ನನ್ನ ಹೆಲಿಕಾಪ್ಟರ್ ಶಾಟ್ ಕುರಿತು ಎಂಎಸ್ ಧೋನಿ ಏನಂದ್ರು ಅಂತ ಬಹಿರಂಗಪಡಿಸಿದ ಹಾರ್ದಿಕ್!
ಐಪಿಎಲ್ ನಲ್ಲಿ ಮುಂಬೈ ಪರ ಮಿಂಚುತ್ತಿರುವ ಹಾರ್ದಿಕ್ ಪಾಂಡ್ಯ ಸಖತ್ತಾಗಿ ಹೆಲಿಕಾಪ್ಟರ್ ಶಾಟ್ ಮೂಲಕ ಸಿಕ್ಸರ್ ಸಿಡಿಸುತ್ತಿದ್ದು ಈ ಕುರಿತು ಎಂಎಸ್ ಧೋನಿ ಎನಂದ್ರು ಅಂತ ಪಾಂಡ್ಯ ಬಹಿರಂಗಪಡಿಸಿದ್ದಾರೆ.

Published On :
ಐಪಿಎಲ್ ನಲ್ಲಿ ಮುಂಬೈ ಪರ ಮಿಂಚುತ್ತಿರುವ ಹಾರ್ದಿಕ್ ಪಾಂಡ್ಯ ಸಖತ್ತಾಗಿ ಹೆಲಿಕಾಪ್ಟರ್ ಶಾಟ್ ಮೂಲಕ ಸಿಕ್ಸರ್ ಸಿಡಿಸುತ್ತಿದ್ದು ಈ ಕುರಿತು ಎಂಎಸ್ ಧೋನಿ ಎನಂದ್ರು ಅಂತ ಪಾಂಡ್ಯ ಬಹಿರಂಗಪಡಿಸಿದ್ದಾರೆ.
2019ರ ಐಪಿಎಲ್ ನಲ್ಲಿ 9 ಪಂದ್ಯಗಳನ್ನು ಆಡಿರುವ ಹಾರ್ದಿಕ್ 195 ಸ್ಟ್ರೈಕ್ ರೇಟ್ ನಲ್ಲಿ 218 ರನ್ ಸಿಡಿಸಿದ್ದಾರೆ. ಇನ್ನು ನಿನ್ನೆ ನಡೆದ ಡೆಲ್ಲಿ ಕ್ಯಾಪಿಟಲ್ ವಿರುದ್ಧದ ಪಂದ್ಯದ 20ನೇ ಓವರ್ ನಲ್ಲಿ ಹಾರ್ದಿಕ್ ಕಾಗಿಸೋ ರಬಾಡ ಎಸೆತದಲ್ಲಿ ಹೆಲಿಕಾಪ್ಟರ್ ಶಾಟ್ ಮೂಲಕ ಸಿಕ್ಸರ್ ಬಾರಿಸಿದ್ದರು. ಈ ಶಾಟ್ ಧೋನಿ ಸಿಡಿಸುವಂತಾ ಹೆಲಿಕಾಪ್ಟರ್ ಶಾಟ್ ರೀತಿನೇ ಇತ್ತು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಯೂ ಆಗಿತ್ತು.
ಐಪಿಎಲ್ ತಾನೂ ಬಾರಿಸುವ ಹೆಲಿಕಾಪ್ಟರ್ ಶಾಟ್ ಕುರಿತಂತೆ ಒಂದು ಬಾರಿ ಹಾರ್ದಿಕ್ ಪಾಂಡ್ಯ ಎಂಎಸ್ ಧೋನಿಯನ್ನು ಭೇಟಿಯಾಗಿ ಕೇಳಿದ್ದರಂತೆ. ಅದಕ್ಕೆ ಎಂಎಸ್ ಧೋನಿ ಉತ್ತಮವಾಗಿ ಹೊಡೆಯುತ್ತಿದ್ದೀಯಾ ಅದನ್ನು ಹಾಗೆ ಮುಂದುವರೆಸು ಎಂದು ಹೇಳಿರುವುದಾಗಿ ಪಾಂಡ್ಯ ಹೇಳಿಕೊಂಡಿದ್ದಾರೆ.
ಈ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 40 ರನ್ ಗಳ ಅಂತರದಿಂದ ಜಯ ಗಳಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
MS Dhoniಎಂಎಸ್ ಧೋನಿಹಾರ್ದಿಕ್ ಪಾಂಡ್ಯCricket Offbeatಕ್ರಿಕೆಟ್ ಸ್ವಾರಸ್ಯHelicopter Shotಹೆಲಿಕಾಪ್ಟರ್ ಶಾಟ್IPL 2019ಐಪಿಎಲ್ 2019Hardik Pandya
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


