ರಿಷಭ್ ಪಂತ್ ಹಾಡಿನೊಂದಿಗೆ ಆಸ್ಟ್ರೇಲಿಯಾ ಕಾಲೆಳೆದ ಟೀಂ ಇಂಡಿಯಾ ಅಭಿಮಾನಿಗಳು!
ಭಾರತ ತಂಡದ ಅಧಿಕೃತ ಅಭಿಮಾನಿಗಳ ಸಂಘ ಭಾರತ ಆರ್ಮಿ ಉದಯವಾಗಿದ್ದು, ರಿಷಭ್ ಪಂತ್ ಪರ ಹಾಡಿನೊಂದಿಗೆ ಕಾಂಗರೂಗಳನ್ನು ಟ್ರೋಲ್ ಮಾಡುತ್ತಿದ್ದಾರೆ.

Published On :
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಎರಡನೇ ದಿನವಾದ ಇಂದು ವಿಕೆಟ್ ಕೀಪರ್ ರಿಷಭ್ ಪಂತ್ ಭರ್ಜರಿ ಪ್ರದರ್ಶನ ತೋರುತ್ತಿರುವಂತೆ ಭಾರತ ತಂಡದ ಅಧಿಕೃತ ಅಭಿಮಾನಿಗಳ ಸಂಘ ಭಾರತ ಆರ್ಮಿ ಉದಯವಾಗಿದ್ದು, ರಿಷಭ್ ಪಂತ್ ಪರ ಹಾಡಿನೊಂದಿಗೆ ಕಾಂಗರೂಗಳನ್ನು ಟ್ರೋಲ್ ಮಾಡುತ್ತಿದ್ದಾರೆ.
ಈ ಹಿಂದೆ ಮೆಲ್ಬರ್ನ್ ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ವೇಳೆಯಲ್ಲಿ ಪಂತ್ ಬ್ಯಾಟ್ ಮಾಡುವ ವೇಳೆ ಆಸೀಸ್ ನಾಯಕ ಟಿಮ್ ಪೇಯ್ನ್ ನೀನು ಬೇಟಿ ಸಿಟ್ಟಿಂಗ್ ಮಾಡು ಎಂದು ಸ್ಲೆಡ್ಜಿಂಗ್ ಮಾಡಿದ್ದರು.
ನಂತರ ಪಂದ್ಯ ಗೆದ್ದ ಬಳಿಕ ರಿಷಭ್ ಪಂತ್ ನೇರವಾಗಿ ಪೈನ್ ಮನೆಗೆ ಹೋಗಿ ಬೊನೀ ಪೈನ್ ಹಾಗೂ ಮಕ್ಕಳೊಂದಿಗೆ ಫೋಟೋಗೆ ಪೋಸ್ ಕೊಟ್ಟಿದ್ದರು. ಇದು ಸಾಕಷ್ಟು ವೈರಲ್ ಆಗಿತ್ತು.
ಇದಕ್ಕೆ ಈಗ ಭಾರತೀಯ ಅಭಿಮಾನಿಗಳು ಪ್ರೇಕ್ಷಕರ ಗ್ಯಾಲರಿಯಲ್ಲಿ ರಿಷಭ್ ಪಂತ್ ಪರ ಹಾಡು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ. ಭಾರತಕ್ಕೆ ರಿಷಬ್ ಪಂತ್ ಸಿಕ್ಕಿದ್ದಾರೆ. ಅವರು ಸಿಕ್ಸ್ ಕೂಡಾ ಬಾರಿಸುತ್ತಾರೆ. ನಿಮ್ಮ ಮಕ್ಕಳನ್ನೂ ನೋಡಿಕೊಳ್ಳುತ್ತಾರೆ ಎಂಬರ್ಥದಲ್ಲಿ ಹಾಡು ಹಾಡುತ್ತಿದ್ದಾರೆ. ರಿಷಭ್ ಪಂತ್ ಸಿಡ್ನಿ ಟೆಸ್ಟ್ ನಲ್ಲಿ 189 ಎಸೆತಗಳಲ್ಲಿ ಅಜೇಯ 159 ರನ್ ಗಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಕ್ರಿಕೆಟ್indiaAustraliaSydneysongಹಾಡುಸಿಡ್ನಿRishabh Pantಭಾರತ- ಆಸ್ಟ್ರೇಲಿಯಾCricket Offbeatರಿಷಭ್ ಪಂತ್Bharat Armyಭಾರತ್ ಆರ್ಮಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


