ವಿರಾಟ್ ಕೊಹ್ಲಿ ಕಾಲೆಳೆಯಲು ಹೋಗಿ ತಾನೇ ಹಳ್ಳಕ್ಕೆ ಬಿದ್ದ ಜಿಮ್ಮಿ ನೀಶಮ್!
ವಿಶ್ವ ದಾಖಲೆಗಳ ಸರದಾರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಕಾಲೆಳೆಯಲು ಹೋಗಿ ನ್ಯೂಜಿಲ್ಯಾಂಡ್ ತಂಡದ ಕ್ರಿಕೆಟಿಗ ಜಿಮ್ಮಿ ನೀಶಮ್ ಭಾರತೀಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Published On :
ವೆಲ್ಲಿಂಗ್ಟನ್: ವಿಶ್ವ ದಾಖಲೆಗಳ ಸರದಾರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಕಾಲೆಳೆಯಲು ಹೋಗಿ ನ್ಯೂಜಿಲ್ಯಾಂಡ್ ತಂಡದ ಕ್ರಿಕೆಟಿಗ ಜಿಮ್ಮಿ ನೀಶಮ್ ಭಾರತೀಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್ ಆರಂಭಿಕ ಆಟಗಾರ ರೋರಿ ಬರ್ನ್ಸ್ ಟೆಸ್ಟ್ ಕ್ರಿಕೆಟ್ ಪಂದ್ಯದ 2ನೇ ದಿನದ ವೇಳೆ 125 ರನ್ ಸಿಡಿಸಿದ್ದರು. ಈ ವಿಚಾರ ಪ್ರಸ್ತಾಪಿಸಿ ನೀಶಮ್, ಪ್ರತಿಷ್ಠಿತ ಸರಣಿಯಲ್ಲಿ ಕೊಹ್ಲಿಗಿಂತ ರೋರಿ ಹೆಚ್ಚು ರನ್ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಟೀಂ ಇಂಡಿಯಾ ಅಭಿಮಾನಿಗಳು ಕಿಡಿಕಾರಿದ್ದಾರೆ.
ವಿಶ್ವಕಪ್ ಫೈನಲ್ ಪಂದ್ಯದ ಟಿಕೆಟ್ ಗಳನ್ನು ನೀಡುವಂತೆ ಭಾರತೀಯ ಅಭಿಮಾನಿಗಳನ್ನು ಕೇಳಿ ಕೊಂಡಿದ್ದ ನೀನು, ಇಂದು ಕೊಹ್ಲಿಯನ್ನು ರೋರಿ ಬರ್ನ್ಸ್ ಗೆ ಹೋಲಿಕೆ ಮಾಡುತ್ತಿದ್ದೀಯಾ. ಇದು ಒಳ್ಳೆಯದಲ್ಲ ಎಂದು ಅಭಿಮಾನಿಗಳು ನಿಶಾಮ್ ಗೆ ಟಾಂಗ್ ಕೊಟ್ಟಿದ್ದಾರೆ.
ನ್ಯೂಜಿಲ್ಯಾಂಡ್ ಕ್ರಿಕೆಟ್ ಆರಂಭಿಕ ಬ್ಯಾಟ್ಸ್ ಮನ್ ಗಳಿಸಿರುವ ರನ್ ಮೊತ್ತಕಿಂತ ಕೊಹ್ಲಿಯೇ ಹೆಚ್ಚು ರನ್ ಮಾಡಿದ್ದಾರೆ ಎಂದು ನೀಶಮ್ ರನ್ನು ಟ್ರೋಲ್ ಮಾಡುತ್ತಿದ್ದಾರೆ.
ಆ್ಯಶಸ್ ಸರಣಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತದೆ. ಇನ್ನು ನ್ಯೂಜಿಲ್ಯಾಂಡ್ ತಂಡದ ಆಟಗಾರನಾಗಿರುವ ಜಿಮ್ಮಿ ಕೊಹ್ಲಿರನ್ನು ಎಳೆದು ತಂದು ಟ್ರೋಲ್ ಆಗಿದ್ದಾರೆ.
Rory Burns now has more runs in his first Ashes innings than Virat Kohli has in his entire Ashes career
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಟೀಂ ಇಂಡಿಯಾTeam IndiaVirat Kohliವಿರಾಟ್ ಕೊಹ್ಲಿಭಾರತೀಯ ಅಭಿಮಾನಿIndian Fansಜಿಮ್ಮಿ ನೀಶಮ್Jimmy Neesham
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


