ರಣಜಿ ಟ್ರೋಫಿ: ಅಂಗಳದಲ್ಲಿ ಹಾವು ಪ್ರತ್ಯಕ್ಷ, ಕೆಲಕಾಲ ಪಂದ್ಯ ಸ್ಥಗಿತ- ವಿಡಿಯೋ
ಆಂಧ್ರ ಹಾಗೂ ವಿದರ್ಭ ತಂಡಗಳ ನಡುವೆ 2019/20ನೇ ಆವೃತ್ತಿಯ ರಣಜಿ ಟ್ರೋಫಿ ಎ ಗುಂಪಿನ ಪಂದ್ಯದ ವೇಳೆ ಆಕಸ್ಮಿಕವಾಗಿ ಹಾವು ಅಂಗಳಕ್ಕೆ ಪ್ರವೇಶ ಮಾಡಿತು. ಹಾಗಾಗಿ, ಪಂದ್ಯವನ್ನು ಕೆಲಕಾಲ ನಿಲ್ಲಿಸಲಾಗಿತ್ತು.

ವಿಜಯವಾಡ: ಆಂಧ್ರ ಹಾಗೂ ವಿದರ್ಭ ತಂಡಗಳ ನಡುವೆ 2019/20ನೇ ಆವೃತ್ತಿಯ ರಣಜಿ ಟ್ರೋಫಿ ಎ ಗುಂಪಿನ ಪಂದ್ಯದ ವೇಳೆ ಆಕಸ್ಮಿಕವಾಗಿ ಹಾವು ಅಂಗಳಕ್ಕೆ ಪ್ರವೇಶ ಮಾಡಿತು. ಹಾಗಾಗಿ, ಪಂದ್ಯವನ್ನು ಕೆಲಕಾಲ ನಿಲ್ಲಿಸಲಾಗಿತ್ತು. ಹಾವಿನ ವೀಡಿಯೋವನ್ನು ಬಿಸಿಸಿಐ ಡೊಮೆಸ್ಟಿಕ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಉಭಯ ತಂಡಗಳ ನಡುವಿನ ಪ್ರಸಕ್ತ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಟಾಸ್ ಗೆದ್ದು ವಿದರ್ಭ ತಂಡದ ನಾಯಕ ಫೈಜ್ ಫಜಲ್ ಫೀಲ್ಡಿಂಗ್ ಆಯ್ದುಕೊಂಡರು.
ಈ ವೇಳೆ ಹಾವು ಅಂಗಳ ಪ್ರವೇಶ ಮಾಡಿದ್ದರಿಂದ ತೀರ್ಪುಗಾರರು ಪಂದ್ಯವನ್ನು ನಿಲ್ಲಿಸಿದರು. ನಂತರ, ಅಂಗಳದ ಸಿಬ್ಬಂದಿ ಹಾವನ್ನು ಮೈದಾನದಿಂದ ಹೊರ ಅಟ್ಟುವಲ್ಲಿ ಯಸ್ವಿಯಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


