ಕ್ರಿಕೆಟ್

ರಾಜಸ್ಥಾನ ವಿರುದ್ಧದ ಗೆಲುವಿನ ಬಳಿಕ ಆರ್ ಅಶ್ವಿನ್ 'ಭಲ್ಲೆ ಭಲ್ಲೆ' ಭಾಂಗ್ರಾ ಡ್ಯಾನ್ಸ್ ವಿಡಿಯೋ ವೈರಲ್!

ತವರು ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ರೋಚಕ ಗೆಲುವು ಸಾಧಿಸಿದ್ದು, ಗೆಲುವಿನ ಬಳಿಕ ಮೈದಾನದಲ್ಲಿ ಅಶ್ವಿನ್ ಬಳಗ ಮಾಡಿದ ಭಾಂಗ್ರಾ ಡ್ಯಾನ್ಸ್ ಇದೀಗ ವೈರಲ್ ಆಗಿದೆ.

ರಾಜಸ್ಥಾನ ವಿರುದ್ಧದ ಗೆಲುವಿನ ಬಳಿಕ ಆರ್ ಅಶ್ವಿನ್ 'ಭಲ್ಲೆ ಭಲ್ಲೆ' ಭಾಂಗ್ರಾ ಡ್ಯಾನ್ಸ್ ವಿಡಿಯೋ ವೈರಲ್!
ಭಾಂಗ್ರಾ ನೃತ್ಯ ಮಾಡಿದ ಅಶ್ವಿನ್
Published On :
ಮೊಹಾಲಿ: ತವರು ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ರೋಚಕ ಗೆಲುವು ಸಾಧಿಸಿದ್ದು, ಗೆಲುವಿನ ಬಳಿಕ ಮೈದಾನದಲ್ಲಿ ಅಶ್ವಿನ್ ಬಳಗ ಮಾಡಿದ ಭಾಂಗ್ರಾ ಡ್ಯಾನ್ಸ್ ಇದೀಗ ವೈರಲ್ ಆಗಿದೆ.
ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ತಂಡ ಮೊದಲು ಬೌಲಿಂಗ್ ಆರಿಸಿಕೊಂಡಿತ್ತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ತಂಡ ನಿಗದಿತ 20 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ ಕನ್ನಡಿಗ ಕೆಎಲ್ ರಾಹುಲ್ ಅವರ ಅಮೋಘ ಅರ್ಧಶತಕ (52 ರನ್) ಹಾಗೂ ಡೇವಿಡ್ ಮಿಲ್ಲರ್ (40 ರನ್) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 182 ರನ್ ಗಳ ಬಹತ್ ರನ್ ಪೇರಿಸಿತು. ಈ ಬೃಹತ್ ಗುರಿಯನ್ನು ಬೆನ್ನು ಹತ್ತಿದ ರಾಜಸ್ಥಾನ ತಂಡ 20 ಓವರ್ ನಲ್ಲಿ 7 ವಿಕೆಟ್ ಕಳೆದುಕೊಂಡು 170 ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ ಪಂಜಾಬ್ ಎದುರು 12 ರನ್ ಗಳ ವಿರೋಚಿತ ಸೋಲು ಅನುಭವಿಸಿತು.
ಇನ್ನು ಗೆಲುವಿನ ಬಳಿಕ ಕಿಂಗ್ಸ್ ಇಲೆವೆನ್ ತಂಡ ಪಂಜಾಬ್ ಸಾಂಪ್ರದಾಯಿಕ ನೃತ್ಯ ಭಾಂಗ್ರಾ ಮಾಡುವ ಮೂಲಕ ಮೈದಾನದಲ್ಲೇ ಸಂಭ್ರಮಾಚರಣೆ ಮಾಡಿತು. ಪ್ರಮುಖವಾಗಿ ತಂಡದ ನಾಯಕ ಆರ್  ಅಶ್ವಿನ್ ಭಾಂಗ್ರಾ ನೃತ್ಯ ಮಾಡಿದ್ದು ವಿಶೇಷವಾಗಿತ್ತು. ಅಶ್ವಿನ್ ಜೊತೆಗೆ ಖ್ಯಾತ ಬಾಲಿವುಡ್ ನಟ ಸೋನುಸೂಧ್ ಕೂಡ ಹೆಜ್ಜೆಹಾಕಿದರು. ಆ  ಬಳಿಕ ಇಡೀ ತಂಡ ಪಂಜಾಬ್ ತಂಡದೊಂದಿಗೆ ನೃತ್ಯ ಮಾಡಿತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.