ಕ್ರಿಕೆಟ್

ಕ್ರಿಕೆಟ್‌ನಲ್ಲೇ 'ಮಾಸ್ಟರ್ ಬ್ರೈನ್' ಅಂದ್ರೆ ಅದು ಧೋನಿ, ಹೇಗೆ ಅಂತೀರಾ, ಈ ವಿಡಿಯೋ ನೋಡಿ?

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಸತತ ಮೂರು ಅರ್ಧ ಶತಕಗಳನ್ನು ಬಾರಿಸುವ ಮೂಲಕ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಕ್ರಿಕೆಟ್...

ಕ್ರಿಕೆಟ್‌ನಲ್ಲೇ 'ಮಾಸ್ಟರ್ ಬ್ರೈನ್' ಅಂದ್ರೆ ಅದು ಧೋನಿ, ಹೇಗೆ ಅಂತೀರಾ, ಈ ವಿಡಿಯೋ ನೋಡಿ?
ಎಂಎಸ್ ಧೋನಿ
Published On :
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಸತತ ಮೂರು ಅರ್ಧ ಶತಕಗಳನ್ನು ಬಾರಿಸುವ ಮೂಲಕ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಕ್ರಿಕೆಟ್ ನ ಮಾಸ್ಟರ್ ಬ್ರೈನ್ ಎನ್ನುವುದಕ್ಕೆ ಇಲ್ಲಿದೆ ಸಾಕ್ಷಿ.
ಆಸ್ಟ್ರೇಲಿಯಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಧೋನಿ ಅಜೇಯ 87 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇನ್ನು ಪಂದ್ಯದ ನಿರ್ಣಾಯಕ ಸಮಯ ಅಂದರೆ ಪಂದ್ಯದ ಕೊನೆಯ 24 ಎಸೆತಗಳಲ್ಲಿ ಟೀಂ ಇಂಡಿಯಾಗೆ ಗೆಲ್ಲಲು 33 ರನ್ ಗಳು ಬೇಕಿತ್ತು. 
ಆಗ ಡ್ರಿಂಕ್ಸ್ ಬ್ರೇಕ್ ನೀಡಲಾಗಿತ್ತು. ಈ ಸಮಯದಲ್ಲಿ ಧೋನಿ ಬೇಗನೆ ಪಾನೀಯವನ್ನು ಕುಡಿದು ಅಲ್ಲೇ ಪಕ್ಕದಲ್ಲಿ ನಿಂತಿದ್ದ ಮೈದಾನದ ಅಂಪೈರ್ ಬಳಿ ಹೋಗಿ ಇನ್ನು ಎಷ್ಟು ಓವರ್ ಗಳಿವೆ. ಯಾರ್ಯಾರು ಎಷ್ಟು ಓವರ್ ಗಳನ್ನು ಮಾಡಲಿದ್ದಾರೆ. ಎಂಬುದನ್ನು ಅಂಪೈರ್ ಬಳಿಯಿಂದ ಮೊಬೈಲ್ ನಲ್ಲಿ ಪರೀಕ್ಷಿಸಿದ ಧೋನಿ ಪಂದ್ಯ ಗೆಲ್ಲಿಸುವ ಕುರಿತಂತೆ ಲೆಕ್ಕಾಚಾರಗಳನ್ನು ಹಾಕಿದ್ದಾರೆ. 
ಅವರ ಲೆಕ್ಕಾಚಾರಗಳು ಫಲ ನೀಡಿದ್ದು ಎಂಎಸ್ ಧೋನಿ ಹಾಗೂ ಕೇದಾರ್ ಜಾದವ್ ಇಬ್ಬರು ಸೇರಿ ಕೊನೆಯ 20 ಎಸೆತಗಳಲ್ಲಿ 37 ರನ್ ಪೇರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. 
ಸದ್ಯ ಧೋನಿ ಗೆಲುವಿಗಾಗಿ ಹಾಕಿದ ಲೆಕ್ಕಚಾರದ ವಿಡಿಯೋ ಇದೀಗ ವೈರಲ್ ಆಗಿದ್ದು ಟ್ವೀಟರಿಗರು ಧೋನಿಯನ್ನು ಹಾಡಿ ಹೋಗಳುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.