ಅಂಬಾಟಿ ರಾಯುಡು ನಿವೃತ್ತಿ, ಭಾವುಕ ನಿರ್ಧಾರವಲ್ಲ ಎಂದು ಭಾವಿಸಿದ್ದೇನೆ: ಜಹೀರ್ ಖಾನ್
ನಿವೃತ್ತಿ ಕುರಿತಂತೆ ಅಂಬಾಟಿ ರಾಯುಡು ಕೈಗೊಂಡ ನಡೆ ಭಾವುಕ ನಿರ್ಧಾರವಲ್ಲ ಎಂದು ಭಾವಿಸಿದ್ದೇನೆ ಎಂದು ಹಿರಿಯ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಹೇಳಿದ್ದಾರೆ.

Published On :
ಲಂಡನ್: ನಿವೃತ್ತಿ ಕುರಿತಂತೆ ಅಂಬಾಟಿ ರಾಯುಡು ಕೈಗೊಂಡ ನಡೆ ಭಾವುಕ ನಿರ್ಧಾರವಲ್ಲ ಎಂದು ಭಾವಿಸಿದ್ದೇನೆ ಎಂದು ಹಿರಿಯ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಹೇಳಿದ್ದಾರೆ.
ಖ್ಯಾತ ಕ್ರಿಕೆಟ್ ಜಾಲತಾಣ ಕ್ರಿಕ್ ಬಜ್ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಜಹೀರ್ ಖಾನ್, ವಿಶ್ವಕಪ್ ತಂಡಕ್ಕೆ ಆಯ್ಕೆಯಾಗದ ಮಾತ್ರಕ್ಕೇ ಅಂಬಾಟಿ ರಾಯುಡು ಇಂತಹ ಕಠಿಣ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಭಾವಿಸಿದ್ದೇನೆ. ಬಿಸಿಸಿಐ ಮತ್ತು ಆಯ್ಕೆ ಸಮಿತಿ ಸಾಕಷ್ಟು ಯೋಚನೆ ಮಾಡಿಯೇ ಆಟಗಾರರನ್ನು ಆಯ್ಕೆ ಮಾಡುತ್ತದೆ. ಹೀಗಾಗಿ ವಿಶ್ವಕಪ್ ತಂಡಕ್ಕೆ ಅಂಬಾಟಿ ರಾಯುಡು ಸ್ಟ್ಯಾಂಡ್ ಬೈ ಪ್ಲೇಯರ್ ಆಗಿದ್ದರೂ, ವಿಜಯ್ ಶಂಕರ್, ಕೇದಾರ್ ಜಾದವ್, ಮಯಾಂಕ್ ಅಗರ್ವಾಲ್ ಆಯ್ಕೆಯಲ್ಲಿ ನನಗೆ ಯಾವುದೇ ರೀತಿಯ ಅಚ್ಚರಿ ಕಾಣುತ್ತಿಲ್ಲ.
ತಂಡಕ್ಕೆ ಬೇಕಾದ ಆಯ್ಕೆಯನ್ನೇ ಆಯ್ಕೆ ಸಮಿತಿ ಮಾಡಿದೆ. ಆದರೆ ಅಂಬಾಟಿ ರಾಯುಡು ಕ್ರಿಕೆಟ್ ಅನ್ನು ನಾನು ಅಲ್ಲಗಳೆಯುತ್ತಿಲ್ಲ. ಆದರೆ ಹಾಲಿ ಪರಿಸ್ಥಿತಿಯಲ್ಲಿ ಅವರಿಗಿಂತ ಈ ವಿಜಯ್ ಶಂಕರ್, ಕೇದಾರ್ ಜಾದವ್, ಮಯಾಂಕ್ ಅಗರ್ವಾಲ್ ಆಯ್ಕೆ ಸಮಿತಿಗೆ ಉತ್ತಮವಾಗಿ ಕಂಡಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ 40ಕ್ಕೂ ಹೆಚ್ಚು ಸರಾಸರಿ ಕಡಿಮೆ ಸಾಧನೆಯೇನಲ್ಲ ಎಂದು ಜಹೀರ್ ಖಾನ್ ಅಂಬಾಟಿ ಬೆನ್ನಿಗೆ ನಿಂತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್Londonಲಂಡನ್ಭಾರತAmbati Rayuduನಿವೃತ್ತಿZaheer Khanಜಹೀರ್ ಖಾನ್ಅಂಬಾಟಿ ರಾಯುಡುICC World Cup 2019ಐಸಿಸಿ ವಿಶ್ವಕಪ್ 2019
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


