ಕ್ರಿಕೆಟ್

ವಿಶ್ವಕಪ್ ವರೆಗೂ ರಾಯುಡುಬೇಕು ಎಂದಿದ್ದ ಕೊಹ್ಲಿ, ಕ್ಯಾಪ್ಟನ್ ಮಾತು ನೆನಪಿಸಿದ ಅಭಿಮಾನಿಗಳಿಂದ ತೀವ್ರ ತರಾಟೆ!

ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗದ ಬೆನ್ನಲ್ಲೇ ಖ್ಯಾತ ಕ್ರಿಕೆಟಿಗ ಅಂಬಾಟಿ ರಾಯುಡು ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಕ್ರಿಕೆಟ್ ಅಭಿಮಾನಿಗಳು ಕ್ಯಾಪ್ಟನ್ ಕೊಹ್ಲಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಶ್ವಕಪ್ ವರೆಗೂ ರಾಯುಡುಬೇಕು ಎಂದಿದ್ದ ಕೊಹ್ಲಿ, ಕ್ಯಾಪ್ಟನ್ ಮಾತು ನೆನಪಿಸಿದ ಅಭಿಮಾನಿಗಳಿಂದ ತೀವ್ರ ತರಾಟೆ!
ಸಂಗ್ರಹ ಚಿತ್ರ
Published On :
ನವದೆಹಲಿ: ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗದ ಬೆನ್ನಲ್ಲೇ ಖ್ಯಾತ ಕ್ರಿಕೆಟಿಗ ಅಂಬಾಟಿ ರಾಯುಡು ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಕ್ರಿಕೆಟ್ ಅಭಿಮಾನಿಗಳು ಕ್ಯಾಪ್ಟನ್ ಕೊಹ್ಲಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಹೌದು.. ಸತತ ಎರಡೆರಡು ಬಾರಿ ಅಂಬಾಟಿ ರಾಯುಡುಗೆ ನಿರಾಶೆಯಾಗಿದ್ದು, ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗದ ಬೆನ್ನಲ್ಲೇ ರಾಯುಡು ನಿವೃತ್ತಿ ಘೋಷಣೆ ಮಾಡಿದ್ದಾರೆ. ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗುವ ಮಹದಾಸೆ ಹೊಂದಿದ್ದ ಅಂಬಾಟಿ ರಾಯುಡು ತಂಡದ ಆಯ್ಕೆ ಬಳಿಕ ಆಯ್ಕೆ ಸಮಿತಿ ವಿರುದ್ಧ ಕುದ್ಧು ಹೋಗಿದ್ದರು. ಬಳಿಕ ತಂಡದಲ್ಲಿ ಸಾಲು ಸಾಲು ಆಟಗಾರರು ಗಾಯಗೊಂಡಾಗ ರಾಯುಡುಗೆ ಕರೆ ಬರಬಹುದು ಎಂದು ಭಾವಿಸಲಾಗಿತ್ತು. ಶಿಖರ್ ಧವನ್ ಗಾಯಗೊಂಡಾಗಲೇ ರಾಯುಡುಗೆ ಅವಕಾಶ ಸಿಗಬಹುದು ಎಂದು ಭಾವಿಸವಾಗಿತ್ತು. ಆದರೆ ವಿಜಯ್ ಶಂಕರ್ ಮತ್ತು ರಿಷಬ್ ಪಂತ್ ಗೆ ಬಿಸಿಸಿಐ ಬುಲಾವ್ ನೀಡಿತ್ತು. ಅಂತೆಯೇ ವಿಜಯ್ ಶಂಕರ್ ಗಾಯಗೊಂಡಾಗಲೂ ರಾಯುಡು ಆಗಮನದ ನಿರೀಕ್ಷೆ ಇತ್ತು. ಆದರೆ ಮಯಾಂಕ್ ಅಗರ್ವಾಲ್ ಆಯ್ಕೆಯಾಗಿದ್ದು ಮತ್ತೆ ರಾಯುಡುಗೆ ನಿರಾಸೆಯಾಗಿದೆ. ಇದೇಕಾರಣಕ್ಕೆ ನೊಂದ ರಾಯುಡು ನಿವೃತ್ತಿಯಂತಹ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಇದರ ನಡುವೆಯೇ ಬಿಸಿಸಿಐ, ಟೀಂ ಇಂಡಿಯಾ ಆಯ್ಕೆ ಸಮಿತಿ ಸೇರಿದಂತೆ ಅಭಿಮಾನಿಗಳು ತಂಡದ ನಾಯಕ ವಿರಾಟ್ ಕೊಹ್ಲಿ ವಿರುದ್ಧವೂ ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರಮುಖವಾಗಿ ಈಗ್ಗೆ ಆರು ತಿಂಗಳ ಹಿಂದಷ್ಟೇ ಕ್ಯಾಪ್ಟನ್ ಕೊಹ್ಲಿ ವಿಶ್ವಕಪ್ ಟೂರ್ನಿಯವರೆಗೂ ಅಂಬಾಟಿ ರಾಯುಡು ತಂಡಕ್ಕೆ ಅವಶ್ಯಕತೆ ಇದ್ದಾರೆ ಎಂದು ಹೇಳಿದ್ದರು. ನಾಲ್ಕನೇ ಸ್ಥಾನಕ್ಕೆ ಅಂಬಾಟಿ ಫಿಕ್ಸ್ ಎಂದು ಹೇಳಿದ್ದರು. ಆದರೆ ಆಯ್ಕೆ ಸಂದರ್ಭದಲ್ಲಿ ಅಂಬಾಟಿ ಕುರಿತು ಏಕೆ ಮಾತನಾಡಿಲ್ಲ ಎಂದು ಅಭಿಮಾನಿಗಳು ಕೊಹ್ಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಭಿಮಾನಿಗಳ ಆಕ್ರೋಶದ ಟ್ವೀಟ್ ಗಳು ಇದೀಗ ವೈರಲ್ ಆಗಿದ್ದು, ಈ ಪೈಕಿ ಕೆಲ ಟ್ವೀಟ್ ಗಳ ಗುಚ್ಛ ಇಲ್ಲಿದೆ...

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.