'ಬೇಬಿ ಸಿಟ್ಟರ್' ವೀರೇಂದ್ರ ಸೆಹ್ವಾಗ್ ಕಾಲೆಳೆದ ಮ್ಯಾಥ್ಯೂವ್ ಹೇಡನ್!
ಆಸ್ಟ್ರೇಲಿಯಾ ಹಾಗೂ ಟೀಂ ಇಂಡಿಯಾ ನಡುವಿನ ಸರಣಿ ಫೆಬ್ರವರಿ 24ರಿಂದ ಆರಂಭಗೊಳ್ಳುತ್ತಿದ್ದು ಈ ಹಿನ್ನೆಲೆಯಲ್ಲಿ ಸ್ಟಾರ್ ಸ್ಪೋರ್ಟ್ ಇಂಡಿಯಾದ ಜಾಹಿರಾತುವಿನಲ್ಲಿ...

Published On :
ಆಸ್ಟ್ರೇಲಿಯಾ ಹಾಗೂ ಟೀಂ ಇಂಡಿಯಾ ನಡುವಿನ ಸರಣಿ ಫೆಬ್ರವರಿ 24ರಿಂದ ಆರಂಭಗೊಳ್ಳುತ್ತಿದ್ದು ಈ ಹಿನ್ನೆಲೆಯಲ್ಲಿ ಸ್ಟಾರ್ ಸ್ಪೋರ್ಟ್ ಇಂಡಿಯಾದ ಜಾಹಿರಾತುವಿನಲ್ಲಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಆಸ್ಟ್ರೇಲಿಯಾ ಮಕ್ಕಳೊಂದಿಗೆ ಕಾಣಿಸಿಕೊಂಡಿದ್ದು ಇದಕ್ಕೆ ಮಾಜಿ ಕ್ರಿಕೆಟಿಗ ಮ್ಯಾಥ್ಯೂವ್ ಹೇಡನ್ ಸೆಹ್ವಾಗ್ ರನ್ನು ಕಾಲೆಳೆದಿದ್ದಾರೆ.
ಜಾಹಿರಾತುವಿನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಕ್ಕಳಿಗೆ ಹೋಲಿಕೆ ಮಾಡಲಾಗಿದೆ. ಈ ಜಾಹಿರಾತುವಿನಿಂದ ಬೇಸರಗೊಂಡಿರುವ ಹೇಡನ್ ಟ್ವೀಟ್ ಮಾಡಿ 'ಎಚ್ಚರಿಸುತ್ತಿದ್ದೇನೆ. ಆಸ್ಟ್ರೇಲಿಯನ್ನರನ್ನು ಜೋಕ್ ಆಗಿ ಪರಿಗಣಿಸಬೇಡಿ ವೀರೂ ಬಾಯ್. ವಿಶ್ವಕಪ್ ಟ್ರೋಫಿಯಲ್ಲಿ ಯಾರು ಬೇಬಿ ಸಿಟ್ಟರ್ ಆಗಿದ್ದರು ಎಂಬುದನ್ನು ನೆನಪು ಮಾಡಿಕೊಳ್ಳಿ ಎಂದು ಟ್ವೀಟಿಸಿದ್ದಾರೆ.
ಈ ಹಿಂದೆ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ ಆಸೀಸ್ ನಾಯಕ ಟಿಮ್ ಪೈನ್ ಹಾಗೂ ಟೀಂ ಇಂಡಿಯಾದ ಯುವ ಆಟಗಾರ ರಿಷಬ್ ಪಂತ್ ರನ್ನು ಬೇಬಿ ಸಿಟ್ಟಿಂಗ್ ಎಂದು ಕಾಲೆಳೆದಿದ್ದರು.
Every baby needs a babysitter -
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಆಸ್ಟ್ರೇಲಿಯಾಟೀಂ ಇಂಡಿಯಾAustraliaTeam IndiaVirender Sehwagವೀರೇಂದ್ರ ಸೆಹ್ವಾಗ್Cricket Offbeatಕ್ರಿಕೆಟ್ ಸ್ವಾರಸ್ಯBabysitterMatthew Haydenಮ್ಯಾಥ್ಯೂವ್ ಹೇಡನ್ಬೇಬಿ ಸಿಟ್ಟರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


