ಕ್ರಿಕೆಟ್

ಒಂದೇ ಪಂದ್ಯದಲ್ಲಿ ಎರಡೆರಡು ದ್ವಿಶತಕ: ಲಂಕಾ ಆಟಗಾರ ಎಂಜೆಲೋ ಪೆರೇರಾ ಅಪರೂಪದ ದಾಖಲೆ!

200 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲೇ ಅತೀ ಅಪರೂಪದ ದಾಖಲೆಯೊಂದು 2ನೇ ಬಾರಿಗೆ ದಾಖಲಾಗಿದ್ದು, ಒಂದೇ ಪಂದ್ಯದಲ್ಲಿ ಬ್ಟಾಟ್ಸಮನ್ ಓರ್ವ ಎರಡೆರೆಡು ದ್ವಿಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾನೆ.

ಒಂದೇ ಪಂದ್ಯದಲ್ಲಿ ಎರಡೆರಡು ದ್ವಿಶತಕ: ಲಂಕಾ ಆಟಗಾರ ಎಂಜೆಲೋ ಪೆರೇರಾ ಅಪರೂಪದ ದಾಖಲೆ!
ಸಂಗ್ರಹ ಚಿತ್ರ
Published On :
ಕೊಲಂಬೊ: 200 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲೇ ಅತೀ ಅಪರೂಪದ ದಾಖಲೆಯೊಂದು 2ನೇ ಬಾರಿಗೆ ದಾಖಲಾಗಿದ್ದು, ಒಂದೇ ಪಂದ್ಯದಲ್ಲಿ ಬ್ಟಾಟ್ಸಮನ್ ಓರ್ವ ಎರಡೆರೆಡು ದ್ವಿಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾನೆ.
ಹೌದು.. ಶ್ರೀಲಂಕಾದ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಈ ಅಪರೂಪದ ದಾಖಲೆ ಸೃಷ್ಟಿಯಾಗಿದ್ದು, ಲಂಕಾದ 28 ವರ್ಷದ ಬ್ಯಾಟ್ಸ್​ಮನ್ ಪೆರೇರಾ ತಾವಾಡಿದ ಎರಡೂ ಇನ್ನಿಂಗ್ಸ್ ನಲ್ಲಿ ದ್ವಿಶತಕ ಸಾಧನೆ ಮಾಡಿ ಈ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.
ನಾಂಡೆಸ್ಟ್ರಿಪ್ಟ್ಸ್ ಕ್ರಿಕೆಟ್ ಕ್ಲಬ್ ತಂಡದ ನಾಯಕರೂ ಆಗಿರುವ ಏಂಜೆಲೊ ಪೆರೇರಾ ದೇಶೀಯ ಪಂದ್ಯದ ಎರಡೂ ಇನಿಂಗ್ಸ್ ಗಳಲ್ಲಿ ದ್ವಿಶತಕ ಸಿಡಿಸುವ ಮೂಲಕ 81 ವರ್ಷ ಹಿಂದಿನ ದಾಖಲೆ ಸರಿಗಟ್ಟಿದ್ದಾರೆ. ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ವಿರುದ್ಧದ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ 28 ವರ್ಷದ ಬ್ಯಾಟ್ಸ​ಮನ್ ಪೆರೇರಾ ಮೊದಲ ಇನಿಂಗ್ಸ್​ನಲ್ಲಿ 203 ಎಸೆತಗಳಲ್ಲಿ 201 ರನ್ ಬಾರಿಸಿದ್ದರೆ, 2ನೇ ಇನಿಂಗ್ಸ್ ನಲ್ಲಿ 268 ಎಸೆತಗಳಲ್ಲಿ 231 ರನ್ ಸಿಡಿಸಿದರು.  ಆ ಮೂಲಕ ಈ ಅತ್ಯಪರೂಪದ ದಾಖಲೆಗೆ ಪೆರೆರಾ ಪಾತ್ರರಾದರು.
ಪಿ ಸಾರಾ ಓವಲ್ ಮೈದಾನದಲ್ಲಿ ನಡೆದ 4 ದಿನಗಳ ಈ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಪೆರೇರಾ ಲಂಕಾ ತಂಡದ ಪರ ಇದುವರೆಗೆ 4 ಏಕದಿನ ಮತ್ತು 2 ಟಿ20 ಪಂದ್ಯ ಆಡಿದ್ದರೂ, ಹೆಚ್ಚಿನ ಯಶ ಕಂಡಿಲ್ಲ. ಕ್ರಿಕೆಟ್ ಇತಿಹಾಸದಲ್ಲಿ ಕೇವಲ 2ನೇ ಬಾರಿ ಮಾತ್ರ ಇಂಥಹ ಸಾಧನೆ ದಾಖಲಾಗಿದೆ. 1938ರಲ್ಲಿ ಇಂಗ್ಲೆಂಡ್ ನಲ್ಲಿ ಮೊದಲ ಬಾರಿ ಈ ಸಾಧನೆ ದಾಖಲಾಗಿತ್ತು. ಕೆಂಟ್ ಬ್ಯಾಟ್ಸಮನ್ ಆರ್ಥರ್ ಫಾಗ್, ಎಸೆಕ್ಸ್ ವಿರುದ್ಧದ ಪಂದ್ಯದಲ್ಲಿ ಕ್ರಮವಾಗಿ 244 ಮತ್ತು ಅಜೇಯ 202 ರನ್ ಸಿಡಿಸಿದ್ದರು. ಇದು ಕ್ರೆಕೆಟ್ ಇತಿಹಾಸದಲ್ಲೇ ದಾಖಲಾದ ಮೊದಲ ಎರೆಡರೆಡು ದ್ವಿಶತಕವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.