ಕಳಪೆ ಪ್ರದರ್ಶನ: ವಿಶ್ವಕಪ್ ನಂತರ ಧೋನಿ ನಿವೃತ್ತಿ?
ಟೀಂ ಇಂಡಿಯಾ ಆಡಲಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಕೊನೆಯ ಪಂದ್ಯವು ಮಹೇಂದ್ರ ಸಿಂಗ್ ಧೋನಿ ಪಾಲಿಗೆ ವಿದಾಯದ ಪಂದ್ಯವಾಗಲಿದೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ.

Published On :
ಲಂಡನ್ : ಟೀಂ ಇಂಡಿಯಾ ಆಡಲಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಕೊನೆಯ ಪಂದ್ಯವು ಮಹೇಂದ್ರ ಸಿಂಗ್ ಧೋನಿ ಪಾಲಿಗೆ ವಿದಾಯದ ಪಂದ್ಯವಾಗಲಿದೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ.
ಒಂದು ವೇಳೆ ಭಾರತ ಫೈನಲ್ಸ್ ಪಂದ್ಯಕ್ಕೆ ಆರ್ಹತೆ ಪಡೆದರೆ ಜುಲೈ 14 ರಂದು ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಪಂದ್ಯವು ಭಾರತೀಯ ಕ್ರಿಕೆಟಿನ ಲೆಜೆಂಡ್ ಧೋನಿ ಅವರ ವಿದಾಯದ ಪಂದ್ಯವಾಗಲಿದೆ.
ವಿಶ್ವಕಪ್ ಕ್ರಿಕೆಟ್ ನಂತರ ಧೋನಿ ಟೀಂ ಇಂಡಿಯಾದಲ್ಲಿ ಮುಂದುವರೆಯುವ ಸಾಧ್ಯತೆ ಇಲ್ಲ ಆದರೆ, ಮೂರು ಮಾದರಿಯ ಕ್ರಿಕೆಟಿನ ನಾಯಕತ್ವಕ್ಕೆ ದಿಢೀರನೇ ನಿವೃತ್ತಿ ಘೋಷಿಸಿದ್ದನ್ನೂ ಯಾರು ಕೂಡಾ ಉಹಿಸಿರಲಿಲ್ಲ ಎಂದು ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಸ್ತುತ ಇರುವ ಆಯ್ಕೆದಾರರ ಸಮಿತಿ ಆಕ್ಟೋಬರ್ ವರೆಗೂ ಇರುವ ಸಾಧ್ಯತೆ ಇದೆ. ಆಸ್ಟ್ರೇಲಿಯಾದಲ್ಲಿ ಮುಂದಿನ ವರ್ಷ ನಡೆಯಲಿರುವ ಐಸಿಸಿ ವಿಶ್ವಕಪ್ ಟಿ-20 ಟೂನಿರ್ಯ ನಂತರ ಆಯ್ಕೆದಾರ ಸಮಿತಿ ಕೂಡಾ ಬದಲಾವಣೆಯಾಗಲಿದೆ. ನೂತನ ಸಮಿತಿ ಅಧಿಕಾರಕ್ಕೆ ಬಂದ ನಂತರ ಟಿ-20 ಹಾಗೂ ಏಕದಿನ ಪಂದ್ಯದ ಆಟಗಾರರಲ್ಲೂ ಬದಲಾವಣೆ ಆಗುವ ಸಾಧ್ಯತೆ ಇದೆ.
ಆದಾಗ್ಯೂ, ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತ ಸೆಮಿ ಫೈನಲ್ ಪ್ರವೇಶದೊಂದಿಗೆ ಬಿಸಿಸಿಐ ಅಥವಾ ಟೀಂ ಮ್ಯಾನೇಜ್ ಮೆಂಟ್ ಸೂಕ್ಷ್ಮ ವಿಚಾರಗಳ ಬಗ್ಗೆ ಮಾತುಕತೆ ನಡೆಸುತ್ತಿದೆ. ಧೋನಿ ಏಳು ಪಂದ್ಯಗಳಿಂದ 223 ರನ್ ಗಳಿಸಿದ್ದಾರೆ. ಇದನ್ನು ಪರಿಗಣಿಸಿದರೆ ಅವರ ಅಸಮರ್ಥತೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಆದರೆ, ಕ್ಷೇತ್ರ ರಕ್ಷಣೆಯಲ್ಲಿ ಧೋನಿ ಅವರ ಕೊಡುಗೆ ಈಗಲೂ ತೀವ್ರತೆಯಿಂದ ಕೂಡಿದೆ. ಮಾಧ್ಯಮದ ಮುಂದೆ ಮಾತನಾಡುವ ಯಾವುದೇ ಆಟಗಾರರು ಧೋನಿ ಅವರ ಕ್ಷೇತ್ರ ರಕ್ಷಣೆ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
2017ರ ಚಾಂಫಿಯನ್ ಟ್ರೋಫಿ ನಂತರ ಟೀಂ ಮ್ಯಾನೇಜ್ ಮೆಂಟ್ ಧೋನಿ ಅವರನ್ನು 2019ರ ವಿಶ್ವಕಪ್ ವರೆಗೂ ಮುಂದುವರೆಸುವ ಬಗ್ಗೆ ತೀರ್ಮಾನ ಕೈಗೊಂಡಿತ್ತು. ಧೋನಿ ಅವರ ಕಳಪೆ ಪ್ರದರ್ಶನದ ನಡುವೆಯೂ ಟೀಂ ಇಂಡಿಯಾ ಸೆಮಿಫೈನಲ್ ಪ್ರವೇಶಿಸಿದ್ದು, ಅವರನ್ನು ಎಚ್ಚರಿಕೆಯಿಂದ ರಕ್ಷಿಸಲಾಗಿದೆ ಎಂದು ಮಾಜಿ ಆಟಗಾರರೊಬ್ಬರು ಹೇಳಿದ್ದಾರೆ.
ಯಾರು ಕೂಡಾ ನಿವೃತ್ತಿಯಾಗಲಿ ಎಂದು ಹೇಳುತ್ತಿಲ್ಲ. ಆದರೆ, ವಿಶ್ವಕಪ್ ನಂತರ ಅವರು ನಿವೃತ್ತಿಯಾಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


