ಕ್ರಿಕೆಟ್

ರಿಷಬ್ ಪಂತ್ ಭಾರತೀಯ ಕ್ರಿಕೆಟ್‌ನಲ್ಲಿ ಸಂಪೂರ್ಣ ಸೂಪರ್‌ಸ್ಟಾರ್ ಆಗಬಹುದು: ಕೇವಿನ್ ಪೀಟರ್ಸನ್

ಟೀಂ ಇಂಡಿಯಾದ ಯುವ ಕೀಪರ್ ರಿಷಬ್ ಪಂತ್ ಯುವ ಆಟಗಾರನಾಗಿದ್ದು ಅವರಿಗೆ ಭಾರತೀಯ ಕ್ರಿಕೆಟ್ ನಲ್ಲಿ ಸೂಪರ್ ಸ್ಟಾರ್ ಆಗಿ ಗುರುತಿಸಿಕೊಳ್ಳುವ ಅವಕಾಶ ಹೆಚ್ಚಿದೆ ಎಂದು ಮಾಜಿ ಇಂಗ್ಲೆಂಡ್ ನಾಯಕ ಕೇವಿನ್ ಪೀಟರ್ಸನ್ ಹೇಳಿದ್ದಾರೆ.

ರಿಷಬ್ ಪಂತ್ ಭಾರತೀಯ ಕ್ರಿಕೆಟ್‌ನಲ್ಲಿ ಸಂಪೂರ್ಣ ಸೂಪರ್‌ಸ್ಟಾರ್ ಆಗಬಹುದು: ಕೇವಿನ್ ಪೀಟರ್ಸನ್
ರಿಷಬ್ ಪಂತ್
Published On :

ನವದೆಹಲಿ: ಟೀಂ ಇಂಡಿಯಾದ ಯುವ ಕೀಪರ್ ರಿಷಬ್ ಪಂತ್ ಯುವ ಆಟಗಾರನಾಗಿದ್ದು ಅವರಿಗೆ ಭಾರತೀಯ ಕ್ರಿಕೆಟ್ ನಲ್ಲಿ ಸೂಪರ್ ಸ್ಟಾರ್ ಆಗಿ ಗುರುತಿಸಿಕೊಳ್ಳುವ ಅವಕಾಶ ಹೆಚ್ಚಿದೆ ಎಂದು ಮಾಜಿ ಇಂಗ್ಲೆಂಡ್ ನಾಯಕ ಕೇವಿನ್ ಪೀಟರ್ಸನ್ ಹೇಳಿದ್ದಾರೆ.

ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಇನ್ನೂ ಕೆಲವು ವರ್ಷಗಳು ಇರುವುದರಿಂದ ರಿಷಭ್ ಪಂತ್‌ಗೆ ಪ್ರಬುದ್ಧತೆಗೆ ಸಮಯ ನೀಡಬೇಕಾಗಿದೆ ಎಂದು ಕೆವಿನ್ ಪೀಟರ್ಸನ್ ಅಭಿಪ್ರಾಯಪಟ್ಟಿದ್ದಾರೆ.

22ರ ಹರೆಯದ ರಿಷಬ್ ಪಂತ್ ಬ್ಯಾಟಿಂಗ್ ಮತ್ತು ಸ್ಟಂಪ್ಗಳ ಹಿಂದೆ ಪರಿಣಾಮಕಾರಿಯಾಗಿ ಆಡಲು ಹೆಣಗಾಡಿದ್ದಾರೆ. ಜೊತೆಗೆ ಕೆಟ್ಟ ಡಿಆರ್ಎಸ್ ತೆಗೆದುಕೊಳ್ಳುವ ಮೂಲಕ ಟೀಕೆಗಳನ್ನು ಪಂತ್ ಎದುರಿಸುತ್ತಿದ್ದಾರೆ. 

ರಿಷಬ್ ಪಂತ್ ಇನ್ನು ಯುವಕ ಮತ್ತು ಆತನಿಗೆ ಶಕ್ತಿ ಮತ್ತು ಉತ್ಸಾಹ ಹೆಚ್ಚಿದೆ. ರಿಷಬ್ ಐಪಿಎಲ್ ಮತ್ತು ಭಾರತ ತಂಡದಲ್ಲಿಯೂ ಆಡುತ್ತಾನೆ. ಆತ ತನ್ನದೆ ಆದ ಕನಸ್ಸಿನಲ್ಲಿ ಜೀವಿಸುತ್ತಿದ್ದಾನೆ. ಪ್ರತಿಯೊಬ್ಬರ ಸುತ್ತಲೂ ಸಾಕಷ್ಟು ವಿಮರ್ಶಕರು ಇದ್ದೇ ಇರುತ್ತಾರೆ ಎಂದು ಸ್ಟಾರ್ ಸ್ಪೋರ್ಟ್ಸ್ ನ ನೆರೋಲಾಕ್ ಕ್ರಿಕೆಟ್ ಲೈವ್ ನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.