ಕರ್ನಾಟಕ ವಿರುದ್ಧ ಗೆಲುವಿಗೂ ಮುನ್ನ ಸಂಭ್ರಮಿಸಿದ್ದ ಅಶ್ವಿನ್ ಕಾಲೆಳೆದ ಟ್ವೀಟರಿಗರು, ವಿಡಿಯೋ ವೈರಲ್!
ಟೀಂ ಇಂಡಿಯಾ ಕ್ರಿಕೆಟಿಗ ಆರ್ ಅಶ್ವಿನ್ ಅವರನ್ನು ಬಾಂಗ್ಲಾ ಬ್ಯಾಟ್ಸ್ ಮನ್ ಗೆ ಹೋಲಿಸಿ ಟ್ವೀಟರಿಗರು ಕಾಲೆಳೆದಿದ್ದಾರೆ.

ಸೂರತ್: ಟೀಂ ಇಂಡಿಯಾ ಕ್ರಿಕೆಟಿಗ ಆರ್ ಅಶ್ವಿನ್ ಅವರನ್ನು ಬಾಂಗ್ಲಾ ಬ್ಯಾಟ್ಸ್ ಮನ್ ಗೆ ಹೋಲಿಸಿ ಟ್ವೀಟರಿಗರು ಕಾಲೆಳೆದಿದ್ದಾರೆ.
ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ತಮಿಳುನಾಡು ಸೆಣೆಸಿತ್ತು. ಈ ಪಂದ್ಯ ಕೊನೆಯ ಎಸೆತದವರೆಗೂ ರೋಚಕತೆಯಿಂದ ಕೂಡಿತ್ತು. ಇನ್ನು ಜಿದ್ದಾ ಜಿದ್ದಿನ ಹೋರಾಟದಲ್ಲಿ ಕರ್ನಾಟಕ 1 ರನ್ ನಿಂದ ರೋಚಕ ಗೆಲುವು ಸಾಧಿಸಿತ್ತು.
ಆದರೆ ತಮಿಳುನಾಡು ಪರ ಆಡಿದ್ದ ಆರ್ ಅಶ್ವಿನ್ ಮಾತ್ರ ನಾವು ಗೆದ್ದೆ ಬಿಟ್ಟೇವು ಎಂಬಂತೆ ಮೈದಾನದಲ್ಲಿ ಸಂಭ್ರಮಿಸಿದ್ದಕ್ಕೆ ನೆಟಿಗರು ಗರಂ ಆಗಿದ್ದು ಬಾಂಗ್ಲಾದ ಬ್ಯಾಟ್ಸ್ ಮನ್ ಮುಷ್ಫಿಕರ್ ರೆಹಮಾನ್ ಗೆ ಹೋಲಿಸಿ ಕಾಲೆಳೆದಿದ್ದಾರೆ.
ಅಂತಿಮ ಓವರ್ ನಲ್ಲಿ ತಮಿಳುನಾಡು ತಂಡದ ಗೆಲುವಿಗೆ 13 ರನ್ ಬೇಕಿತ್ತು. ಈ ವೇಳೆ ಕ್ರೀಸ್ ನಲ್ಲಿದ್ದ ಅಶ್ವಿನ್ ಮೊದಲ ಎಸೆತದಲ್ಲಿ ಬೌಂಡರಿ ಸಿಡಿಸಿದರು. ನಂತರದ ಎಸೆವನ್ನು ಬೌಂಡರಿಗೆ ಅಟ್ಟಿದರು. ಇದರೊಂದಿಗೆ ಇನ್ನು 4 ಎಸೆತಗಳಲ್ಲಿ ತಂಡಕ್ಕೆ 5 ರನ್ ಅವಶ್ಯಕತೆ ಇತ್ತು. ಈ ವೇಳೆ ಅಶ್ವಿನ್ ಗೆಲುವು ನಮ್ಮದೆ ಎಂದು ಸಂಭ್ರಮಿಸಿದ್ದರು. ಆದರೆ ಕೊನೆಯಲ್ಲಿ ಕರ್ನಾಟಕ 1 ರನ್ ನಿಂದ ರೋಚಕ ಗೆಲುವು ಸಾಧಿಸಿತ್ತು.
when Ashwin celebrated, the first thing came to my mind was Rahim https://t.co/zFXDmNwuYp
— Nikhil Mane
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


