ಕ್ರಿಕೆಟ್

ಜೋಸ್ ಬಟ್ಲರ್ ರೀತಿ ಅಶ್ವಿನ್ 'ಮಂಕಡ್‌'ಗೆ ವಾರ್ನರ್ ಬಕ್ರ ಆಗಲಿಲ್ಲ, ವಿಡಿಯೋ ವೈರಲ್!

ಜೋಸ್ ಬಟ್ಲರ್ ರನ್ನು ಮಂಕಡ್ ರೀತಿ ಔಟ್ ಮಾಡಿದ್ದ ಆರ್ ಅಶ್ವಿನ್ ಅವರ ಕ್ರೀಡಾಸ್ಫೂರ್ತಿ ಬಗ್ಗೆ ಜಾಗತಿಕವಾಗಿ ಟೀಕೆ ವ್ಯಕ್ತವಾಗಿತ್ತು. ಆದರೆ ಇದೀಗ ಮತ್ತೆ ಅಶ್ವಿನ್ ಮಂಕಡ್...

ಜೋಸ್ ಬಟ್ಲರ್ ರೀತಿ ಅಶ್ವಿನ್ 'ಮಂಕಡ್‌'ಗೆ ವಾರ್ನರ್ ಬಕ್ರ ಆಗಲಿಲ್ಲ, ವಿಡಿಯೋ ವೈರಲ್!
ಡೇವಿಡ್ ವಾರ್ನರ್-ರವಿಚಂದ್ರನ್ ಅಶ್ವಿನ್
Published On :
ಜೋಸ್ ಬಟ್ಲರ್ ರನ್ನು ಮಂಕಡ್ ರೀತಿ ಔಟ್ ಮಾಡಿದ್ದ ಆರ್ ಅಶ್ವಿನ್ ಅವರ ಕ್ರೀಡಾಸ್ಫೂರ್ತಿ ಬಗ್ಗೆ ಜಾಗತಿಕವಾಗಿ ಟೀಕೆ ವ್ಯಕ್ತವಾಗಿತ್ತು. ಆದರೆ ಇದೀಗ ಮತ್ತೆ ಅಶ್ವಿನ್ ಮಂಕಡ್ ಗೆ ಯತ್ನಿಸಿದ್ದು ಆದರೆ ಈ ಬಾರಿ ಡೇವಿಡ್ ವಾರ್ನರ್ ಬಕ್ರ ಆಗಲಿಲ್ಲ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಐಪಿಎಲ್ ಪಂದ್ಯಾವಳಿಯಲ್ಲಿ ಹೈದರಾಬಾದ್ ಪರ ಆಡುತ್ತಿರುವ ಡೇವಿಡ್ ವಾರ್ನರ್ ಅವರು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಆರ್ ಅಶ್ವಿನ್ ಬೌಲಿಂಗ್ ನಲ್ಲಿ ಜಾಣ್ಮೆಯ ಆಟ ಪ್ರದರ್ಶಿಸಿದ್ದರ ಪರಿಣಾಮ ಮಂಡಕ್ ಗೆ ಬಲಿಯಾಗಲಿಲ್ಲ. 
ಆರ್ ಅಶ್ವಿನ್ ತಮ್ಮ ಬೌಲಿಂಗ್ ನ ಮೊದಲ ಎಸೆತದಲ್ಲೇ ಮಂಕಡ್ ಗೆ ಯತ್ನಿಸಿದ್ದರು ಎಂಬುದಕ್ಕೆ ಈ ದೃಶ್ಯಗಳು ಪುಷ್ಠಿ ಕೊಡುತ್ತದೆ. ನಿಧಾನವಾಗಿ ಬೌಲಿಂಗ್ ಮಾಡಿದ್ದರು. ಈ ವೇಳೆ ವಾರ್ನರ್ ಕ್ರಿಸ್ ನಿಂದ ಬ್ಯಾಟ್ ಹಿಡಿದು ಮುಂದಕ್ಕೆ ಹೋಗಿದ್ದರು. ಕೂಡಲೇ ಎಚ್ಚೇತ್ತ ಅವರು ಬ್ಯಾಟ್ ಅನ್ನು ಕ್ರಿಸ್ ನೊಳಗೆ ತಂದರು. ಇದರಿಂದ ಅಶ್ವಿನ್ ಎಂದಿನಂತೆ ಬೌಲಿಂಗ್ ಮಾಡಿದ್ದರು. ಸದ್ಯ ಈ ವಿಡಿಯೋ ಇದೀಗ ವೈರಲ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.