'ಹೆಲೋ ಟಿಮ್ ಪೈನ್ ಸ್ಪೀಕಿಂಗ್': ಸುದ್ದಿಗೋಷ್ಠಿ ವೇಳೆ ಫೋನ್ ರಿಸೀವ್ ಮಾಡಿದ ಆಸಿಸ್ ನಾಯಕ, ವಿಡಿಯೋ ವೈರಲ್
ಟೀಂ ಇಂಡಿಯಾ ವಿರುದ್ಧ ಸ್ಲೆಡ್ಜಿಂಗ್ ಮೂಲಕ ಸುದ್ದಿಗೆ ಗ್ರಾಸವಾಗಿದ್ದ ಆಸಿಸ್ ನಾಯಕ ಟಿಮ್ ಪೈನ್ ತಮ್ಮ ಹಾಸ್ಯಾತ್ಮಕ ನಡವಳಿಕೆ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.

Published On :
ಸಿಡ್ನಿ: ಟೀಂ ಇಂಡಿಯಾ ವಿರುದ್ಧ ಸ್ಲೆಡ್ಜಿಂಗ್ ಮೂಲಕ ಸುದ್ದಿಗೆ ಗ್ರಾಸವಾಗಿದ್ದ ಆಸಿಸ್ ನಾಯಕ ಟಿಮ್ ಪೈನ್ ತಮ್ಮ ಹಾಸ್ಯಾತ್ಮಕ ನಡವಳಿಕೆ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.
ಟೀಂ ಇಂಡಿಯಾ ವಿರುದ್ಧದ ನಾಲ್ಕನೆ ಟೆಸ್ಟ್ ಪಂದ್ಯದ ವೇಳೆ ತಾವೊಬ್ಬ ಸರಳ ಸ್ನೇಹ ಜೀವಿ ಎಂಬುದನ್ನ ಟಿಮ್ ಪೈನ್ ಸಾಬೀತು ಪಡಿಸಿದ್ದು, 4ನೇ ಟೆಸ್ಟ್ ಪಂದ್ಯದ 2ನೇ ದಿನ ಮುಕ್ತಾಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಪೈನ್ ಪತ್ರಕರ್ತನ ಫೋನ್ ಗೆ ಉತ್ತರ ನೀಡಿದ್ದಾರೆ.
ಟಿಮ್ ಪೈನ್ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಅವರ ಮಾತು ರೆಕಾರ್ಡ್ ಮಾಡಲು ಫೋನ್ ವೊಂದು ಇರಿಸಲಾಗಿತ್ತು. ಸುದ್ದಿಗೋಷ್ಠಿ ಮಧ್ಯೆ ಅದು ರಿಂಗ್ ಆಗಲು ಆರಂಭಗೊಂಡಿದೆ. ಈ ವೇಳೆ ಮೊಬೈಲ್ ಎತ್ತಿಕೊಂಡ ಪೈನ್, ಯಾರ ಫೋನ್ ಎಂದು ಪ್ರಶ್ನೆ ಮಾಡಿದ್ರು.. ತದನಂತರ ಕಾಲ್ ರಿಸೀವ್ ಮಾಡಿ ಉತ್ತರವನ್ನೂ ನೀಡಿದ್ರು. ಹೆಲೋ ಟಿಮ್ ಪೈಮ್ ಮಾತನಾಡುತ್ತಿದ್ದೇನೆ.. ಯಾರಿದು.. ಯಾರು ಬೇಕಿತ್ತು ಎಂದು ಕೇಳಿದ್ದಾರೆ. ಅಲ್ಲದೆ ಪ್ರಸ್ತುತ ಸುದ್ದಿಗೋಷ್ಠಿಯಲ್ಲಿದ್ದು ಸುದ್ದಿಗೋಷ್ಠಿ ಬಳಿಕ ಮೇಲ್ ಚೆಕ್ ಮಾಡುವಂತೆ ಹೇಳುತ್ತೇನೆ ಎಂದು ಉತ್ತರಿಸಿದ್ದಾರೆ,
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.
A cheeky phone call derailed Tim Paine's press conference after play!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


