ಕ್ರಿಕೆಟ್

ಕಮಿಟ್ ಮೆಂಟ್ ಅಂದ್ರೆ ಇದೇ ಅಲ್ವಾ... ಔಟಾದ ಕೆಲವೇ ನಿಮಿಷಗಳಲ್ಲಿ ನೆಟ್ಸ್ ನಲ್ಲಿ ರಾಹುಲ್ ಕಠಿಣ ಅಭ್ಯಾಸ

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸತತ ವೈಫಲ್ಯ ಅನುಭವಿಸಿ ಟೀಕಾಕಾರರ ಕೆಂಗಣ್ಣಿಗೆ ಗುರಿಯಾಗಿರುವ ಕನ್ನಡಿಗ ಕೆಎಲ್ ರಾಹುಲ್ ಸಿಡ್ನಿಯಲ್ಲಿ ತಾವು ಔಟಾದ ಕೆಲವೇ ನಿಮಿಷಗಳಲ್ಲಿ ನೆಟ್ಸ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಕಮಿಟ್ ಮೆಂಟ್ ಅಂದ್ರೆ ಇದೇ ಅಲ್ವಾ... ಔಟಾದ ಕೆಲವೇ ನಿಮಿಷಗಳಲ್ಲಿ ನೆಟ್ಸ್ ನಲ್ಲಿ ರಾಹುಲ್ ಕಠಿಣ ಅಭ್ಯಾಸ
ಕೆಎಲ್ ರಾಹುಲ್
Published On :
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸತತ ವೈಫಲ್ಯ ಅನುಭವಿಸಿ ಟೀಕಾಕಾರರ ಕೆಂಗಣ್ಣಿಗೆ ಗುರಿಯಾಗಿರುವ ಕನ್ನಡಿಗ ಕೆಎಲ್ ರಾಹುಲ್ ಸಿಡ್ನಿಯಲ್ಲಿ ತಾವು ಔಟಾದ ಕೆಲವೇ ನಿಮಿಷಗಳಲ್ಲಿ ನೆಟ್ಸ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಹೌದು.. ಸಿಡ್ನಿಯಲ್ಲಿ ಆರಂಭವಾದ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ನಲ್ಲಿ ಅದೃಷ್ಟದ ಮೂಲಕ ಅವಕಾಶ ಗಿಟ್ಟಿಸಿದ ಕೆಎಲ್ ರಾಹುಲ್ ಖಂಡಿತಾ ಫಾರ್ಮ್ ಕಂಡುಕೊಂಡು ಬೃಹತ್ ಮೊತ್ತ ಪೇರಿಸಲಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ಮೊದಲ ಇನ್ನಿಂಗ್ಸ್ ಆರಂಭವಾದ ಕೆಲವೇ ನಿಮಿಷಗಳಲ್ಲಿ ಕೆಎಲ್ ರಾಹುಲ್ ಕೇವಲ 9 ರನ್ ಗಳಿಸಿ ಔಟ್ ಆಗಿ ಮತ್ತೆ ನಿರಾಶೆ ಮೂಡಿಸಿದರು. ರಾಹುಲ್ ಔಟಾಗುತ್ತಿದ್ದಂತೆಯೇ ಅವರ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾದವು.
ಅದರೆ ಅಚ್ಚರಿ ಎಂದರೆ ಇದಕ್ಕೆ ದೃತಿಗೆಡದ ರಾಹುಲ್ ಸಿಡ್ನಿಯಲ್ಲಿ ಔಟಾದ ಕೆಲವೇ ನಿಮಿಷಗಳಲ್ಲಿ ನೆಟ್ಸ್ ನಲ್ಲಿ ಕಾಣಿಸಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಅತ್ತ ಸಿಡ್ನಿಯ ಎಸ್ ಸಿಜಿ ಕ್ರೀಡಾಂಗಣದಲ್ಲಿ ಇನ್ನೂ ಭಾರತ ತಂಡ ಬ್ಯಾಟಿಂಗ್ ಮಾಡುತ್ತಿರುವಂತೆಯೇ ಸಮವಸ್ತ್ರದಲ್ಲೇ ನೆಟ್ಸ್ ಗೆ ದೌಡಾಯಿಸಿದ ರಾಹುಲ್ ಸೀದಾ ಅಭ್ಯಾಸಕ್ಕೆ ಇಳಿದಿದ್ದಾರೆ. ಆ ಮೂಲಕ ತಾವು ಔಟಾಗಿದ್ದು ಅಭ್ಯಾಸದ ಕೊರತೆಯಿಂದಲ್ಲ ಎಂದು ಪರೋಭವಾಗಿ ಟೀಕಾಕಾರರಿಗೆ ಉತ್ತರಿಸುವ ಪ್ರಯತ್ನ ಮಾಡಿದ್ದಾರೆ.
ರಾಹುಲ್ ನೆಟ್ಸ್ ನಲ್ಲಿ ಅಭ್ಯಾಸ ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.