ಕ್ರಿಕೆಟ್

12 ರಲ್ಲಿ 9; ಟಾಸ್ ಸೋತ ವಿರಾಟ್ ಕೊಹ್ಲಿ ಸಂಭ್ರಮದ ವಿಡಿಯೋ ವೈರಲ್

ಸತತ ಆರು ಪಂದ್ಯಗಳ ಸೋತು ಸುದ್ದಿಯಾಗಿದ್ದ ಕೊಹ್ಲಿ ಇದೀಗ ಟಾಸ್ ನಲ್ಲೂ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.

12 ರಲ್ಲಿ 9; ಟಾಸ್ ಸೋತ ವಿರಾಟ್ ಕೊಹ್ಲಿ ಸಂಭ್ರಮದ ವಿಡಿಯೋ ವೈರಲ್
ಟಾಸ್ ಸೋತ ಕೊಹ್ಲಿ ಸಂಭ್ರಮ
Published On :
ನವದೆಹಲಿ: ಸತತ ಆರು ಪಂದ್ಯಗಳ ಸೋತು ಸುದ್ದಿಯಾಗಿದ್ದ ಕೊಹ್ಲಿ ಇದೀಗ ಟಾಸ್ ನಲ್ಲೂ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.

ಹಾಲಿ ಐಪಿಎಲ್ ಟೂರ್ನಿಯಲ್ಲಿ ಬರೊಬ್ಬರಿ 9 ಬಾರಿ ಟಾಸ್ ಸೋತಿರುವ ವಿರಾಟ್ ಕೊಹ್ಲಿ ಟಾಸ್ ಸೋತ ಬಳಿಕ 9ನೇ ಬಾರಿಗೆ ಟಾಸ್ ಸೋತೆ ಎಂದು ಸಂಭ್ರಮಿಸಿದ ವಿಡಿಯೋ ಇದೀಗ ವೈರಲ್ ಆಗಿದೆ.
ನಿನ್ನೆ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಟೂರ್ನಿಯಲ್ಲಿ 9ನೇ ಬಾರಿಗೆ ಟಾಸ್ ಸೋತರು. ಬಳಿಕ ಪ್ರೇಕ್ಷಕರತ್ತ ತಿರುಗಿ ತಮ್ಮ 9 ಕೈ ಬೆರಳುಗಳನ್ನು ತೋರಿಸಿ 9ನೇ ಬಾರಿಗೆ ಟಾಸ್ ಸೋತೆ ಎಂದು ತೋರಿಸಿ ಸಂಭ್ರಮಿಸಿದರು. ಆ ಮೂಲಕ ಕೊಹ್ಲಿ ಹಾಲಿ ಟೂರ್ನಿಯಲ್ಲಿ ಒಟ್ಟು 12 ಪಂದ್ಯಗಳ ಪೈಕಿ 9 ಬಾರಿ ಟಾಸ್ ಸೋತ ಸಾಧನೆ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್ನು ನಿನ್ನೆ ನಡೆದ ಪಂದ್ಯದಲ್ಲಿ ಆರ್ ಸಿಬಿ 16 ರನ್ ಗಳ ಅಂತರದಲ್ಲಿ ಡೆಲ್ಲಿ ವಿರುದ್ಧ ಸೋಲು ಕಂಡಿತು. ಅಂತೆಯೇ ಆರ್ ಸಿಬಿಯ ಪ್ಲೇ ಆಫ್ ಕನಸು ಕೂಡ ಛಿದ್ರವಾಗಿದೆ. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಕೊಹ್ಲಿ ಪಡೆ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಗಿ, 16ರನ್ ಗಳ ಅಂತರದಲ್ಲಿ ಮಂಡಿಯೂರಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.