ಆಸೀಸ್ ವಿರುದ್ಧ 1ನೇ ಓನ್ ಡೇ ಸೋತರೆ ಏನು, ಮುಂದೈತೆ ಹಬ್ಬ: ವಿಮಾನ ನಿಲ್ದಾಣದಲ್ಲಿ ಕೇದರ್ ಜಾದವ್ ಡ್ಯಾನ್ಸ್!
ವಿಮಾನ ನಿಲ್ದಾಣದಿಂದ ಟೀಂ ಇಂಡಿಯಾ ಆಟಗಾರರು ನಿರ್ಗಮಿಸಬೇಕಾದರೆ ಆಲ್ ರೌಂಡರ್ ಕೇದಾರ್ ಜಾದವ್ ಮಾಡಿರುವ ಡ್ಯಾನ್ಸ್ ಇದೀಗ ವೈರಲ್ ಆಗಿದೆ.

Published On :
ಸಿಡ್ನಿ: ಸಿಡ್ನಿಯಲ್ಲಿ ನಿನ್ನೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 34 ರನ್ ಗಳ ಅಂತರದಿಂದ ಸೋತಿದ್ದರೂ ಟೀಂ ಇಂಡಿಯಾ ಆಟಗಾರರು ಎದೆಗುಂದಿಲ್ಲ. ಅಡಿಲೇಡ್ ನಲ್ಲಿ ನಡೆಯಲಿರುವ ಎರಡನೇ ಪಂದ್ಯಕ್ಕಾಗಿಯೇ ಉತ್ಸಾಹದಿಂದಲೇ ತೆರಳಿದ್ದಾರೆ.
ವಿಮಾನ ನಿಲ್ದಾಣದಿಂದ ಟೀಂ ಇಂಡಿಯಾ ಆಟಗಾರರು ನಿರ್ಗಮಿಸಬೇಕಾದರೆ ಆಲ್ ರೌಂಡರ್ ಕೇದಾರ್ ಜಾದವ್ ಮಾಡಿರುವ ಡ್ಯಾನ್ಸ್ ಇದೀಗ ವೈರಲ್ ಆಗಿದೆ. ನಂತರ ಅಲ್ಲಿಯೇ ಇದ್ದ ರೋಹಿತ್ ಶರ್ಮಾ ಮತ್ತಿತರ ನಾಯಕರು ಕೇದಾರ್ ಜಾದವ್ ಗೆ ಕೈ ಕೊಡುವ ಮೂಲಕ ಅಭಿನಂದಿಸಿದ್ದಾರೆ. ಹೀಗೆ ಜಾಲಿ ಮೂಡ್ ನಲ್ಲಿಯೇ ಅಡಿಲೇಡ್ ಗೆ ಟೀಂ ಇಂಡಿಯಾ ಆಟಗಾರರು ತೆರಳಿದ್ದಾರೆ.
ರೋಹಿತ್ ಶರ್ಮಾ 133. ಧೋನಿ 51 ರನ್ ಗಳಿಸಿದ್ದರೂ ಟಾಪ್ ಹಾಗೂ ಮಾಧ್ಯಮ ಕ್ರಮಾಂಕದ ಆಟಗಾರರು ಕೈ ಕೊಟ್ಟಿದ್ದರಿಂದ ಸಿಡ್ನಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯವನ್ನು ಭಾರತ ಕೈ ಚೆಲ್ಲಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


