ಆಲ್ ರೌಂಡರ್ ಆಂಡಿಲೆ ವಿರುದ್ಧ ಜನಾಂಗೀಯ ನಿಂದನೆ: ಪಾಕಿಸ್ತಾನದ ಸರ್ಫರಾಜ್ ಕ್ಷಮೆಯಾಚನೆ
ಡರ್ಬನ್ ನಲ್ಲಿ ನಡೆದ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟ್ಸಮನ್ ಆಂಡಿಲೆಗೆ ಜನಾಂಗೀಯ ನಿಂದನೆ ಮಾಡಿದ್ದ ಪಾಕಿಸ್ತಾನದ ಕ್ಯಾಪ್ಟನ್ ಸರ್ಫರಾಜ್ ಅಹ್ಮದ್ ಕ್ಷಮೆ ಕೋರಿದ್ದಾರೆ.

ನವದೆಹಲಿ: ಡರ್ಬನ್ ನಲ್ಲಿ ನಡೆದ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟ್ಸಮನ್ ಆಂಡಿಲೆಗೆ ಜನಾಂಗೀಯ ನಿಂದನೆ ಮಾಡಿದ್ದ ಪಾಕಿಸ್ತಾನದ ಕ್ಯಾಪ್ಟನ್ ಸರ್ಫರಾಜ್ ಅಹ್ಮದ್ ಕ್ಷಮೆ ಕೋರಿದ್ದಾರೆ.
ಜನವರಿ 22 ರಂದು ಡರ್ಬನ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಪಾಕ್ ನಾಯಕ, ವಿಕೆಟ್ ಕೀಪರ್ ಸರ್ಫರಾಜ್ ಅಹ್ಮದ್ ಉರ್ದುವಿನಲ್ಲಿ ಆಂಡಿಲೆಯನ್ನು 'ಲೇ ಕರಿಯ..ನಿನ್ನ ಅಮ್ಮ ಇವತ್ತು ಎಲ್ಲಿ ಕೂತಿದ್ದಾಳೆ, ಇವತ್ತು ಏನ್ ಪ್ರಾರ್ಥನೆ ಮಾಡಿ ಬಂದಿದ್ದೀಯಾ? ಎಂದು ಹೇಳಿದ್ದು ಈ ಮಾತುಗಳು ಸ್ಟಂಪ್ ಮೈಕ್ ನಲ್ಲಿ ರೆಕಾರ್ಡ್ ಆಗಿತ್ತು. ಈ ವಿಡಿಯೋ ಈಗ ಭಾರಿ ಚರ್ಚೆಗೆ ಕಾರಣವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


