ಕ್ರಿಕೆಟ್

ಧೋನಿ ಪಡೆ ಗೆಲುವಿನ ಓಟಕ್ಕೆ ಬ್ರೇಕ್; ಚೆನ್ನೈ ವಿರುದ್ಧ ಮುಂಬೈಗೆ 37 ರನ್ ಗಳ ಗೆಲುವು

ಐಪಿಎಲ್‌ ಟಿ-20 ಪಂದ್ಯಾಳಿಯಲ್ಲಿ ಸತತ ಗೆಲುವು ಸಾಧಿಸುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಮುಂಬೈ ಇಂಡಿಯನ್ಸ್​ 37 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ...

ಧೋನಿ ಪಡೆ ಗೆಲುವಿನ ಓಟಕ್ಕೆ ಬ್ರೇಕ್; ಚೆನ್ನೈ ವಿರುದ್ಧ ಮುಂಬೈಗೆ 37 ರನ್ ಗಳ ಗೆಲುವು
ಹಾರ್ದಿಕ್ ಪಾಂಡ್ಯ
Published On :
ಮುಂಬೈ: ಐಪಿಎಲ್‌ ಟಿ-20 ಪಂದ್ಯಾಳಿಯಲ್ಲಿ ಸತತ ಗೆಲುವು ಸಾಧಿಸುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್​  ವಿರುದ್ಧ ಮುಂಬೈ ಇಂಡಿಯನ್ಸ್​ 37 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಧೋನಿ ಪಡೆಯ ಗೆಲುವಿನ ಓಟಕ್ಕೆ ರೋಹಿತ್ ಬಳಗ ಬ್ರೇಕ್ ಹಾಕಿದೆ.
ಇಂದು ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಮುಂಬೈ, ಹಾರ್ದಿಕ್ ಪಾಂಡ್ಯ ಅವರ ಆಲ್‌ರೌಂಡರ್ ಪ್ರದರ್ಶನದ ನೆರವಿನೊಂದಿಗೆ ಎರಡನೇ ಗೆಲುವು ದಾಖಲಿಸಿದೆ. 
ಸೂರ್ಯಕುಮಾರ್ ಯಾದವ್ (59), ಕೃುಣಾಲ್ ಪಾಂಡ್ಯ (42), ಹಾರ್ದಿಕ್ ಪಾಂಡ್ಯ (25*) ಹಾಗೂ ಕೀರಾನ್ ಪೊಲಾರ್ಡ್ (17*) ಉತ್ತಮ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ನಿಗದಿತ  170 ರನ್‌ಗಳನ್ನು ಸೇರಿಸಿತು.
ಗೆಲುವಿಗೆ 171 ರನ್ ಗಳ ಗುರಿ ಬೆನ್ನಟ್ಟಿದ ಚೆನ್ನೈ, ಕೇದರ್ ಜಾಧವ್(58) ಹೋರಾಟದ ಹೊರತಾಗಿಯೂ 133 ರನ್ ಗಳಿಸಲಷ್ಟೇ ಶಕ್ತವಾಯಿತು. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿದ ಹಾರ್ದಿಕ್ ಪಾಂಡ್ಯ ಮುಂಬೈ ಗೆಲುವಿಗೆ ಕಾರಣರಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.