ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ 'ಬೇಬಿ ಸಿಟ್ಟರ್' ಭರ್ಜರಿ ತಯಾರಿ, ನೆಟ್ಸ್ ನಲ್ಲಿ ವಿಶೇಷ 'ಸ್ವಿಚ್ ಹಿಟ್' ಪ್ರಯೋಗ!
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಜಯಿಸಿರುವ ಭಾರತ ತಂಡ ಟಿ20 ಸರಣಿಗೆ ಭರ್ಜರಿ ತಯಾರಿಯನ್ನೇ ನಡೆಸಿದ್ದು, ಏಕದಿನ ಸರಣಿಯಿಂದ ದೂರ ಉಳಿದಿದ್ದ ಬೇಬಿ ಸಿಟ್ಟರ್ ರಿಷಬ್ ಪಂತ್ ಟಿ20 ಸರಣಿಗೆ ಭರ್ಜರಿ ತಯಾರಿ ನಡೆಸಿದ್ದಾರೆ.

Published On :
ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಜಯಿಸಿರುವ ಭಾರತ ತಂಡ ಟಿ20 ಸರಣಿಗೆ ಭರ್ಜರಿ ತಯಾರಿಯನ್ನೇ ನಡೆಸಿದ್ದು, ಏಕದಿನ ಸರಣಿಯಿಂದ ದೂರ ಉಳಿದಿದ್ದ ಬೇಬಿ ಸಿಟ್ಟರ್ ರಿಷಬ್ ಪಂತ್ ಟಿ20 ಸರಣಿಗೆ ಭರ್ಜರಿ ತಯಾರಿ ನಡೆಸಿದ್ದಾರೆ.
ಕಿವೀಸ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ನೆಟ್ಸ್ ನಲ್ಲಿ ಭರ್ಜರಿ ಅಭ್ಯಾಸದಲ್ಲಿ ತೊಡಗಿರುವ ರಿಷಬ್ ಪಂತ್ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಓರೆಗೆ ಹಚ್ಚಿದ್ದಾರೆ. ಗಂಟೆಗಳ ಕಾಲ ನೆಟ್ಸ್ ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡಿದ ಪಂತ್, ತಮ್ಮ ಬತ್ತಳಿಕೆಯಲ್ಲಿರುವ ಎಲ್ಲ ಬಗೆ ಹೊಡೆತಗಳನ್ನು ಪ್ರಯೋಗಿಸುತ್ತಿದ್ದಾರೆ.
ಈ ಕುರಿತು ಬಿಸಿಸಿಐ ತನ್ನ ಟ್ವಿಟರ್ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದು, ರಿಷಬ್ ಪಂತ್ ಸ್ವಿಚ್ ಹಿಟ್ ಆಡಿದ ರೀತಿಯನ್ನು ಅಪ್ಲೋಡ್ ಮಾಡಿದೆ. ಕೆಳಮಟ್ಟದಲ್ಲಿ ಬರುವ ಚೆಂಡುಗಳು ಸಾಮಾನ್ಯವಾಗಿ ಬ್ಯಾಟ್ಸಮನ್ ಗಳಿಗೆ ಅಪಾಯ ತಂದೊಡ್ಡುತ್ತದೆ. ಆದರೆ ಈ ಬಗೆಯ ಚೆಂಡುಗಳನ್ನೂ ದಂಡಿಸುವ ಕಲೆಯನ್ನು ವಿಶ್ವಕ್ಕೆ ತೋರಿಸಿಕೊಟ್ಟಿದ್ದು ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಕೆವಿನ್ ಪೀಟರ್ಸನ್.. ಈ ಹೊಡೆತಕ್ಕೆ ಸ್ವಿಚ್ ಹಿಟ್ ಎಂದು ಹೆಸರಿಡಲಾಗಿದ್ದು, ಇದೇ ಶಾಟ್ ಅನ್ನು ಪಂತ್ ಪ್ರಯೋಗಿಸುವ ಮೂಲಕ ತಾವು ಟಿ20 ಸರಣಿಗೆ ಸಿದ್ಧ ಎಂಬ ಸಂದೇಶ ರವಾನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್indiaಭಾರತNew Zealandಐಸಿಸಿನ್ಯೂಜಿಲೆಂಡ್ವೆಲ್ಲಿಂಗ್ಟನ್WellingtonRishabh Pantರಿಷಬ್ ಪಂತ್ಸ್ವಿಚ್ ಹಿಟ್Switch-Hit
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


