ಭಾರತ-ಲಂಕಾ ಕದನ ವೇಳೆ ಆಗಸದಲ್ಲಿ ಭಾರತ ವಿರೋಧಿ ಹೇಳಿಕೆ ಬ್ಯಾನರ್, ಐಸಿಸಿಗೆ ಬಿಸಿಸಿಐ ಪತ್ರ!
ವಿಶ್ವಕಪ್ ಟೂರ್ನಿಯ ಟೀಂ ಇಂಡಿಯಾ-ಶ್ರೀಲಂಕಾ ನಡುವಿನ ಪಂದ್ಯದ ವೇಳೆ ಹೆಡಿಂಗ್ಲೆ ಕ್ರೀಡಾಂಗಣದ ಮೇಲೆ ವಿಮಾನವೊಂದು ಭಾರತ ವಿರೋಧಿ ಹೇಳಿಕೆಯುಳ್ಳ ಭಿತ್ತಿ ಪತ್ರವನ್ನು ಪ್ರದರ್ಶಿಸುತ್ತಾ ಹಾರಾಟ ನಡೆಸಿತ್ತು.

Published On :
ಲೀಡ್ಸ್: ವಿಶ್ವಕಪ್ ಟೂರ್ನಿಯ ಟೀಂ ಇಂಡಿಯಾ-ಶ್ರೀಲಂಕಾ ನಡುವಿನ ಪಂದ್ಯದ ವೇಳೆ ಹೆಡಿಂಗ್ಲೆ ಕ್ರೀಡಾಂಗಣದ ಮೇಲೆ ವಿಮಾನವೊಂದು ಭಾರತ ವಿರೋಧಿ ಹೇಳಿಕೆಯುಳ್ಳ ಭಿತ್ತಿ ಪತ್ರವನ್ನು ಪ್ರದರ್ಶಿಸುತ್ತಾ ಹಾರಾಟ ನಡೆಸಿತ್ತು. ಈ ಕುರಿತು ಆತಂಕ ವ್ಯಕ್ತಪಡಿಸಿದ ಬಿಸಿಸಿಐ ಐಸಿಸಿಗೆ ಪತ್ರ ಬರೆದಿದೆ.
ಲೀಡ್ಸ್ ನಲ್ಲಿ ಪಂದ್ಯ ಆರಂಭವಾದ ಕೆಲ ಕ್ಷಣದಲ್ಲೇ ಜಸ್ಟಿಸ್ ಫಾರ್ ಕಾಶ್ಮೀರ್ ಎಂಬ ಭಿತ್ತಪತ್ರದೊಂದಿಗೆ ವಿಮಾನ ಮೈದಾನದ ಮೇಲೆ ಹಾರಾಟ ನಡೆಸಿತ್ತು. ಇದಾಗಿ ಅರ್ಧ ಗಂಟೆಯಲ್ಲೇ ಇಂಡಿಯಾ ಸ್ಟಾಪ್ ಗೆನೆಸಿಡಿ, ಫ್ರೀ ಕಾಶ್ಮೀರ್ ಎಂಬ ಭಿತ್ತಪತ್ರದೊಂದಿಗೆ ಮತ್ತೊಂದು ವಿಮಾನ ಹಾರಾಟ ನಡೆಸಿತ್ತು.
ಇಂತಹ ಘಟನೆಗಳು ಸ್ವೀಕಾರಾರ್ಹವಲ್ಲ. ಸೆಮಿಫೈನಲ್ ನಲ್ಲಿ ಈ ರೀತಿಯ ಘಟನೆ ಪುನರಾವರ್ತನೆಯಾದರೆ ಅದು ನಿಜಕ್ಕೂ ದುರದೃಷ್ಟಕರ. ನಮ್ಮ ಆಟಗಾರರ ಸುರಕ್ಷತೆ ಅತ್ಯುನ್ನತವಾಗಿದೆ ಎಂದು ಕಳವಳ ವ್ಯಕ್ತಪಡಿಸಿ ಬಿಸಿಸಿಐ ಐಸಿಸಿಗೆ ಪತ್ರ ಬರೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಟೀಂ ಇಂಡಿಯಾTeam IndiaSri Lankaಶ್ರೀಲಂಕಾBCCIಬಿಸಿಸಿಐಐಸಿಸಿICCವಿಶ್ವಕಪ್ 2019CWC19Anti India bannerಭಾರತ ವಿರೋಧಿ ಬ್ಯಾನರ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


