ಯಾರನ್ನು ಬೇಕಾದರೂ ಮುರ್ಖರನ್ನಾಗಿಸಬಹುದು ಆದರೆ ಧೋನಿಯನಲ್ಲ, ಅದಕ್ಕೆ ವಿಡಿಯೋ ಸಾಕ್ಷಿ!
ಇತ್ತೀಚೆಗೆ ಪಂಜಾಬ್ ಕಿಂಗ್ಸ್ ಇಲೆವೆನ್ಸ್ ತಂಡದ ನಾಯಕ ಆರ್. ಅಶ್ವಿನ್ ಮಂಕಡ್ ಔಟ್ ಮಾಡಿ ವಿವಾದಕ್ಕೆ ಗುರಿಯಾಗಿದ್ದರು. ಇದಕ್ಕೆ ತಿರುಗೇಟು ನೀಡಲು ಮುಂಬೈ ತಂಡದ ಬೌಲರ್ ಕೃನಾಲ್ ಪಾಂಡ್ಯ...

Published On :
ಮುಂಬೈ: ಇತ್ತೀಚೆಗೆ ಪಂಜಾಬ್ ಕಿಂಗ್ಸ್ ಇಲೆವೆನ್ಸ್ ತಂಡದ ನಾಯಕ ಆರ್. ಅಶ್ವಿನ್ ಮಂಕಡ್ ಔಟ್ ಮಾಡಿ ವಿವಾದಕ್ಕೆ ಗುರಿಯಾಗಿದ್ದರು. ಇದಕ್ಕೆ ತಿರುಗೇಟು ನೀಡಲು ಮುಂಬೈ ತಂಡದ ಬೌಲರ್ ಕೃನಾಲ್ ಪಾಂಡ್ಯ ಪಂಜಾಬ್ ವಿರುದ್ಧದ ಪಂದ್ಯದ ವೇಳೆ ಮಾಯಾಂಕ್ ಅಗರ್ವಾಲ್ ರನ್ನು ಮಂಕಡ್ ಎಚ್ಚರಿಕೆ ನೀಡಿದ್ದರು. ಆದರೆ ಇದೇ ಹಸ್ತ್ರವನ್ನು ಎಂಎಸ್ ಧೋನಿ ಮೇಲೆ ಮಾಡಲು ಹೋಗಿ ಕೃನಾಲ್ ಮುಖಭಂಗ ಅನುಭವಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ 14ನೇ ಓವರ್ ನಲ್ಲಿ ಕೃನಾಲ್ ಪಾಂಡ್ಯ ಬೌಲಿಂಗ್ ಮಾಡಿದ್ದರು. ಈ ವೇಳೆ ಧೋನಿ ಮುಂದಕ್ಕೆ ಹೋಗುತ್ತಾರೆ ಅಂದುಕೊಂಡು ಮಂಡಕ್ ಮಾಡುವ ಯತ್ನವನ್ನು ಕೃನಾಲ್ ಮಾಡಿದ್ದರು ಅನಿಸುತ್ತೆ. ಆದರೆ ಧೋನಿ ಮಾತ್ರ ತಮ್ಮ ಬ್ಯಾಟ್ ಅನ್ನು ಕ್ರಿಸ್ ನಿಂದ ಹೊರಗೆ ತಂದಿರಲಿಲ್ಲ.
ಇದು ಪ್ರಯತ್ನವೋ ಅಥವಾ ಬೇರೆ ಆಲೋಚನೆಯೋ ಒಟ್ಟಿನಲ್ಲಿ ಕೃನಾಲ್ ಪಾಂಡ್ಯ ಆ ಚೆಂಡನ್ನು ಮಾಡದೆ ಹಿಂದಕ್ಕೆ ಹೋಗಿದ್ದರು. ಈ ವೇಳೆ ಕ್ರೀಡಾಂಗಣದಲ್ಲಿ ಸೇರಿದ್ದ ಪ್ರೇಕ್ಷಕರು ಜೋರಾಗಿ ಕೂಗಿದರು ಈ ವಿಡಿಯೋ ಇದೀಗ ವೈರಲ್ ಆಗಿದೆ.
ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 37 ರನ್ ಗಳಿಗೆ ಗೆಲುವು ಸಾಧಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
MS Dhoniಎಂಎಸ್ ಧೋನಿಆರ್ ಅಶ್ವಿನ್R AshwinCricket Offbeatಕ್ರಿಕೆಟ್ ಸ್ವಾರಸ್ಯKrunal Pandyaಕೃನಾಲ್ ಪಾಂಡ್ಯIPL 2019ಐಪಿಎಲ್ 2019mankadಮಂಕಡ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


