ಅಂಪೈರ್‌ಗೂ ಹೆಲ್ಮೆಟ್ ಬೇಕೆ ಬೇಕು, ಇಲ್ಲದ್ದಿದ್ದರೆ ಹೀಗೆ ಆಗೋದು; ವಿಡಿಯೋ ವೈರಲ್!
ಕ್ರಿಕೆಟ್ ನಲ್ಲಿ ಕೇವಲ ಬ್ಯಾಟ್ಸ್ ಮನ್, ವಿಕೆಟ್ ಕೀಪರ್ ಮಾತ್ರ ಹೆಲ್ಮೆಟ್ ಹಾಕಿಕೊಂಡರೆ ಸಾಲದು. ಅಂಪೈರ್‌ಗಳು ಸಹ ಹೆಲ್ಮೆಟ್ ಬಳಸುವುದು ಸೂಕ್ತ ಇಲ್ಲದಿದ್ದರೆ ಹೀಗೆ ಆಗೋದು.

Published On :
ನವದೆಹಲಿ: ಕ್ರಿಕೆಟ್ ನಲ್ಲಿ ಕೇವಲ ಬ್ಯಾಟ್ಸ್ ಮನ್, ವಿಕೆಟ್ ಕೀಪರ್ ಮಾತ್ರ ಹೆಲ್ಮೆಟ್ ಹಾಕಿಕೊಂಡರೆ ಸಾಲದು. ಅಂಪೈರ್‌ಗಳು ಸಹ ಹೆಲ್ಮೆಟ್ ಬಳಸುವುದು ಸೂಕ್ತ ಇಲ್ಲದಿದ್ದರೆ ಹೀಗೆ ಆಗೋದು.
ಹೌದು. ಇರಾನಿ ಕಪ್ ಟೂರ್ನಿಯ ವೇಳೆ ಅಂಪೈರಿಂಗ್ ಮಾಡುತ್ತಿದ್ದ ನಂದನ್ ಎಂಬುವರಿಗೆ ಫೀಲ್ಡರ್ ಎಸೆತ ಚೆಂಡು ತಲೆಗೆ ಬಿದ್ದಿದ್ದು ಪರಿಣಾಮ ಅಂಪೈರ್ ಮೈದಾನದಲ್ಲೇ ಕುಸಿದು ಬಿದ್ದರು.
ಕೆಳಗೆ ಬಿದ್ದ ನಂದನ್ ಅವರು ತೀವ್ರ ನೋವಿನಿಂದಾಗಿ ತಲೆಯನ್ನು ಉಜ್ಜಿಕೊಳ್ಳುತ್ತಿದ್ದರು. ಈ ವೇಳೆ ಮೈದಾನದಲ್ಲಿದ್ದ ಫೀಲ್ಡರ್ ಗಳು ಕೂಡಲೇ ಅವರ ನೆರವಿಗೆ ಬಂದರು. ಬಳಿಕ ಬಂದ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡಿತು.
ನಂತರ ನಂದನ್ ಅವರು ಎದ್ದು ನಗುಮುಖದೊಂದಿಗೆ ಅಂಪೈರಿಂಗ್ ಮಾಡಿದರು. ರೆಸ್ಟ್ ಆಫ್ ಇಂಡಿಯಾ ಹಾಗೂ ವಿದರ್ಭ ನಡುವಿನ ಪಂದ್ಯದ ನಡುವೆ ಈ ಘಟನೆ ನಡೆದಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Vidarbhaವಿದರ್ಭನಂದನ್Rest of Indiaರೆಸ್ಟ್ ಆಫ್ ಇಂಡಿಯಾIrani Cupಇರಾನಿ ಕಪ್ಅಂಪೈರ್UmpireCricket Offbeatಕ್ರಿಕೆಟ್ ಸ್ವಾರಸ್ಯNanda
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


