ತಂಡಕ್ಕಾಗಿ ಮಾತ್ರವಲ್ಲ, ದೇಶಕ್ಕಾಗಿ ಮುನ್ನುಗ್ಗುತ್ತೇನೆ: ವಿಂಡೀಸ್ ಪ್ರವಾಸಕ್ಕೂ ರೋಹಿತ್ ಶರ್ಮಾ ಟ್ವೀಟ್
ಟೀಂ ನಾಯಕ ವಿರಾಟ್ ಕೊಹ್ಲಿ ಜೊತೆ ಮನಸ್ತಾಪವಿದೆ ಎಂಬ ಮಾಧ್ಯಮಗಳ ವರದಿ ನಡುವೆಯೇ ಉಪ ನಾಯಕ ರೋಹಿತ್ ಶರ್ಮಾ ಮಾಡಿರುವ ಒಂದು ಟ್ವೀಟ್ ಇದೀಗ ವ್ಯಾಪಕ ವೈರಲ್ ಆಗಿ, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

Published On :
ನವದೆಹಲಿ: ಟೀಂ ನಾಯಕ ವಿರಾಟ್ ಕೊಹ್ಲಿ ಜೊತೆ ಮನಸ್ತಾಪವಿದೆ ಎಂಬ ಮಾಧ್ಯಮಗಳ ವರದಿ ನಡುವೆಯೇ ಉಪ ನಾಯಕ ರೋಹಿತ್ ಶರ್ಮಾ ಮಾಡಿರುವ ಒಂದು ಟ್ವೀಟ್ ಇದೀಗ ವ್ಯಾಪಕ ವೈರಲ್ ಆಗಿ, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಹೌದು.. ರೋಹಿತ್ ಶರ್ಮಾ ತಮ್ಮ ಟ್ವಿಟರ್ ಮತ್ತು ಇನ್ ಸ್ಟಾಗ್ರಾಮ್ ಖಾತೆ ಮೂಲಕ ಫೋಟೊ ಒಂದನ್ನು ಶೇರ್ ಮಾಡಿದ್ದು, ಫೋಟೋಗೆ 'ನಾನು ಪ್ರತಿಬಾರಿ ಕಣಕ್ಕಿಳಿದಾಗಲೆಲ್ಲಾ ಕೇವಲ ನನ್ನ ತಂಡಕ್ಕಾಗಿ ಮಾತ್ರ ನಾನು ಮುನ್ನುಗ್ಗುವುದಿಲ್ಲ. ಇಡೀ ದೇಶಕ್ಕಾಗಿ ಮುನ್ನಡೆಯುತ್ತೇನೆ' ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಈ ಪೋಸ್ಟ್ ಗೆ ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯದ ವೇಳೆ ಬ್ಯಾಟಿಂಗ್ ಆರಂಭಿಸಲು ಡ್ರೆಸಿಂಗ್ ರೂಮ್ ನಿಂದ ಮೈದಾನದ ಕಡೆಗೆ ಬರುತ್ತಿರುವ ಫೋಟೊ ಅಪ್ಲೋಡ್ ಮಾಡಿದ್ದಾರೆ.
ಈ ಮೂಲಕ ಎಲ್ಲದಕ್ಕಿಂತಲೂ ದೇಶವೇ ಮಿಗಿಲು ಎಂದು ತಮ್ಮೊಳಗಿನ ದೇಶ ಪ್ರೇಮವನ್ನು ಸಾರಿದ್ದಾರೆ. ಒಟ್ಟಾರೆ ರೋಹಿತ್ ಶರ್ಮಾ ಅವರ ಈ ಟ್ವೀಟ್ ಇದೀಗ ಕ್ರಿಕೆಟ್ ವಲಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ನವದೆಹಲಿNew DelhiTeam IndiaVirat Kohliವಿರಾಟ್ ಕೊಹ್ಲಿRohit Sharmaರೋಹಿತ್ ಶರ್ಮಾಟೀಮ್ ಇಂಡಿಯಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


