ಕೊಹ್ಲಿ ಅಣುಕಿಸಿದ್ದರಿಂದ ಕೋಪಗೊಂಡ ಅಶ್ವಿನ್, ಮೈದಾನದ ಹೊರಗೆ ಮಾಡಿದ್ದೇನು?, ವಿಡಿಯೋ ವೈರಲ್, ಕಿಚಾಯಿಸಿದ ನೆಟಿಗರು!
ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ವಿರಾಟ್ ಕೊಹ್ಲಿ ರಿಯಾಕ್ಷನ್ ನಿಂದ ಆಕ್ರೋಶಗೊಂಡ ಆರ್ ಅಶ್ವಿನ್ ಪೆವಿಲಿಯನ್ ಹತ್ತಿರ ಬರುತ್ತಲೇ ತಮ್ಮ ಕೈಗೆ ಹಾಕಿದ್ದ ಗ್ಲೌಸ್ ಅನ್ನು ಕಿತ್ತು ಕೆಳಗೆ ಎಸೆದಿದ್ದು...

Published On :
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ವಿರಾಟ್ ಕೊಹ್ಲಿ ರಿಯಾಕ್ಷನ್ ನಿಂದ ಆಕ್ರೋಶಗೊಂಡ ಆರ್ ಅಶ್ವಿನ್ ಪೆವಿಲಿಯನ್ ಹತ್ತಿರ ಬರುತ್ತಲೇ ತಮ್ಮ ಕೈಗೆ ಹಾಕಿದ್ದ ಗ್ಲೌಸ್ ಅನ್ನು ಕಿತ್ತು ಕೆಳಗೆ ಎಸೆದಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. ಈ ವಿಡಿಯೋ ಮೂಲಕ ಅಶ್ವಿನ್ ರನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟ್ರೋಲ್ ಮಾಡಲಾಗುತ್ತಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಮತ್ತು ಬೆಂಗಳೂರು ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ ಸಿಬಿ 202 ರನ್ ಗಳಿಸಿತ್ತು. 13 ರನ್ ಗಳಿಸಿ ಆಗ ತಾನೆ ಕ್ರೀಸ್ ಗೆ ಹೊಂದಿಕೊಳ್ಳುತ್ತಿದ್ದ ವಿರಾಟ್ ಕೊಹ್ಲಿಯನ್ನು ಮಹಮದ್ ಶಮಿ ಔಟ್ ಮಾಡಿದರು. ಆದರೆ ಈ ವೇಳೆ ತಂಡದ ನಾಯಕ ಆರ್ ಅಶ್ವಿನ್ ಕೊಹ್ಲಿಯನ್ನು ದಿಟ್ಟಿಸಿ ಆಕ್ರಮಣಕಾರಿ ಸೆಂಡ್ ಆಫ್ ಕೊಟ್ಟರು. ಇದು ಮೈದಾನದ ಕ್ಯಾಮೆರಾಗಳಲ್ಲಿ ದಾಖಲಾಗಿತ್ತು.
ಆರ್ ಸಿಬಿ ನೀಡಿದ್ದ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ 185 ರನ್ ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ಪಂದ್ಯದ ಅಂತಿಮ ಓವರ್ ನಲ್ಲಿ 26 ರನ್ ಗಳು ಬೇಕಿತ್ತು. ಈ ವೇಳೆ ಕ್ರೀಸ್ ನಲ್ಲಿದ್ದ ಅಶ್ವಿನ್ ಉಮೇಶ್ ಯಾದವ್ ಎಸೆದ ಮೊದಲ ಎಸೆತವನ್ನೇ ಸಿಕ್ಸರ್ ಗೆ ಅಟ್ಟಿ ಪಂಜಾಬ್ ತಂಡದ ಗೆಲುವಿನ ಆಸೆಗೆ ನೀರೆರೆದರು. ಆದರೆ ನಂತರದ ಎಸೆತದಲ್ಲೇ ಮತ್ತೊಂದು ಭರ್ಜರಿ ಹೊಡೆತಕ್ಕೆ ಮುಂದಾದರು. ಆದರೆ ಈ ವೇಳೆ ಕೊಹ್ಲಿಗೆ ಕ್ಯಾಚ್ ನೀಡಿ ಔಟಾದರು. ಈ ವೇಳೆ ಕೊಹ್ಲಿ ಕೂಡ ಅಶ್ವಿನ್ ಗೆ 'ಏನಾಯಿತು ನಿನ್ನ ಅಟ್ಟಹಾಸ, ಈಗ ಮಂಕಡ್ ರನೌಟ್ ಮಾಡು ನೋಡೋಣ' ಎನ್ನುವ ರೀತಿಯಲ್ಲಿ ಸನ್ಹೆ ಮಾಡುತ್ತಾ ಅಶ್ವಿನ್ ಗೆ ತಿರುಗೇಟು ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಬೆಂಗಳೂರುBengaluruVirat Kohliವಿರಾಟ್ ಕೊಹ್ಲಿRCBಕಿಂಗ್ಸ್ ಇಲೆವನ್ ಪಂಜಾಬ್ಆರ್ ಸಿಬಿRavichandran Ashwinರವಿಚಂದ್ರನ್ ಅಶ್ವಿನ್KXIPIPL 2019ಐಪಿಎಲ್ 2019
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


