ಪಾಕ್ ಹಫೀಜ್ ಬೌಲಿಂಗ್‍ಗೆ ಹೆದರಿದ ತಲೆ ಮೇಲೆ ಕೈಯಿಟ್ಟ ಅಂಪೈರ್; ಕಾಲೆಳೆದ ಐಸಿಸಿ, ವಿಡಿಯೋ ವೈರಲ್!
ವಿಶ್ವಕಪ್ ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಪಾಕ್ ಬೌಲರ್ ಮೊಹಮ್ಮದ್ ಹಫೀಜ್ ಬೌಲಿಂಗ್ ಗೆ ಹೆದರಿ ಅಂಪೈರ್ ತಲೆ ಮೇಲೆ ಕೈಯಿಟ್ಟಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Published On :
ಲಂಡನ್: ವಿಶ್ವಕಪ್ ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಪಾಕ್ ಬೌಲರ್ ಮೊಹಮ್ಮದ್ ಹಫೀಜ್ ಬೌಲಿಂಗ್ ಗೆ ಹೆದರಿ ಅಂಪೈರ್ ತಲೆ ಮೇಲೆ ಕೈಯಿಟ್ಟಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಹಫೀಜ್ ಕೈಯಿಂದ ಜಾರಿದ ಚೆಂಡು ಮೇಲಕ್ಕೆ ಹಾರಿತ್ತು. ಇನ್ನು ಸುಲಭವಾಗಿ ಬಂದ ಚೆಂಡನ್ನು ಬಾಂಗ್ಲಾ ಬ್ಯಾಟ್ಸ್ ಮನ್ ಸೌಮ್ಯ ಸರ್ಕಾರ ಭಾರೀ ಹೊಡೆತಕ್ಕೆ ಮುಂದಾಗಿದ್ದು ಸಿಕ್ಸ್ ಬದಲಿಗೆ ಬೌಂಡರಿ ಬಾರಿಸಿದ್ದಾರೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೆ ಐಸಿಸಿ ಸಹ ವಿಡಿಯೋವನ್ನು ಹಾಕಿ ಮೊಹಮ್ಮದ್ ಹಫೀಜ್ ರ ಕಾಲೆಳೆದಿದ್ದು ಇದಕ್ಕೆ ಪಾಕ್ ಅಭಿಮಾನಿಗಳು ಐಸಿಸಿ ವಿರುದ್ಧ ಗರಂ ಆಗಿದ್ದಾರೆ.
When your bowling coach tells you to "give it some flight"
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Pakistanಪಾಕಿಸ್ತಾನಐಸಿಸಿMohammad HafeezICCCricket Offbeatಕ್ರಿಕೆಟ್ ಸ್ವಾರಸ್ಯಮೊಹಮ್ಮದ್ ಹಫೀಜ್ವಿಶ್ವಕಪ್ 2019CWC19
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


