ಕೆಎಲ್ ರಾಹುಲ್ ಗಿಂತಲೂ ಉತ್ತಮ 'ಓಪನರ್' ಹುಡುಕಿ ಕೊಟ್ಟ ಕ್ರಿಕೆಟ್ ಅಭಿಮಾನಿ!
ಆಸಿಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಫಾರ್ಮ್ ಕಂಡುಕೊಳ್ಳಲು ಹರಸಾಹಸ ಪಡುತ್ತಿರುವ ಕೆಎಲ್ ರಾಹುಲ್ ಸಿಡ್ನಿ ಟೆಸ್ಟ್ ನಲ್ಲೂ ವೈಫಲ್ಯ ಅನುಭವಿಸಿದ ಬೆನ್ನಲ್ಲೇ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ವ್ಯಾಪಕ ಟ್ರೋಲ್ ಮಾಡಲಾಗುತ್ತಿದೆ.

Published On :
ಸಿಡ್ನಿ: ಆಸಿಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಫಾರ್ಮ್ ಕಂಡುಕೊಳ್ಳಲು ಹರಸಾಹಸ ಪಡುತ್ತಿರುವ ಕೆಎಲ್ ರಾಹುಲ್ ಸಿಡ್ನಿ ಟೆಸ್ಟ್ ನಲ್ಲೂ ವೈಫಲ್ಯ ಅನುಭವಿಸಿದ ಬೆನ್ನಲ್ಲೇ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ವ್ಯಾಪಕ ಟ್ರೋಲ್ ಮಾಡಲಾಗುತ್ತಿದೆ.
ಆಸಿಸ್ ಟೆಸ್ಟ್ ಸರಣಿಗೆ ಆಯ್ಕೆಯಾಗಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಕನ್ನಡಿಗ ಕೆಎಲ್ ರಾಹುಲ್ ಮೈದಾನದಲ್ಲಿ ಸತತ ವೈಫಲ್ಯ ಅನುಭವಿಸಿದ್ದಾರೆ. ಮೆಲ್ಬೋರ್ನ್, ಪರ್ತ್ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ರಾಹುಲ್ ಬಾಕ್ಸಿಂಗ್ ಡೇ ಪಂದ್ಯದಿಂದ ಹೊರಗುಳಿಯಬೇಕಾಯಿತು. ಆದರೆ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಅದೃಷ್ಟವೇನೋ ಎಂಬಂತೆ ರಾಹುಲ್ ಗೆ ಮತ್ತೆ ಸಿಡ್ನಿ ಟೆಸ್ಟ್ ಗಾಗಿ ಮತ್ತೆ ಅವಕಾಶ ಅರಸಿ ಬಂತು.
ಆದರೆ ಅದೃಷ್ಟ ಒಲಿದರೂ ದುರಾದೃಷ್ಟದ ಕೈ ಮೇಲಾಗಿ ರಾಹುಲ್ ಮತ್ತೆ ಸಿಡ್ನಿಯಲ್ಲೂ ಕೇವಲ 9 ರನ್ ಗಳಿಗೆ ಔಟ್ ಆಗಿ ನಿರ್ಗಮಿಸಿದರು. ಆ ಮೂಲಕ ಮತ್ತೆ ರಾಹುಲ್ ವಿಫಲರಾಗಿ ಟೀಕಾಕಾರರಿಗೆ ಆಹಾರವಾಗಿದ್ದಾರೆ. ಇದೀಗ ಕೆ್ಎಲ್ ರಾಹುಲ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಅಸಮಾಧಾನ ವ್ಯಕ್ತವಾಗುತ್ತಿದ್ದು, ಕೆಲ ಅಭಿಮಾನಿಗಳಂತೂ ಟೀಂ ಇಂಡಿಯಾ ಓಪನರ್ ರಾಹುಲ್ ಗಿಂತ ರಾತ್ರಿ ಬಾಟಲ್ ಓಪನ್ ಮಾಡುವ ಓಪನರೇ ತುಂಬಾ ಉತ್ತಮ ಎಂದು ಕಿಡಿಕಾರಿದ್ದಾರೆ.
ಅಭಿಮಾನಿಗಳ ಟ್ವೀಟ್ ಗಳು ಇದೀಗ ವೈರಲ್ ಆಗುತ್ತಿದ್ದು, ಕೆಲವರು ಮ್ಯಾಗಿ ಮಾಡೋಕೆ ಇಟ್ಟಿದ್ದೆ. ನೀರಿನ್ನು ಕುದಿಯುತ್ತಿತ್ತು, ಅಷ್ಟರಲ್ಲೇ ರಾಹುಲ್ ಔಟಾಗಿಬಿಟ್ಟ ಎಂದು ಟ್ವೀಟ್ ಮಾಡಿದ್ದರೆ, ಮತ್ತೊಬ್ಬರು ಕೂಲ್ ಡ್ರಿಂಕ್ಸ್ ಓಪನ್ ಮಾಡೋ ಓಪನರ್ ಪೋಟೋ ಹಾಕಿ, ರಾಹುಲ್ಗಿಂತ ಇದೇ ಓಪನರ್ ಬೆಟರ್ ಎಂದು ಟ್ವೀಟ್ ಮಾಡಿದ್ದಾರೆ.
At least for 35 minutes KL Rahul was the highest run getter in 2019.
Nice little achievement!!!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


