ಕ್ರಿಕೆಟ್

ನನ್ನ ಜೀವನದ ಅತ್ಯಂತ ಅವಿಸ್ಮರಣೀಯ ಕ್ಷಣ, ಇದಕ್ಕಿಂತ ದೊಡ್ಡ ಗೌರವದ ಸಂಗತಿ ಮತ್ತೊಂದಿಲ್ಲ: ವಿರಾಟ್ ಕೊಹ್ಲಿ

ಪ್ರಬಲ ಆಸ್ಟ್ರೇಲಿಯಾ ತಂಡವನ್ನು ಅದರ ನೆಲದಲ್ಲೇ ಬಗ್ಗು ಬಡಿದು ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಆಸಿಸ್ ವಿರುದ್ಧ ಅದರ ನೆಲದಲ್ಲೇ ಸರಣಿ ಜಯ ದಾಖಲಿಸಿದ ಟೀಂ ಇಂಡಿಯಾ ನಾಯಕ ಫುಲ್ ಖುಷ್ ಆಗಿದ್ದಾರೆ.

ನನ್ನ ಜೀವನದ ಅತ್ಯಂತ ಅವಿಸ್ಮರಣೀಯ ಕ್ಷಣ, ಇದಕ್ಕಿಂತ ದೊಡ್ಡ ಗೌರವದ ಸಂಗತಿ ಮತ್ತೊಂದಿಲ್ಲ: ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Published On :
ಸಿಡ್ನಿ: ಪ್ರಬಲ ಆಸ್ಟ್ರೇಲಿಯಾ ತಂಡವನ್ನು ಅದರ ನೆಲದಲ್ಲೇ ಬಗ್ಗು ಬಡಿದು ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಆಸಿಸ್ ವಿರುದ್ಧ ಅದರ ನೆಲದಲ್ಲೇ ಸರಣಿ ಜಯ ದಾಖಲಿಸಿದ ಟೀಂ ಇಂಡಿಯಾ ನಾಯಕ ಫುಲ್ ಖುಷ್ ಆಗಿದ್ದಾರೆ.
ಸಿಡ್ನಿಯಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯ ಮಳೆ ಕಾಟದಿಂದಾಗಿ ನೀರಸ ಡ್ರಾದಲ್ಲಿ ಅಂತ್ಯವಾದರೂ ಸರಣಿಯಲ್ಲಿ ಭಾರತ ತಂಡ 2-1ರ ಅಂತರದಲ್ಲಿ ಜಯ ಸಾಧಿಸಿ ಐತಿಹಾಸಿ ಟೆಸ್ಟ್ ಸರಣಿ ಜಯ  ದಾಖಲಿಸಿದೆ. ಈ ಬಗ್ಗೆ ವಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ನನ್ನ ಜೀವನದ ಅತ್ಯಂತ ಅವಿಸರಣೀಯ ಕ್ಷಣ, ಇದಕ್ಕಿಂತ ದೊಡ್ಡ ಗೌರವ ಸಂಗತಿ ಮತ್ತೊಂದಿಲ್ಲ ಎಂದು ಹೇಳಿದ್ದಾರೆ.
ಪಂದ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಣಿ ಜಯ ಶ್ರೇಯಸ್ಸು ಇಡೀ ತಂಡದ ಎಲ್ಲ ಸದಸ್ಯರಿಗೂ ಸಲ್ಲುತ್ತದೆ. ಪ್ರತಿಯೊಂದು ವಿಭಾಗದಲ್ಲೂ ನಮ್ಮನ್ನು ನಾವು ಪಂದ್ಯದಿಂದ ಪಂದ್ಯಕ್ಕೆ ಉತ್ತಮ ಪಡಿಸಿಕೊಂಡೆವು. ಬಹುಶಃ ಇದೇ ನಮ್ಮ ಯಶಸ್ಸಿನ ಕಾರಣವಾಗಿರಬಹುದು. ನನ್ನ ಪ್ರಕಾರ ವಿಶ್ವಕಪ್ ಗೆಲುವಿಗಿಂತಲೂ ಈ ಟೆಸ್ಟ್ ಸರಣಿ ಜಯದ ಖುಷಿ ದೊಡ್ಡದು . ನನ್ನ ಕ್ರಿಕೆಟ್ ಜೀವನದಲ್ಲೇ ಇದು ಅತ್ಯಂತ ಗೌರವದ ಕ್ಷಣವಾಗಿದೆ. ಕಳೆದ 12 ತಿಂಗಳ ಹಿಂದೆ ನನ್ನ ನಾಯಕನ ಜವಾಬ್ದಾರಿಯ ಜರ್ನಿ ಇಲ್ಲಿಂದಲೇ ಆರಂಭವಾಗಿತ್ತು. ಇದೇ ಕ್ರೀಡಾಂಗಣದಲ್ಲಿ ಆಸಿಸ್ ವಿರುದ್ಧ ಟೆಸ್ಟ್ ಸರಣಿ ಜಯಿಸಿರುವುದು ಅತ್ಯಂತ ಖುಷಿಗೆ ಕಾರಣವಾಗಿದೆ.
ಇದೇ ವೇಳೆ ತಂಡದ ಸಹ ಆಟಗಾರರ ಪ್ರದರ್ಶನದ ಕುರಿತು ಸಂತಸ ವ್ಯಕ್ತಪಡಿಸಿದ ಕೊಹ್ಲಿ, ಇಂತಹ ಅದ್ಭುತ ಆಟಗಾರರನ್ನು ಮುನ್ನಡೆಸಲು ನಿಜಕ್ಕೂ ನಾನು ಹೆಮ್ಮೆ ಪಡುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.