ವಿರಾಟ್ ಕೊಹ್ಲಿಯನ್ನು ಕೆಣಕಲು ಹೋಗಬೇಡಿ: ಬೌಲರ್‌ಗಳಿಗೆ ಬಚ್ಚನ್ ಎಚ್ಚರಿಸಿದ್ದೇಕೆ?
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸದ್ಯ ಶಾಂತ ರೂಪರಾಗಿ ಕಾಣಬಹುದು ಆದರೆ ಅವರನ್ನು ಕೆಣಕಲು ಮಾತ್ರ ಹೋಗಬೇಡಿ ಎಂದು ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಎದುರಾಳಿ ಬೌಲರ್‌ಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸದ್ಯ ಶಾಂತ ರೂಪರಾಗಿ ಕಾಣಬಹುದು ಆದರೆ ಅವರನ್ನು ಕೆಣಕಲು ಮಾತ್ರ ಹೋಗಬೇಡಿ ಎಂದು ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಎದುರಾಳಿ ಬೌಲರ್‌ಗಳಿಗೆ ಎಚ್ಚರಿಕೆ ನೀಡಿದ್ದಾರೆ.
ವಿಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ 6 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ. ಇದಕ್ಕೆ ಕಾರಣವಾಗಿದ್ದು ಟೀಂ ಇಂಡಿಯಾ ನಾಯಕ. ಹೌದು ವಿರಾಟ್ ಕೊಹ್ಲಿ 50 ಎಸೆತಗಳಲ್ಲಿ 94 ರನ್ ಪೇರಿಸಿ ಗೆಲುವಿನ ಸಿಹಿ ಉಣಿಸಿದ್ದರು.
ಅಲ್ಲದೆ ಕೊಹ್ಲಿಯ ಬ್ಯಾಟಿಂಗ್ ಆರ್ಭಟ ಕಂಡು ವಿಂಡೀಸ್ ಬೌಲರ್ ದಂಗಾಗಿ ಹೋಗಿದ್ದರು. ಇನ್ನು ಎರಡು ವರ್ಷಗಳ ಹಿಂದೆ ಹೀಯಾಳಿಸಿದ್ದಕ್ಕೆ ವಿಂಡೀಸ್ ಬೌಲರ್ ವಿಲಿಯಮ್ಸ್ ಅವರ ವಿರುದ್ಧ ನಿನ್ನೆ ಸೇಡು ತೀರಿಸಿಕೊಂಡಿದ್ದರು. ಇದಕ್ಕೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಟ್ವೀಟ್ ಮಾಡಿ ಕೊಹ್ಲಿಯನ್ನು ಕೆಣಕಬೇಡಿ ಎಂದು ಎಚ್ಚರಿಸಿದರು.
ನಾನು ಎಷ್ಟು ಸಲ ಹೇಳಿದ್ದೇನೆ ವಿರಾಟ್ ಕೊಹ್ಲಿಯನ್ನು ಕೆಣಕಬೇಡಿ ಎಂದು. ಆದರೆ ನೀವು ಕೇಳುವುದಿಲ್ಲ. ಈಗ ಕೊಹ್ಲಿ ನಿಮಗೆ ಸರಿಯಾಗಿ ಉತ್ತರ ನೀಡಿದ್ದಾರೆ. ವಿಂಡೀಸರ ಮುಖಗಳನ್ನು ನೋಡಿ ಬಚ್ಚನ್ ಅಮರ್ ಅಕ್ಬರ್ ಅಂತೋನಿ ಶೈಲಿಯಲ್ಲಿ ವಿಂಡೀಸ್ ಬೌಲರ್ ಗಳಿಗೆ ಎಚ್ಚರಿಕೆ ನೀಡಿದ್ದಾರೆ.
2017ರಲ್ಲಿ ವಿಂಡೀಸ್ ಪ್ರವಾಸದಲ್ಲಿ ಜಮೈಕಾ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ವಿರಾಟ್ ಕೊಹ್ಲಿಯ ವಿಕೆಟ್ ಪಡೆದಿದ್ದ ವಿಲಿಯಮ್ಸ್ ಅಂದು ನೋಟ್ ಬುಕ್ ನಲ್ಲಿ ಬರೆದಿಡುವಂತೆ ಸನ್ಹೆ ಮಾಡಿದ್ದರು. ಇದಾದ ಎರಡು ವರ್ಷಗಳ ಬಳಿಕ ವಿಲಿಯಮ್ಸ್ ಗೆ ಭರ್ಜರಿ ಸಿಕ್ಸರ್ ಬಾರಿಸಿದ ಕೊಹ್ಲಿ ಅದೇ ನೋಟ್ ಬುಕ್ ಸನ್ಹೆ ಮೂಲಕ ತಿರುಗೇಟು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


