ಆರ್ ಸಿಬಿಗೆ ತವರಿನಲ್ಲೇ ಮತ್ತೊಂದು ಮುಖಭಂಗ, ಸೋಲಿನಲ್ಲೂ ಕೊಹ್ಲಿ ಪಡೆಯ ಹೀನಾಯ ದಾಖಲೆ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇಂದು ಮತ್ತೊಂದು ಸೋಲು ಎದುರಾಗಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಪಡೆ 4 ವಿಕೆಟ್ ಗಳ ಸೋಲು ಕಂಡಿದೆ. ಆ ಮೂಲಕ ಟೂರ್ನಿಯಲ್ಲಿ ಸತತ 6 ಸೋಲು ಕಂಡು ಕೊನೆಯ ಸ್ಥಾನದಲ್ಲಿ ಮುಂದುವರೆದಿದೆ.

Published On :
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇಂದು ಮತ್ತೊಂದು ಸೋಲು ಎದುರಾಗಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಪಡೆ 4 ವಿಕೆಟ್ ಗಳ ಸೋಲು ಕಂಡಿದೆ. ಆ ಮೂಲಕ ಟೂರ್ನಿಯಲ್ಲಿ ಸತತ 6 ಸೋಲು ಕಂಡು ಕೊನೆಯ ಸ್ಥಾನದಲ್ಲಿ ಮುಂದುವರೆದಿದೆ.
ಇನ್ನು ಹಾಲಿ ಟೂರ್ನಿಯಲ್ಲಿ ಗೆಲುವನ್ನೇ ಕಾಣದ ಆರ್ ಸಿಬಿ ಸೋಲಿನಲ್ಲೂ ಕಳಪೆ ದಾಖಲೆ ಬರೆದಿದ್ದು, ಟೂರ್ನಿ ಆರಂಭದಲ್ಲೇ ಸತತ 6 ಸೋಲು ಕಂಡ 2ನೇ ತಂಡ ಎಂಬ ಕುಖ್ಯಾತಿಗೆ ಭಾಜನವಾಗಿದೆ. ಆ ಮೂಲಕ ಇದೇ ರೀತಿಯ ಕಳಪೆ ದಾಖಲೆ ಬರೆದಿದ್ದ ದೆಹಲಿ ತಂಡದ ದಾಖಲೆಯನ್ನು ಆರ್ ಸಿಬಿ ಸಮಗಟ್ಟಿದೆ. 2013ರಲ್ಲಿ ಇದೇ ದೆಹಲಿ ತಂಡ ಸತತ ಆರು ಸೋಲು ಕಂಡು ಈ ದಾಖಲೆ ಬರೆದಿತ್ತು. ಇದೀಗ ಕೊಹ್ಲಿ ಪಡೆ ಈ ದಾಖಲೆಯಲ್ಲಿ ಸರಿಗಟ್ಟಿದೆ.
ದೆಹಲಿ ಮತ್ತು ಆರ್ ಸಿಬಿಯನ್ನು ಹೊರತು ಪಡಿಸಿದರೆ, 2012ರಲ್ಲಿ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡ ಸತತ ಐದು ಸೋಲು ಕಂಡಿತ್ತು. ಇದಾದ ಬಳಿಕ 2014 ಮತ್ತು 2015ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಕೂಡ 2 ಬಾರಿ 5 ಸೋಲುಗಳನ್ನು ಕಂಡಿತ್ತು. ಇದೇ ತಂಡ 2008ರಲ್ಲಿ ಸತತ 4 ಸೋಲು ಕಂಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengaluruRecordRCBಆರ್ ಸಿಬಿDCCricket Offbeatಕ್ರಿಕೆಟ್ ಸ್ವಾರಸ್ಯIPL 2019ಐಪಿಎಲ್ 2019ಡೆಲ್ಲಿ ಕ್ಯಾಪಿಟಲ್ಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


