ಡಿಆರ್‌ಎಸ್‌ನಲ್ಲಿ ಮತ್ತೆ ಎಡವಿದ ಎಂಎಸ್ ಧೋನಿ, ರಿಪ್ಲೇ ನೋಡಿ ಕೊಹ್ಲಿ ಸಿಟ್ಟಾಗಿದ್ದೇಕೆ? ವಿಡಿಯೋ ನೋಡಿ!
ಡಿಆರ್‌ಎಸ್ ಅಂದ್ರೆ(ಧೋನಿ ರಿವ್ಯೂ ಸಿಸ್ಟಂ) ಎಂದೇ ಕರೆಯಲಾಗುತ್ತಿತ್ತು. ಅಷ್ಟು ನಿಖರವಾಗಿ ಅಪೀಲ್ ಮಾಡುತ್ತಾರೆ. ಆದರೆ ವಿಶ್ವಕಪ್ ನಲ್ಲಿ ಎಂಎಸ್ ಧೋನಿ ಪದೇ ಪದೇ ಡಿಆರ್‌ಎಸ್‌ನಲ್ಲಿ ಎಡವುತ್ತಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ.

Published On :
ಲಂಡನ್: ಡಿಆರ್‌ಎಸ್ ಅಂದ್ರೆ(ಧೋನಿ ರಿವ್ಯೂ ಸಿಸ್ಟಂ) ಎಂದೇ ಕರೆಯಲಾಗುತ್ತಿತ್ತು. ಅಷ್ಟು ನಿಖರವಾಗಿ ಅಪೀಲ್ ಮಾಡುತ್ತಾರೆ. ಆದರೆ ವಿಶ್ವಕಪ್ ನಲ್ಲಿ ಎಂಎಸ್ ಧೋನಿ ಪದೇ ಪದೇ ಡಿಆರ್‌ಎಸ್‌ನಲ್ಲಿ ಎಡವುತ್ತಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ.
ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯಾ 31 ರನ್ ಗಳಿಂದ ಸೋಲು ಕಂಡಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಆರಂಭಿಕ ಆಟಗಾರರಾದ ಜೇಸನ್ ರಾಯ್ ಮತ್ತು ಬೇಸ್ಟೋ ಅದ್ಭುತ ಬ್ಯಾಟಿಂಗ್ ಮಾಡಿ ತಂಡಕ್ಕೆ ಆಸರೆಯಾಗಿದ್ದರು. ಆದರೆ ಆರಂಭದಲ್ಲೇ ಜೇಸನ್ ರಾಯ್ ಔಟ್ ಆಗಿದ್ದರೆ ಇಂಗ್ಲೆಂಡ್ ಗೆ ಗೆಲುವು ಕಷ್ಟವಾಗುತ್ತಿತ್ತು.
ಹಾರ್ದಿಕ್ ಪಾಂಡ್ಯರ ಎಸೆದ ಚೆಂಡು ಜೇಸನ್ ರಾಯ್ ಅವರ ಗ್ಲೌಸ್ ಗೆ ತಲುಗಿ ಕೀಪರ್ ಧೋನಿ ಕೈಸೇರಿತ್ತು. ಈ ವೇಳೆ ಧೋನಿ, ಹಾರ್ದಿಕ್ ಪಾಂಡ್ಯ ಮತ್ತು ಕೊಹ್ಲಿ ಔಟ್ ಗೆ ಅಪೀಲ್ ಮಾಡಿದರು. ಆದರೆ ಅಂಪೈರ್ ಔಟ್ ತೀರ್ಪು ನೀಡಲಿಲ್ಲ. ಈ ವೇಳೆ ಕೊಹ್ಲಿ ಮತ್ತು ಹಾರ್ದಿಕ್ ಡಿಆರ್‌ಎಸ್ ತೆಗೆದುಕೊಳ್ಳಲು ಉತ್ಸುಕರಾಗಿದ್ದರು. ಆದರೆ ಧೋನಿ ನಿರುತ್ಸಾಹ ತೋರಿದ್ದರಿಂದ ಕೊಹ್ಲಿ ಸುಮ್ಮನಾದರು.
ನಂತರ ರಿಪ್ಲೇನಲ್ಲಿ ನೋಡಿದಾಗ ಜೇಸನ್ ರಾಯ್ ಔಟಾಗಿರುವುದು ಸ್ಪಷ್ಟವಾಗಿ ತಿಳಿಯಿತು. ಇದರಿಂದ ಮೈದಾನದಲ್ಲೇ ಕೊಹ್ಲಿ ಸಿಟ್ಟಾದರೂ ನಂತರ ಸುಮ್ಮನಾದರು.
Dhoni's judgment was wrong. Clear inside edge....but he did not apeal and refuses DRS after discussing with Kohli and Pandya.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Virat Kohliವಿರಾಟ್ ಕೊಹ್ಲಿMS Dhoniಎಂಎಸ್ ಧೋನಿDRSCricket Offbeatಕ್ರಿಕೆಟ್ ಸ್ವಾರಸ್ಯJason Royಜೇಸನ್ ರಾಯ್ಡಿಆರ್ಎಸ್World Cup 2019ವಿಶ್ವಕಪ್ 2019
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


