ರಿಷಭ್ ಪಂತ್ ಸಂದರ್ಶಿಸಿದ ರೋಹಿತ್ ಶರ್ಮಾ: ಬಿಸಿಸಿ 'ನನ್ನನ್ನು ಕಳೆದುಕೊಂಡಿತು' ಎಂದ ಚಹಾಲ್
ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಭಾರತ ಜಯಗಳಿಸಿದ ಬಳಿಕ ಹಿಟ್ ಮ್ಯಾನ್ ರಿಷಭ್ ಪಂತ್ ಅವರನ್ನು ರೋಹಿತ್ ಶರ್ಮಾ ಸಂದರ್ಶಿಸಿದ.....

Published On :
ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಭಾರತ ಜಯಗಳಿಸಿದ ಬಳಿಕ ರಿಷಭ್ ಪಂತ್ ಅವರನ್ನು ಹಿಟ್ ಮ್ಯಾನ್ ರೋಹಿತ್ ಶರ್ಮಾ ಸಂದರ್ಶಿಸಿದ ಕುರಿತಂತೆ ಟೀಂ ಇಂಡಿಯಾ ಆಟಗಾರ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಹಾಸ್ಯದ ಚಟಾಕಿ ಸಿಡಿಸಿದ್ದಾರೆ.
ಮಂಗಳವಾರ, ಗಯಾನಾದಲ್ಲಿ ನಡೆದ ಪಂದ್ಯದಲ್ಲಿ ಭಾರತ ಜಯಗಳಿಸಿ ಮೂರು ಪಂದ್ಯಗಳ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದು ಆ ಪಂದ್ಯದಲ್ಲಿ ಪಂತ್ ಅಜೇಯ 65 ರನ್ ಗಳಿಸಿದ್ದರು. ಎಡಗೈ ಬ್ಯಾಟ್ಸ್‌ಮನ್ ಕೇವಲ 42 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ ಈ ಸಾಧನೆ ಮಾಡಿದ್ದರು.
ಪಂದ್ಯದ ನಂತರ, ರೋಹಿತ್, ಬಿಸಿಸಿಐ.ಟಿ.ವಿ.ಗಾಗಿ ಪಂತ್ ಅವರನ್ನು ಸಂದರ್ಶಿಸಿದರು ಮತ್ತು ಆ ಸಂದರ್ಶನದ ಕುಇರ್ತಂತೆ ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ವಿವರಣೆಯೊಂದಿಗೆ ವೀಡಿಯೊವನ್ನು ಪೋಸ್ಟ್ ಮಾಡಿದ್ದರು.
ಗಯಾನಾ ಡೈರಿ: ರೋಹಿತ್ ಶರ್ಮಾ ಮತ್ತು ರಿಷಭ್ ಪಂತ್ ಅನ್ ಪ್ಲಗ್ ಎರಡು ಅತಿ ಕಡಿಮೆ ಸ್ಕೋರ್ ಗಳು ಹಾಗೂ ಪಂದ್ಯದ ಗೆಲುವಿಗೆ ಕಾರಣವಾದ ಅರ್ಧಶತಕ ಪಂತ್ ಅಂತಿಮ ಟಿ20 ಯನ್ನು ಹೇಗೆ ಗೆಲ್ಲಲು ಕಾರಣವಾದರೆಂದು ಹಿಟ್ ಮ್ಯಾನ್ ಕಂಡುಕೊಂಡಿದ್ದಾರೆ- ಅವರು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಉತ್ತರಿಸಿದ ಚಹಾಲ್ ಲೆಗ್-ಸ್ಪಿನ್ನರ್ ತನ್ನ ಪ್ರಸಿದ್ಧ 'ಚಹಲ್ ಟಿವಿ'ಯನ್ನು ಉಲ್ಲೇಖಿಸುತ್ತಾ "ಬಿಸಿಸಿಐ ನನ್ನನ್ನು ಕಳೆದುಕೊಂಡಿದೆ" ಎಂದಿದ್ದಾರೆ, ಚಹಾಲ್ ಈ ಮುನ್ನ ಬಿಸಿಸಿಐಗಾಗಿ ತಂಡದ ಆಟಗಾರರನ್ನು ಸಂದರ್ಶಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


