಭವವಾಗಿದೆ. ಅಲ್ಲದೆ  ಆ ಕೈ ಕುರಿತಂತೆ ಹಲವು ಊಹಾಪೋಹಗಳು ಹರಿದಾಡುತ್ತಿದ್ದು, ಪಂತ್ ಭುಜದ ಮೇಲಿರುವ ಕೈ ಮೋಹಿನಿಯದ್ದು ಕೆಲವರು ಹೇಳಿದರೆ, ಇನ್ನೂ ಕೆಲವರು ಅದು ಪಾರ್ಥೀವ್ ಪಟೇಲ್ ಅವರದ್ದು, ಅವರು ಕುಳ್ಳಗಿರುವ ಕಾರಣ ಅವರು ಕಾಣುತ್ತಿಲ್ಲ. ಕೇವಲ ಅವರ ಕೈ ಮಾತ್ರ ಕಾಣುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಈ ಕುರಿತ ವಾದ ಪ್ರತಿವಾದ ಏನೇ ಇರಲಿ ಟೀಂ ಇಂಡಿಯಾ ಆಟಗಾರರ ಈ ಫೋಟೋ ಮಾತ್ರ ವ್ಯಾಪಕ ವೈರಲ್ ಆಗುತ್ತಿದೆ.
ಆ ಕೈ ಬುಮ್ರಾ ಅವರದ್ದು..?
ಮತ್ತೆ ಕೆಲವರು ಆ ಕೈ ಬುಮ್ರಾ ಅವರದ್ದು ಎಂದು ಹೇಳಿದ್ದು..ಈ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಪಂತ್ ಭುಜದ ಮೇಲಿರುವ ಕೈ ಜಸ್ ಪ್ರೀತ್ ಬುಮ್ರಾ ಅವರದ್ದು ... ಧೋನಿ ಭುಜದ ಮೇಲಿರುವ ಎರಡು ಕೈ ಗಳ ಪೈಕಿ ಎಡ ಭಾಗದ ಭುಜದ ಮೇಲಿರುವುದು ಬುಮ್ರಾ ಅವರ ಎಡಗೈ ಆಗಿದ್ದು, ಧೋನಿ ಅವರ ಬಲ ಭಾಗದ ಭುಜದ ಮೇಲೆ  ಇರುವುದು ರಿಷಬ್ ಪಂತ್ ಬಲಗೈ.. ಇನ್ನು ಬುಮ್ರಾ ಅವರ ಅವರ ಎಡಗೈ ರಿಷಬ್ ಪಂತ್ ಭುಜದ ಮೇಲಿದೆ. ತತ್ ಕ್ಷಣಕ್ಕೆ ನೋಡಲು ಬುಮ್ರಾ ತಮ್ಮ ಎರಡೂ ಕೈಗಳನ್ನು ಧೋನಿ ಅವರ ಭುಜದ ಮೇಲೆ ಹಾಕಿರುವಂತೆ ಕಾಣುತ್ತದೆ. ಅಂತೆಯೇ ಪಂತ್ ತಮ್ಮ ಎರಡೂ ಕೈಗಳನ್ನು ಜೇಬಿನಲ್ಲಿಟ್ಟುಕೊಂಡಿರುವಂತೆ ಭಾಸವಾಗುತ್ತದೆ. ಇದೇ ಕಾರಣಕ್ಕೆ ಪಂತ್ ಭುಜದ ಮೇಲಿರುವ ಕೈಗಳ ಕುರಿತು ವ್ಯಾಪಕ ಸುದ್ದಿ ಹರಿದಾಡುತ್ತಿದೆ ಎಂದು ವಾದ ಮಂಡಿಸಿದ್ದಾರೆ.
ಆದರೆ ಬುಮ್ರಾ ಅವರ ಕೈಗಳ ಬೆರಳುಗಳ ಗಾತ್ರ ಮತ್ತು ಪಂತ್ ಭುಜದ ಮೇಲಿರುವ ಕೈ ಬೆರಳುಗಳ ಗಾತ್ರ ಒಂದೇ ಸಮನಾಗಿರುವುದು ಕೂಡ ಅವರ ಈ ವಾದಕ್ಕೆ ಕಾರಣವಾಗಿರಬಹುದು.. ಆದರೆ ಪಂತ್ ಭುಜದ ಮೇಲಿರುವ ಕೈ ಗಳ ಕುರಿತು ವ್ಯಾಪಕ ಸುದ್ದಿ ಹರಿದಾಡುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.