ಕ್ರಿಕೆಟ್

ಐಸಿಸಿ ಟೆಸ್ಟ್ ಶ್ರೇಯಾಂಕ: ಅಗ್ರ ಸ್ಥಾನದಲ್ಲೇ ಮುಂದುವರಿದ ವಿರಾಟ್ ಕೊಹ್ಲಿ

ಅಂತಾರಾಷ್ಟೀಯ ಕ್ರಿಕೆಟ್ ಸಮಿತಿ ಸೋಮವಾರ ಬಿಡುಗಡೆ ಮಾಡಿರುವ ಐಸಿಸಿ ಟೆಸ್ಟ್‌ ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ಟೀಮ್‌ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಐಸಿಸಿ ಟೆಸ್ಟ್ ಶ್ರೇಯಾಂಕ: ಅಗ್ರ ಸ್ಥಾನದಲ್ಲೇ ಮುಂದುವರಿದ ವಿರಾಟ್ ಕೊಹ್ಲಿ
ಸಂಗ್ರಹ ಚಿತ್ರ
Published On :

ದುಬೈ: ಅಂತಾರಾಷ್ಟೀಯ ಕ್ರಿಕೆಟ್ ಸಮಿತಿ ಸೋಮವಾರ ಬಿಡುಗಡೆ ಮಾಡಿರುವ ಐಸಿಸಿ ಟೆಸ್ಟ್‌ ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ಟೀಮ್‌ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಕಳೆದ ಆಷಸ್ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್‌ ಅವರು ಕೊಹ್ಲಿ ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದ್ದರು. ಆದರೆ, ಕಳೆದ ತಿಂಗಳು ನಡೆದಿದ್ದ ಕೋಲ್ಕತಾದ ಈಡನ್‌ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ 136 ರನ್ ಗಳಿಸಿ ಡಿಸೆಂಬರ್ ಮೊದಲ ವಾರದಲ್ಲಿ ಸ್ಮಿತ್‌ ಹಿಂದಿಕ್ಕಿ ಮತ್ತೆ ಅಗ್ರ ಸ್ಥಾನಕ್ಕೇರಿದ್ದರು. ಭಾನುವಾರ ಮುಕ್ತಾಯವಾಗಿದ್ದ ನ್ಯೂಜಿಲೆಂಡ್ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಸ್ಮಿತ್ ಕ್ರಮವಾಗಿ 43 ಹಾಗೂ 16 ರನ್‌ ಗಳಿಗೆ ಸೀಮಿತರಾಗಿದ್ದರು. ಕೊಹ್ಲಿ ಖಾತೆಯಲ್ಲಿ 928 ಅಕಗಳಿದ್ದು, ಸ್ಮಿತ್ 17 ಪಾಯಿಂಟ್ ಕಡಿಮೆ ಇದ್ದಾರೆ. ಕಿವೀಸ್ ವಿರುದ್ಧ ಈ ಪಂದ್ಯದಲ್ಲಿ ಆಸೀಸ್ 296 ರನ್ ಗಳಿಂದ ಜಯ ಸಾಧಿಸಿತ್ತು.

ಭಾರತದ ಚೇತೇಶ್ವರ ಪೂಜಾರ ಹಾಗೂ ಅಂಜಿಂಕ್ಯ ರಹಾನೆ ಕ್ರಮವಾಗಿ 4 ಮತ್ತು 6ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಮಾರ್ನಸ್‌ ಲಾಬುಶೇನ್‌ ಹಾಗೂ ಬಾಬರ್‌ ಅಜಮ್‌ ಶ್ರೇಯಾಂಕದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಗಮನಾರ್ಹ ಪ್ರದರ್ಶನ ತೋರಿರುವ ಮಾರ್ನಸ್ ಲಾಬುಶೇನ್‌ ಅವರು ಮೂರು ಸ್ಥಾನಗಳಲ್ಲಿ ಜಿಗಿದು 5ನೇ ಸ್ಥಾನ ಪಡೆದಿದ್ದಾರೆ. ಆ ಮೂಲಕ ಸಹ ಆಟಗಾರ ಡೇವಿಡ್ ವಾರ್ನರ್‌ ಅವರನ್ನು ಹಿಂದಿಕ್ಕಿದರು. ಸ್ಮಿತ್‌ ಬಳಿಕ ಅತಿ ಹೆಚ್ಚು ಶ್ರೇಯಾಂಕ ಹೊಂದಿದೆ ಆಸೀಸ್ ಎರಡನೇ ಆಟಗಾರ ಎಂಬ ಕೀರ್ತಿಗೆ ಲಾಬುಶೇನ್‌ ಪಾತ್ರರಾದರು.

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಜೇಯ 102 ರನ್‌ ಗಳಿಸಿದ ಬಾಬರ್ ಅಜಮ್ ಅವರು ಅಗ್ರ 10ರೊಳಗೆ ಸ್ಥಾನ ಪಡೆದಿದ್ದಾರೆ. 13 ರಿಂದ 9ನೇ ಶ್ರೇಯಾಂಕಕ್ಕೆ ತಲುಪಿದ್ದಾರೆ. ಇವರು ಟಿ-20 ಶ್ರೇಯಾಂಕದಲ್ಲಿ ಅಗ್ರ ಸ್ಥಾನ ಹಾಗೂ ಏಕದಿನ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡ 216 ಅಂಕಗಳನ್ನು ಪಡೆದು ಎರಡನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ 60 ಅಂಕದಲ್ಲಿ ಉಳಿದಿದೆ.

ಪಂದ್ಯ ಡ್ರಾ ಆಗಿದ್ದರಿಂದ ಶ್ರೀಲಂಕಾ ಹಾಗೂ ಪಾಕಿಸ್ತಾನ ತಲಾ 20 ಅಂಕಗಳನ್ನು ಹಂಚಿಕೊಂಡವು. ಇದೀಗ ಲಂಕಾ ೮೦ ಅಂಕಗಳನ್ನು ಪಡೆದುಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.