'ಕಾಫಿ ವಿಥ್ ಕರಣ್' ವಿವಾದದ ಕುರಿತು ಮತ್ತೊಮ್ಮೆ ತುಟಿ ಬಿಚ್ಚಿದ ಕೆಎಲ್ ರಾಹುಲ್, ತನ್ನ ಜೀವನದಲ್ಲಿ ಏನಾಯ್ತು?
ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲೂ ಕೆಲ ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಕನ್ನಡಿಗರ ಮನ ಗೆದ್ದಿದ್ದ ಕೆಎಲ್ ರಾಹುಲ್ 'ಕಾಫಿ ವಿಥ್ ಕರಣ್' ಟಿವಿ ಕಾರ್ಯಕ್ರಮದ ಮೂಲಕ ವಿವಾದಕ್ಕೆ ಗುರಿಯಾಗಿದ್ದರು.

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲೂ ಕೆಲ ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಕನ್ನಡಿಗರ ಮನ ಗೆದ್ದಿದ್ದ ಕೆಎಲ್ ರಾಹುಲ್ 'ಕಾಫಿ ವಿಥ್ ಕರಣ್' ಟಿವಿ ಕಾರ್ಯಕ್ರಮದ ಮೂಲಕ ವಿವಾದಕ್ಕೆ ಗುರಿಯಾಗಿದ್ದರು. ಆ ವಿವಾದಕ್ಕೆ ಸಂಬಂಧಿಸಿ ಮತ್ತೆ ರಾಹುಲ್ ತುಟಿ ಬಿಚ್ಚಿದ್ದಾರೆ.
ನಿಜ ಹೇಳಬೇಕೆಂದರೆ, ಈ ವಿವಾದದಿಂದ ಕೊಂಚ ಕಹಿ ಅನುಭವ ಆಗಿತ್ತು. ಅದು ನನ್ನ ಮೇಲೆ ಗಂಭೀರ ಪರಿಣಾಮ ಬೀರಿತ್ತು. ನನ್ನನ್ನು ದೂರುವಂತೆ ಮಾಡಿತ್ತು. ಆ ವೇಳೆ ನಾನು ಸಿಟ್ಟುಗೊಂಡಿದ್ದೆ ಕೂಡ. ಆದರೆ ನಾನು ಈಗ ಅದರಿಂದ ಹೊರ ಬಂದಿದ್ದೇನೆ. ಎಲ್ಲವನ್ನೂ ಸ್ವೀಕರಿಸುವ ವ್ಯಕ್ತಿಯಾಗಿದ್ದೇನೆ. ಎಂದು ಅವರೇ ಸ್ವತಃ ಹೇಳಿಕೊಂಡಿದ್ದಾರೆ.
ಬಾಲಿವುಡ್ ನಟ, ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಜನಪ್ರಿಯ ಟಿವಿ ಶೋ 'ಕಾಫಿ ವಿಥ್ ಕರಣ್ ನಲ್ಲಿ ರಾಹುಲ್ ಮತ್ತು ಸಹ ಆಟಗಾರ, ಟೀಮ್ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಪಾಲ್ಗೊಂಡಿದ್ದರು. ಆ ಶೋನಲ್ಲಿ ಮಹಿಳೆಯರ ಕುರಿತು ಮತ್ತು ಲೈಂಗಿಕತೆ ಬಗ್ಗೆ ಕೀಳು ಅಭಿರುಚಿಯ, ಸ್ವೇಚ್ಛೆಯ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


