ಕ್ರಿಕೆಟ್

ಆರ್‌ಸಿಬಿ ಆಟಗಾರ ಪಾರ್ಥಿವ್ ಪಟೇಲ್ ವೈಯಕ್ತಿಕ ಜೀವನದಲ್ಲಿ ಬಿರುಗಾಳಿ!

ಐಪಿಎಲ್ ನಲ್ಲಿ ಆರ್‌ಸಿಬಿ ತಂಡಕ್ಕೆ ಸತತ ಸೋಲು ಒಂದು ಕಡೆಯಾದರೆ ಇನ್ನು ತಂದೆ ಬ್ರೈನ್ ಹೆಮರೇಡ್ಜ್ ಗೆ ತುತ್ತಾಗಿ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿರುವುದು ಆರ್ಸಿಬಿ ತಂಡದ ಆಟಗಾರ ಪಾರ್ಥಿವ್ ಪಟೇಲ್...

ಆರ್‌ಸಿಬಿ ಆಟಗಾರ ಪಾರ್ಥಿವ್ ಪಟೇಲ್ ವೈಯಕ್ತಿಕ ಜೀವನದಲ್ಲಿ ಬಿರುಗಾಳಿ!
ಪಾರ್ಥಿವ್ ಪಟೇಲ್
Published On :
ಬೆಂಗಳೂರು: ಐಪಿಎಲ್ ನಲ್ಲಿ ಆರ್‌ಸಿಬಿ ತಂಡಕ್ಕೆ ಸತತ ಸೋಲು ಒಂದು ಕಡೆಯಾದರೆ ಇನ್ನು ತಂದೆ ಬ್ರೈನ್ ಹೆಮರೇಡ್ಜ್ ಗೆ ತುತ್ತಾಗಿ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿರುವುದು ಆರ್ಸಿಬಿ ತಂಡದ ಆಟಗಾರ ಪಾರ್ಥಿವ್ ಪಟೇಲ್ ರನ್ನು ತಲ್ಲಣಗೊಳಿಸಿವೆ. 
ವೃತ್ತಿ ಮತ್ತು ವೈಯಕ್ತಿಕ ಬದುಕನ್ನು ಸಮತೋಲನ ಮಾಡಿಕೊಳ್ಳಲು ಪಾರ್ಥಿವ್ ಪಟೇಲ್ ಗೆ ಕಷ್ಟವಾಗುತ್ತಿದೆ. ಪ್ರತಿ ಪಂದ್ಯದ ಬಳಿಕ ಪೆವಿಲಿಯನ್ ಗೆ ಹೋದ ತಕ್ಷಣ ತಮ್ಮ ಮೊಬೈಲ್ ತೆಗೆದು ನೋಡುತ್ತಾರಂತೆ. ಅಲ್ಲಿ ತನ್ನ ತಂದೆಯ ಕುರಿತಾಗಿ ಯಾವುದೇ ಕೆಟ್ಟ ಸುದ್ದಿ ಬಂದಿರಲ್ಲ ಎಂಬ ಪ್ರಾರ್ಥನೆಯೊಂದಿಗೆ ಮೊಬೈಲ್ ತೆರೆಯುತ್ತಾರಂತೆ. 
ಇವೆಲ್ಲಾ ಜಂಜಾಟಗಳ ನಡುವೆ ತನಗೆ ಕ್ರಿಕೆಟ್ ನಲ್ಲಿ ಗಮನ ಕೇಂದ್ರೀಕರಿಸಲು ಕಷ್ಟವಾಗುತ್ತಿದೆ ಎಂದು ಪಾರ್ಥಿವ್ ಪಟೇಲ್ ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.