ಕ್ರಿಕೆಟ್

ದ್ವಿತೀಯ ಏಕದಿನ: ಭಾರತ ಗೆಲ್ಲಲು 299 ರನ್ ಗುರಿ, ಟೀಂ ಇಂಡಿಯಾ 32/0

ಪ್ರವಾಸಿ ಟೀಂ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ನಿಗದಿತ 50 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿದೆ.

ದ್ವಿತೀಯ ಏಕದಿನ: ಭಾರತ ಗೆಲ್ಲಲು 299 ರನ್ ಗುರಿ, ಟೀಂ ಇಂಡಿಯಾ  32/0
ದ್ವಿತೀಯ ಏಕದಿನ: ಭಾರತ ಗೆಲ್ಲಲು 299 ರನ್ ಗುರಿ, ಟೀಂ ಇಂಡಿಯಾ 32/0
Published On :
ಅಡಿಲೇಡ್: ಪ್ರವಾಸಿ ಟೀಂ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ನಿಗದಿತ 50 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಪ್ರಾರಂಭಿಸಿದ ಆಸ್ಟ್ರೇಲಿಯಾ ಶಾನ್ ಮಾರ್ಶ್ ಅಮೋಘ ಶತಕದ (131) ದ ನಎರವಿನಿಂದ ಬೃಹತ್ ಮೊತ್ತ ಕಲೆ ಹಾಕಿದೆ.
ಭಾರತ ಪರ (4), ಮಹಮ್ಮದ್ ಶಮಿ (3) ವಿಕೆಟ್ ಪಡೆದು ಮಿಂಚಿದ್ದಾರೆ.
ಪ್ರಾರಂಭದಲ್ಲಿ ಕಳಪೆ ಆಟವಾಡಿದ್ದ ಆಸ್ಟ್ರೇಲಿಯಾ 189 ರನ್ ಗಳಿಸುವಷ್ಟರಲ್ಲಿ ಐದು ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ತಂಡಕ್ಕೆ ಆಸರೆಯಾದ ಶಾನ್ ಮಾರ್ಶ್ 123 ಎಸೆತಗಳಲ್ಲಿ 131 ರನ್ (11 ಬೌಂಡರಿ,3 ಸಿಕ್ಸರ್) ಕಲೆ ಹಾಕಿದ್ದರು.
ಆಲ್ ರೌಂಡರ್ ಮ್ಯಾಕ್ಸ್ ವೆಲ್ (48), ಇವರಿಗೆ ಉತ್ತಮ ಜತೆಯಾಗಿದ್ದರು.
ಇದೀಗ ಭಾರತ ಪಂದ್ಯ ಗೆಲ್ಲಲು 299 ರನ್ ಗಳಿಸಬೇಕಿದೆ. ಇತ್ತೀಚಿನ ವರದಿ ಬಂದಾಗ ಭಾರತ 5.2  ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 32/ರನ್ ಕಲೆ ಹಾಕಿದೆ. ಭಾರತದ ಪರ ಶಿಖರ್ ಧವನ್ (19) ಹಾಗೂ ರೋಹಿತ್ ಶರ್ಮಾ (9) ಕ್ರೀಸ್ ನಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.