ಕೊಹ್ಲಿಯಲ್ಲ, ಎಬಿಡಿವಿಲಿಯರ್ಸ್ ಅಲ್ಲ, ಚೇಸಿಂಗ್ ನಲ್ಲಿ ಮಹೇಂದ್ರ ಸಿಂಗ್ ಧೋನಿಯೇ 'ಕಿಂಗ್'
ಆಸಿಸ್ ವಿರುದ್ಧ ಮೂರನೇ ಏಕದಿನ ಪಂದ್ಯದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದ ಮಹೇಂದ್ರ ಸಿಂಗ್ ಧೋನಿ ಇದೀಗ ರನ್ ಚೇಸಿಂಗ್ ನಲ್ಲಿ ತಾವೇ ಕಿಂಗ್ ಎಂಬುದನ್ನು ಮತ್ತೆ ಸಾಬೀತು ಮಾಡಿದ್ದಾರೆ.

Published On :
ಮೆಲ್ಬೋರ್ನ್: ಆಸಿಸ್ ವಿರುದ್ಧ ಮೂರನೇ ಏಕದಿನ ಪಂದ್ಯದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದ ಮಹೇಂದ್ರ ಸಿಂಗ್ ಧೋನಿ ಇದೀಗ ರನ್ ಚೇಸಿಂಗ್ ನಲ್ಲಿ ತಾವೇ ಕಿಂಗ್ ಎಂಬುದನ್ನು ಮತ್ತೆ ಸಾಬೀತು ಮಾಡಿದ್ದಾರೆ.
2018ನೇ ಸಾಲಿನಲ್ಲಿ ಫಾರ್ಮ್ ಕಳೆದುಕೊಂಡು ಒಂದೇ ಒಂದು ಶತಕ ವಿಲ್ಲದೇ ವರ್ಷ ಪೂರ್ತಿ ಮಾಡಿದ್ದ ಧೋನಿ, ಇದೀಗ 2019ರ ಆರಂಭದಲ್ಲೇ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ. ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ನಡೆದ ಮೂರು ಏಕದಿನ ಪಂದ್ಯಗಳಲ್ಲಿ ಸರಣಿಯಲ್ಲಿ ಗರಿಷ್ಠ ರನ್ ಗಳಿಕೆ ಮಾಡಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿರುವ ಧೋನಿ, ಇದೀಗ ಚೇಸಿಂಗ್ ನಲ್ಲಿ ಗರಿಷ್ಟ ರನ್ ಸರಾಸರಿ ಹೊಂದಿರುವ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಇಷ್ಟಕ್ಕೂ ರನ್ ಚೇಸಿಂಗ್ ವೇಳೆ ಎಂಎಸ್ ಧೋನಿಯ ರನ್ ಸರಾಸರಿ ಎಷ್ಟು ಗೊತ್ತೆ...?
ಆಸಿಸ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಧೋನಿ ಅಜೇಯ 87 ರನ್ ಗಳಿಸಿದ್ದು, ಆ ಮೂಲಕ ರನ್ ಚೇಸಿಂಗ್ ವೇಳೆಯ ತಮ್ಮ ಸರಾಸರಿಯನ್ನು ಗರಿಷ್ಠ ಮಟ್ಟಕ್ಕೆ ಏರಿಸಿಕೊಂಡಿದ್ದಾರೆ. ಹಾಲಿ ಅಂಕಿ ಅಂಶಗಳ ಅನ್ವಯ ಚೇಸಿಂಗ್ ವೇಳೆ ಮಹೇಂದ್ರ ಸಿಂಗ್ ಧೋನಿ ಅವರ ರನ್ ಸರಾಸರಿ 103.07 ರಷ್ಟಿದೆ. ಅಲ್ಲದೆ ಚೇಸಿಂಗ್ ವೇಳೆ ಧೋನಿ ಒಟ್ಟು 73 ಪಂದ್ಯಗಳಿಂದ 103.07 ಸರಾಸರಿಯಲ್ಲಿ 2, 783 ರನ್ ಸಿಡಿಸಿದ್ದಾರೆ. ಈ ಪೈಕಿ 2 ಭರ್ಜರಿ ಶತಕಗಳೂ ಕೂಡ ಸೇರಿವೆ. ಆ ಮೂಲಕ ರನ್ ಚೇಸಿಂಗ್ ವೇಳೆ ಅತೀ ಹೆಚ್ಚು ಸರಾಸರಿ ಹೊಂದಿರುವ ವಿಶ್ವದ ಬ್ಯಾಟ್ಸ,ಮನ್ ಗಳ ಪಟ್ಟಿಯಲ್ಲಿ ಧೋನಿ ಅಗ್ರ ಸ್ಥಾನಕ್ಕೇರಿದ್ದಾರೆ.
ಇನ್ನು ಪಟ್ಟಿಯಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿದ್ದು, ಕೊಹ್ಲಿ ಚೇಸಿಂಗ್ ವೇಳೆ 97.98 ಸರಾಸರಿ ಹೊಂದಿದ್ದಾರೆ. ಕೊಹ್ಲಿ ಚೇಸಿಂಗ್ ವೇಳೆ ಒಟ್ಟು 78 ಪಂದ್ಯಗಳಿಂದ 97.98 ಸರಾಸರಿಯಲ್ಲಿ 4899 ರನ್ ಕಲೆಹಾಕಿದ್ದಾರೆ. ಈ ಪೈಕಿ 21 ಶತಕಗಳೂ ಸೇರಿವೆ. ಉಳಿದಂತೆ 86.25 ಸರಾಸರಿ ಹೊಂದಿರುವ ಆಸ್ಟ್ರೇಲಿಯಾದ ಮೈಕಲ್ ಬೆವನ್ 3ನೇ ಸ್ಥಾನದಲ್ಲಿದ್ದು, ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸಮನ್ ಎಬಿ ಡಿವಿಲಿರ್ಯಸ್ (82.77ಸರಾಸರಿ) 4ನೇ ಸ್ಥಾನದಲ್ಲಿದ್ದು, ಇಂಗ್ಲೆಂಡ್ ತಂಡದ ಜೋ ರೂಟ್ (77.80) 5 ಮತ್ತು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ (73.86) 6ನೇ ಸ್ಥಾನದಲ್ಲಿದ್ದಾರೆ.
Thala @msdhoni @ChennaiIPL #
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


