ಕ್ರಿಕೆಟ್

ಶಿಖರ್ ಧವನ್ ಮೇಲೆ ಮೈದಾನದಲ್ಲೇ ಸಿಟ್ಟಾದ ಹಾರ್ದಿಕ್ ಪಾಂಡ್ಯ, ವಿಡಿಯೋ ವೈರಲ್!

ಮಹಿಳೆಯ ಕುರಿತು ಅಶ್ಲೀಲ ಕಮೆಂಟ್ ಮಾಡಿ ನಿಷೇಧಕ್ಕೆ ಒಳಗಾಗಿದ್ದ ಹಾರ್ದಿಕ್ ಪಾಂಡ್ಯ ಶಿಕ್ಷೆ ಮುಗಿಸಿ ನ್ಯೂಜಿಲ್ಯಾಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಆಡಿದ್ದು ಈ ವೇಳೆ ಹಿರಿಯ ಆಟಗಾರ...

ಶಿಖರ್ ಧವನ್ ಮೇಲೆ ಮೈದಾನದಲ್ಲೇ ಸಿಟ್ಟಾದ ಹಾರ್ದಿಕ್ ಪಾಂಡ್ಯ, ವಿಡಿಯೋ ವೈರಲ್!
ಶಿಖರ್ ಧವನ್-ಹಾರ್ದಿಕ್ ಪಾಂಡ್ಯ
Published On :
ಬೇ ಓವೆಲ್: ಮಹಿಳೆಯ ಕುರಿತು ಅಶ್ಲೀಲ ಕಮೆಂಟ್ ಮಾಡಿ ನಿಷೇಧಕ್ಕೆ ಒಳಗಾಗಿದ್ದ ಹಾರ್ದಿಕ್ ಪಾಂಡ್ಯ ಶಿಕ್ಷೆ ಮುಗಿಸಿ ನ್ಯೂಜಿಲ್ಯಾಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಆಡಿದ್ದು ಈ ವೇಳೆ ಹಿರಿಯ ಆಟಗಾರ ಶಿಖರ್ ಧವನ್ ಮೇಲೆ ಸಿಟ್ಟಾಗಿದ್ದಾರೆ. 
ಬೇ ಓವೆಲ್ ನಲ್ಲಿ ನಡೆದ ನ್ಯೂಜಿಲ್ಯಾಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯಗಳಿಸಿದ್ದು ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಇನ್ನು ಈ ಪಂದ್ಯದಲ್ಲಿ ಶಿಖರ್ ಧವನ್ ಸರಿಯಾಗಿ ಚೆಂಡನ್ನು ಸರಿಯಾಗಿ ಎಸೆಯಲಿಲ್ಲ ಎಂಬ ಕಾರಣಕ್ಕೆ ಹಾರ್ದಿಕ್ ಪಾಂಡ್ಯ ಧವನ್ ಮೇಲೆ ಮೈದಾನದಲ್ಲಿ ಕೆಲಕಾಲ ಸಿಟ್ಟಾಗಿದ್ದರು. 
ಪಾಂಡ್ಯ ಬೌಲಿಂಗ್ ನಲ್ಲಿ ರಾಸ್ ಟೇಲರ್ ಹೊಡೆದ ಚೆಂಡನ್ನು ಮಿಡ್ ಆಫ್ ನಲ್ಲಿದ್ದ ಶಿಖರ್ ಧವನ್ ತಡೆದಿದ್ದರು. ಆದರೆ ಚೆಂಡನ್ನು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಗೆ ಎಸೆಯುವ ಬದಲು ಎಲ್ಲೊಲ್ಲೋ ಎಸೆದಿದ್ದರು. ಇದರಿಂ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ಸುಲಭವಾಗಿ ರನ್ ಕದ್ದರು. ಇದರಿಂದ ತಾಳ್ಮೆ ಕಳೆದುಕೊಂಡ ಹಾರ್ದಿಕ್ ಪಾಂಡ್ಯ ವಾಟ್ ಯಾರ್ ಎಂದು ಸಿಟ್ಟಿನಿಂದ ಶಿಖರ್ ಧವನ್ ರತ್ತ ತಿರುಗಿ ಉದ್ಘರಿಸಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.