ಟೀಂ ಇಂಡಿಯಾ ಆಟಗಾರರ ಕಳಪೆ ಫೀಲ್ಡಿಂಗ್ ನೋಡಿ ಹಣೆ ಚಚ್ಚಿಕೊಂಡ ಹಾರ್ದಿಕ್ ಪಾಂಡ್ಯ, ವಿಡಿಯೋ ವೈರಲ್!
ನ್ಯೂಜಿಲ್ಯಾಂಡ್ ವಿರುದ್ಧದ ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಸೋಲು ಕಂಡಿದೆ. ಈ ಮಧ್ಯೆ ಟೀಂ ಇಂಡಿಯಾ ಆಟಗಾರರ ಮಿಸ್...

Published On :
ಹ್ಯಾಮಿಲ್ಟನ್: ನ್ಯೂಜಿಲ್ಯಾಂಡ್ ವಿರುದ್ಧದ ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಸೋಲು ಕಂಡಿದೆ. ಈ ಮಧ್ಯೆ ಟೀಂ ಇಂಡಿಯಾ ಆಟಗಾರರ ಮಿಸ್ ಫೀಲ್ಡಿಂಗ್ ನಿಂದ ಬೇಸರಗೊಂಡು ಹಾರ್ದಿಕ್ ಪಾಂಡ್ಯ ಹಣೆ-ಹಣೆ ಜಜ್ಜಿಕೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಪಂದ್ಯದ 12.5 ಓವರ್ ನಲ್ಲಿ ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಮನ್ರೋ ಥರ್ಡ್ ಮ್ಯಾನ್ ನಲ್ಲಿ ಕ್ಯಾಚ್ ನೀಡಿದ್ದರು. ಕುಲದೀಪ್ ಯಾದವ್ ಆ ಕ್ಯಾಚ್ ಮಿಸ್ ಮಾಡಿದ್ದರು. ಇದರಿಂದ ಬೇಸರಗೊಂಡ ಹಾರ್ದಿಕ್ ಹಣೆ ಜಜ್ಜಿಕೊಂಡರು.
ಒಟ್ಟಿನಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಮನ್ರೋ ಅವರ ಕ್ಯಾಚ್ ಅನ್ನು ಕುಲದೀಪ್ ಯಾದವ್ ಹಿಡಿದಿದ್ದರೆ ಪಂದ್ಯದ ಗತಿ ಸ್ವಲ್ಪ ಬದಲಾಗುತ್ತಿತ್ತೇನೋ. ಆದರೆ ಪದೇ ಪದೇ ಕಳಪೆ ಫೀಲ್ಡಿಂಗ್ ಮಾಡಿ ಟೀಂ ಇಂಡಿಯಾ ಆಟಗಾರರು ದುಬಾರಿಯಾಗುತ್ತಿದ್ದಾರೆ.
ಇದೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯರ ಬೌಲಿಂಗ್ ನಲ್ಲೇ ಮನ್ರೋ ಅವರ ಕ್ಯಾಚ್ ಅನ್ನು ಖಲೀಲ್ ಸಹ ಬಿಟ್ಟಿದ್ದರು. ಇದರಿಂದ ಬೇಸರಗೊಂಡ ಹಾರ್ದಿಕ್ ಅವರನ್ನು ಬೈಯ್ಯುವುದಕ್ಕಿಂತ ಬದಲಾಗಿ ತಮ್ಮ ಹಣೆಯನ್ನೇ ಜಜ್ಜಿಕೊಂಡಿದ್ದಾರೆ.
Kane OUT c Kuldeep Yadav b Ahmed
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಕ್ರಿಕೆಟ್ಟೀಂ ಇಂಡಿಯಾTeam IndiaNew Zealandನ್ಯೂಜಿಲ್ಯಾಂಡ್Hardik Pandyaಹಾರ್ದಿಕ್ ಪಾಂಡ್ಯCricket Offbeat3ನೇ ಟಿ20
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


